Pumpkin seeds Benefits: ಆಹಾರದಲ್ಲಿ ಕುಂಬಳಕಾಯಿಯನ್ನು ಸೇರಿಸುವುದು ತುಂಬಾ ಪ್ರಯೋಜನಕಾರಿ ಅಂತ ಎಲ್ಲರಿಗೂ ಗೊತ್ತಿದೆ. ಇದು ಪೌಷ್ಟಿಕಾಂಶದ ತರಕಾರಿ ಮಾತ್ರವಲ್ಲ, ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಸಹ. ಈ ಬೀಜಗಳು ವಿಟಮಿನ್, ಪ್ರೋಟೀನ್ ಮತ್ತು ಒಮೆಗಾ 6 ಹಾಗೂ ಒಮೆಗಾ 3 ನಂತಹ ಜೈವಿಕ ಸಕ್ರಿಯ ರಾಸಾಯನಿಕಗಳಿಂದ ತುಂಬಿವೆ.
Pumpkin seeds for memory power : ಕುಂಬಳಕಾಯಿಯನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೂ ಅಂತ ಯಾವತ್ತೂ ಅದರ ಬೀಜಗಳ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಹೊರಗೆ ಎಸೆದ್ರೆ ಸಸಿ ಆಗುತ್ತೆ ಅಂತ ಹಿತ್ತಲಕ್ಕೆ ಎಸೆಯುವ ಮುನ್ನ ಈ ಬೀಜಗಳ ಮಹತ್ವವನ್ನು ಅರಿಯುವುದು ತುಂಬಾ ಅವಶ್ಯಕ. ಏಕೆಂದರೆ ಕುಂಬಳಕಾಯಿ ಬೀಜಗಳು ಜೀವಸತ್ವಗಳು, ಪ್ರೋಟೀನ್ ಮತ್ತು ಒಮೆಗಾ 6 ಮತ್ತು ಒಮೆಗಾ 3 ರ ಮೂಲವಾಗಿದೆ, ಇದು ಉತ್ತಮ ಸ್ಮರಣಾ ಶಕ್ತಿ ಹೆಚ್ಚಿಸುತ್ತವೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..
ಜೀವಸತ್ವಗಳು, ಪ್ರೋಟೀನ್‌ಗಳು ಮತ್ತು ಜೈವಿಕ ಸಕ್ರಿಯ ರಾಸಾಯನಿಕಗಳಿಂದ ಸಮೃದ್ಧವಾಗಿರುವ ಕುಂಬಳಕಾಯಿ ಬೀಜಗಳು ಸ್ಮರಣಾ ಶಕ್ತಿಯನ್ನು ಸುಧಾರಿಸುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ವರದಿಗಳ ಪ್ರಕಾರ, ಮಧುಮೇಹ ಇರುವವರಿಗೆ ಕುಂಬಳಕಾಯಿ ಬೀಜಗಳು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಹೆಚ್ಚುವರಿಯಾಗಿ, ಈ ಬೀಜಗಳ ಸೇವನೆಯು ಚರ್ಮದ ಆರೋಗ್ಯ ಸುಧಾರಣೆಗೆ ಒಳ್ಳೆಯದರು ಅಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.
ಕುಂಬಳಕಾಯಿ ಬೀಜಗಳು ಫೈಬರ್, ಮೆಗ್ನೀಸಿಯಮ್, ಜೀವಸತ್ವಗಳು, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್, ಸೋಡಿಯಂ, ಕಾರ್ಬೋಹೈಡ್ರೇಟ್‌ಗಳು, ಥಯಾಮಿನ್ ಮತ್ತು ಸತು ಸೇರಿದಂತೆ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಕುಂಬಳಕಾಯಿ ಬೀಜಗಳು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಹೊಟ್ಟೆಯ ಹುಳುಗಳನ್ನು ತೆಗೆದುಹಾಕುತ್ತದೆ.
ಹೆಚ್ಚಿನ ನಾರಿನಂಶವನ್ನು ಹೊಂದಿರುವ ಕುಂಬಳಕಾಯಿ ಬೀಜಗಳ ಸೇವನೆಯು ಹೊಟ್ಟೆಯನ್ನು ತುಂಬುವ ಮೂಲಕ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಕುಂಬಳಕಾಯಿ ಬೀಜಗಳು ಪುರುಷರ ಲೈಂಗಿಕ ಆರೋಗ್ಯ ಮತ್ತು ಕಾಮವನ್ನು ಹೆಚ್ಚಿಸುವಲ್ಲಿ ಪಾತ್ರವಹಿಸುತ್ತವೆ.
ಲೈಂಗಿಕ ಆರೋಗ್ಯದಲ್ಲಿ ಕುಂಬಳಕಾಯಿ ಬೀಜಗಳ ಪಾತ್ರ ದೊಡ್ಡದು. ಈ ಬೀಜಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು, ಜೀರ್ಣಕ್ರಿಯೆಯನ್ನು ಹೆಚ್ಚಿಸಲು, ಮೂಳೆಗಳನ್ನು ಬಲಪಡಿಸಲು ಪ್ರಯೋಜನಕಾರಿಯಾಗಿದೆ. ಇದು ಮೂತ್ರದ ಸೋಂಕು ಮತ್ತು ಮೂತ್ರಕೋಶದ ಕಲ್ಲುಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1