ಇಲಿಗಳು ಮನೆಯಲ್ಲಿ ಭಯವನ್ನು ಸೃಷ್ಟಿಸಿವೆಯೇ ? ಚಿಂತಿಸಬೇಡಿ ಈ ಟಿಪ್ಸ್‌ ಫಾಲೋ ಮಾಡಿ..

Rat control tips: ಮನೆಯಲ್ಲಿ ಇಲಿಗಳ ಕಾಟದಿಂದ ಅನೇಕರು ಬೇಸತ್ತು ಹೋಗಿರುತ್ತಾರೆ. ಚಿಂತಿಸಬೇಡಿ ಅಂತವರಿಗಾಗಿಯೇ  ಕೆಲವು ಟಿಪ್ಸ್‌ಗಳಿವೆ. ಇದನ್ನು ಬಳಸಿದಲ್ಲಿ ಶಾಶ್ವತವಾಗಿ ಇಲಿಗಳು ಮನೆ ಬಿಟ್ಟು ಓಡಿ ಹೋಗುತ್ತವೆ.

  • ಲವಂಗದ ಎಲೆಯೂ ಇಲಿಗಳ ಶತ್ರು ಎಂದೇ ಹೇಳಬಹುದು.
  • ಈರುಳ್ಳಿ ಇಟ್ಟ ಜಾಗದಿಂದ ಇಲಿಗಳು ಓಡಿ ಹೋಗುತ್ತವೆ.
  • ಪುದೀನದ ಸುಗಂಧವು ಇಲಿಗಳನ್ನು ಒಂದು ಘಳಿಗೆಯು ನಿಲ್ಲುವಂತೆ ಮಾಡುವುದಲ್ಲ.

Rat control tips: ಇಲಿಗಳು ಕೊಳಕು ಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಇಂದಿನ ದಿನಗಳಲ್ಲಿ ಶುಚಿಯಾಗಿದ್ದರೂ ಇಲಿಗಳು ಮನೆಯೊಳ

ಗೆ ಬಿಡಾರ ಹೂಡುತ್ತಿವೆ. ಬಿಡಾರ ಹೂಡುವುದಷ್ಟೇ ಅಲ್ಲ, ಮನೆಯನ್ನಯ ಎಷ್ಟು ಸ್ವಚ್ಛಗೊಳಿಸಿದರೂ  ಇಲಿಗಳು ಕಾಡುತ್ತಲೇ ಇರುತ್ತವೆ. ಹೆಚ್ಚಿನ ಜನರು ಈ ಸಮಸ್ಯೆಯಿಂದ ತೊಂದರೆಗೆ ಒಳಗಾಗಿದ್ದಾರೆ. ಕೆಲವೊಮ್ಮೆ ಮನೆಯಲ್ಲಿ ಇಲಿಗಳ ಭಯವು ತುಂಬಾ ಹೆಚ್ಚಾಗುತ್ತದೆ, ಯಾವುದೇ ವಸ್ತುವು ಸುರಕ್ಷಿತವಾಗಿ ಉಳಿಯುವುದಿಲ್ಲ. ಇದನ್ನು ಹೋಗಲಾಡಿಸಲು ಜನರು ಇಲಿ ಕೊಲ್ಲುವುದರಿಂದ ಹಿಡಿದು ಪಂಜರದವರೆಗೆ ಮೊರೆ ಹೋಗುತ್ತಾರೆ. ಆದರೆ ಇನ್ನೂ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಆದರೆ ಮನೆಯಲ್ಲೇ ಇಲಿಗಳನ್ನು ತೊಡೆದು ಹಾಕಲು ಈ ಕೆಲವು ಟಿಪ್ಸ್‌ಗಳನ್ನು ಫಾಲೋ ಮಾಡಿ ಶಾಶ್ವತವಾಗಿ ಇಲಿಗಳು ಮನೆಬಿಟ್ಟು ಓಡಿಹೋಗುತ್ತವೆ.

ಇಲಿಗಳನ್ನು ತೊಡೆದುಹಾಕುವುದೇಗೆ?

ತಂಬಾಕು: ತಂಬಾಕು ಅನೇಕ ಅಮಲು ಪದಾರ್ಥಗಳನ್ನು ಒಳಗೊಂಡಿದೆ. ಇದನ್ನು ತಿಂದ ನಂತರ ಇಲಿಗಳು ಅಸಮಾಧಾನಗೊಂಡು ಮನೆಯಿಂದ ಓಡಿ ಹೋಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಇಲಿಗಳನ್ನು ತೊಡೆದುಹಾಕಲು ನೀವು ತಂಬಾಕು ಅನ್ನು ಬಳಸಬಹುದು. ಈ ರೀತಿ ಮಾಡುವುದರಿಂದ ಹೆಚ್ಚು ಕಾಲ ಇಲಿಗಳು ಮನೆಯಲ್ಲಿ ಉಳಿಯುವುದಿಲ್ಲ.

ಲವಂಗದ ಎಲೆ: ಈ ಎಲೆಯೂ ಇಲಿಗಳ ಶತ್ರು ಎಂದೇ ಹೇಳಬಹುದು. ಇಲಿಗಳು ಅದರ ವಾಸನೆಗೆ ಒಂದು ಕ್ಷಣವು ನಿಲ್ಲುವುದಿಲ್ಲ. ನಿಮಗೂ ಮನೆಯಲ್ಲಿ ಇಲಿಗಳಿಂದ ತೊಂದರೆಯಾಗುತ್ತಿದ್ದರೆ ಇಲಿಗಳು ಬರುವ ಜಾಗದಲ್ಲಿ ಬೇವಿನ ಎಲೆ ಅಥವಾ ಲವಂಗದ ಎಲೆಗಳನ್ನು ಇಡಿ.

ಈರುಳ್ಳಿ: ಇಲಿಗಳು ಈರುಳ್ಳಿ ವಾಸನೆಗಳನ್ನು ಇಷ್ಟಪಡುವುದಿಲ್ಲ ಎನ್ನುವ ವಿಷಯ ನಿಮಗೆ ಗೊತ್ತಿದಿಯೇ? ಈರುಳ್ಳಿ ಇಟ್ಟ ಜಾಗದಿಂದ ಇಲಿಗಳು ಓಡಿ ಹೋಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನೀವು ಇಲಿಗಳನ್ನು ಓಡಿಸಲು ಈರುಳ್ಳಿ ಬಳಸಬಹುದು. ಇಲಿಗಳು ಹೆಚ್ಚು ಓಡಾಡುವ ಜಾಗಗಳಲ್ಲಿ ಈರುಳ್ಳಿಯ ತುಂಡನ್ನು ಇಡಿ. ಕೆಲವು ದಿನ ಹೀಗೆ ಮಾಡುವುದರಿಂದ ಬೇಗ ಓಡಿ ಹೋಗುತ್ತವೆ.

ಪುದೀನ: ಪುದೀನದ ಸುಗಂಧವು ಇಲಿಗಳನ್ನು ಒಂದು ಘಳಿಗೆಯು ನಿಲ್ಲುವಂತೆ ಮಾಡುವುದಲ್ಲ. ಪುದೀನಾ ಎಲೆಗಳನ್ನು ಹತ್ತಿ ಅಥವಾ ಪೇಪರ್‌ನಲ್ಲಿ ಸುತ್ತಿ ಮನೆಯಲ್ಲಿ ಇಲಿಗಳು ಹೆಚ್ಚಾಗಿ ಬರುವ ಜಾಗದಲ್ಲಿ ಇಡುವುದರಿಂದ ಬಹು ಬೇಗನೇ ಮನೆಯಿಂದ ಓಡಿ ಹೋಗುತ್ತವೆ.

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸಿಲ್ಲ.)

Source : https://zeenews.india.com/kannada/lifestyle/have-rats-created-fear-in-the-house-dont-worry-just-follow-these-tips-178439

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *