ಯಕೃತ್ತು ಹಾನಿಗೊಳಗಾಗಿದೆ ಎಂದು ಸೂಚಿಸುತ್ತವೆ ಈ 5 ಸಂಕೇತಗಳು, ನಿರ್ಲಕ್ಷಿಸಬೇಡಿ!

Damage Liver Symptoms: ಕೆಲವೊಮ್ಮೆ ನಮ್ಮ ಲೀವರ್ ಗ ಆಗುವ ಹಾನಿ ತಕ್ಷಣವೇ ಪತ್ತೆಯಾಗುತ್ತದೆ, ಆದರೆ ಕೆಲವೊಮ್ಮೆ ಏನೂ ತಿಳಿಯುವುದಿಲ್ಲ. ಹಾಗಾದರೆ, ನಮ್ಮ ಯಕೃತ್ತು ಹಾನಿಗೊಳಗಾಗಿದೆ ಎಂದು ಸೂಚಿಸುವ ಐದು ಲಕ್ಷಣಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.  

ನವದೆಹಲಿ: ಯಕೃತ್ತು ನಮ್ಮ ದೇಹದ ಅವಿಭಾಜ್ಯ ಅಂಗ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆಹಾರದಲ್ಲಿರುವ ಪೋಷಕಾಂಶಗಳನ್ನು ದೇಹದಲ್ಲಿ ಶಕ್ತಿಯನ್ನಾಗಿ ಪರಿವರ್ತಿಸುವ ಕಾರ್ಯ ಯಕೃತ್ತು ಮಾಡುತ್ತದೆ. ಇದಕ್ಕಾಗಿ ಅದು ನಮ್ಮ ದೇಹದಲ್ಲಿ ಇರುವ ರಕ್ತವನ್ನು ಫಿಲ್ಟರ್ ಮಾಡುತ್ತದೆ. ಯಕೃತ್ತು ಹಾನಿಗೊಳಗಾಗಿರುವ ಹಲವು ಪ್ರಕರಣಗಳನ್ನು ನೀವು ನೋಡಿರಬಹುದು. ಆದರೆ, ಕೆಲವೊಮ್ಮೆ ತನ್ನ ಯಕೃತ್ತು ಹಾಳಾಗಿದೆ ಎಂಬುದು ದೀರ್ಘಕಾಲದವರೆಗೆ ರೋಗಿಗೆ ತಿಳಿಯುವುದೇ ಇಲ್ಲ.  ಇಂತಹ ಪರಿಸ್ಥಿತಿಯಲ್ಲಿ ಯಕೃತ್ತು ಕ್ಷೀಣಿಸಿದೆ ಅಥವಾ ಹಾನಿಗೊಳಗಾಗಿದೆ ಎಂಬುದನ್ನು ನಾವು ಕೆಲ ಲಕ್ಷಣಗಳಿಂದ ತಿಳಿದುಕೊಳ್ಳಬಹುದು. ಅದರಲ್ಲಿನ ಪ್ರಮುಖ ಲಕ್ಷಣಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ ಬನ್ನಿ.

1. ವಾಂತಿ
ಪದೇ ಪದೇ ವಾನ್ತಿಯಗುತ್ತಿದ್ದರೆ, ನೀವು ಒಮ್ಮೆ ವೈದ್ಯರನ್ನು ಸಂಪರ್ಕಿಸಬೇಕು, ಏಕೆಂದರೆ ಇದು ಸಾಮಾನ್ಯ ವಾಂತಿಯಾಗಿರುವುದಿಲ್ಲ. ಸತತವಾಗಿ ಹಲವಾರು ದಿನಗಳ ವರೆಗೆ ವಾಂತಿಯ ಸಮಸ್ಯೆ ಮುಂದುವರೆದರೆ ಅದು ಯಕೃತ್ತಿನ ಹಾನಿಯ ಲಕ್ಷಣವಾಗಿದೆ.

2. ಹಠಾತ್ ಹಸಿವು ಕಡಿಮೆಯಾಗುವುದು:

ಯಕೃತ್ತು ಹಾನಿಗೊಳಗಾದ ಹೆಚ್ಚಿನ ಜನರು ಹಸಿವಿನ ಬಗ್ಗೆ ದೂರು ನೀಡುತ್ತಾರೆ. ಈ ದೂರು 15 ದಿನಗಳವರೆಗೆ ಮುಂದುವರೆದರೆ, ನೀವು ಅದನ್ನು ಲಘುವಾಗಿ ಪರಿಗಣಿಸಬಾರದು, ಏಕೆಂದರೆ ಇದು ಕೂಡ ಯಕೃತ್ತು ಹಾನಿಗೊಳಗಾದ ಒಂದು ಲಕ್ಷಣವಾಗಿದೆ.

3. ಆಯಾಸ ಉಂಟಾಗುತ್ತದೆ
ಕೆಲವೊಮ್ಮೆ ನಿಮಗೆ ತುಂಬಾ ಆಯಾಸದ ಅನುಭವ ಉಂಟಾಗುತ್ತದೆ ಮತ್ತು ಹಲವು ಉಪಾಯಗಳನ್ನು ಕೈಗೊಂಡರೂ ಕೂಡ ಅದು ಗುಣಮುಖವಾಗುವುದಿಲ್ಲ. ಇಂತಹ ಪರಿಷ್ಟಿತಿಯಲ್ಲಿ ತಕ್ಷಣವೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಸತದ ಆಯಾಸದ ಭಾವನೆ ಕೂಡ ಯಕೃತ್ತು ಹಾನಿಗೊಳಗಾಗಿದೆ ಎಂಬುದರ ಸಂಕೇತವಾಗಿರಬಹುದು.

4. ಅತಿಸಾರ
ವಾತಾವರಣದಲ್ಲಾಗುವ ಬದಲಾವಣೆಯಿಂದ ಅಥವಾ ಹೊಟ್ಟೆಯ ತೊಂದರೆಯಿಂದ ನೀವು ಅನೇಕ ಬಾರಿ ಅತಿಸಾರದ ಅನುಭವ ಉಂಟಾಗುತ್ತದೆ, ಆದರೆ ಇದು ಸಾಮಾನ್ಯ ಅತಿಸಾರವಾಗಿರದೇ ಇರಬಹುದು ಎಂಬುದನ್ನು ನೆನಪಿನಲ್ಲಿಡಿ. ಇಂತಹ ಪರಿಸ್ಥಿತಿಯಲ್ಲಿ, ನೀವು ಜಾಗ್ರತೆವಹಿಸಬೇಕು, ಏಕೆಂದರೆ ಇದು ಕೂಡ ಯಕೃತ್ತಿನ ಹಾನಿಯ ಒಂದು ಲಕ್ಷಣ.

5. ತೂಕ ಇಳಿಕೆ
ಇದ್ದಕ್ಕಿದ್ದಂತೆ ದೇಹದ ತೂಕವು ಕಡಿಮೆಯಾಗಲು ಆರಂಭಿಸಿದರೆ ಮತ್ತು ಅದರ ವೇಗವು ನಿರಂತರವಾಗಿ ಹೆಚ್ಚುತ್ತಿದ್ದರೆ, ತಕ್ಷಣವೇ ಎಚ್ಚೆತ್ತುಕೊಳ್ಳಿ, ಏಕೆಂದರೆ ಹಲವು ಬಾರಿ ಯಕೃತ್ತು ಹಾನಿಗೊಳಗಾದರೂ, ತೂಕವು ವೇಗವಾಗಿ ಇಳಿಕೆಯಾಗಲು ಪ್ರಾರಂಭಿಸುತ್ತದೆ.

(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದು ಹಾಗೂ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಚಿಕಿತ್ಸೆ ಪಡೆಯಲು ಮರೆಯಬೇಡಿ. ಈ ಮಾಹಿತಿಯನ್ನು ಸಮಗ್ರ ಸುದ್ದಿ ಪುಷ್ಠಿಕರಿಸುವುದಿಲ್ಲ)

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/health/these-5-symptoms-indicate-your-liver-is-damaged-do-not-ignore-158698

Leave a Reply

Your email address will not be published. Required fields are marked *