
ನುಗ್ಗೆ ಕಾಯಿ ಮಾತ್ರವಲ್ಲ ನುಗ್ಗೆ ಸೊಪ್ಪು ಕೂಡ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲೂ ನೀವು 30, 40 ವರ್ಷ ದಾಟಿದ ಬಳಿಕ ನಿತ್ಯ ನುಗ್ಗೆ ಸೊಪ್ಪನ್ನು ಜ್ಯೂಸ್ ಆಗಿ ಸೇವಿಸುವುದರಿಂದ ಚಿರ ಯೌವನವನ್ನು ಪಡೆಯುತ್ತೀರಿ. ಮಾತ್ರವಲ್ಲ, ಇದರಿಂದ ಆರೋಗ್ಯಕ್ಕೆ ಐದು ಅದ್ಭುತ ಪ್ರಯೋಜನಗಳು ಕೂಡ ಲಭ್ಯವಾಗಲಿವೆ. ಅವುಗಳೆಂದರೆ
ರಕ್ತ ಶುದ್ಧೀಕರಣ:
ನಿಯಮಿತವಾಗಿ ನುಗ್ಗೆ ಸೊಪ್ಪಿನ ಸೇವನೆಯು ರಕ್ತವನ್ನು ನಿರ್ವಿಷಗೊಳಿಸುವ ಮೂಲಕ ರಕ್ತ ಶುದ್ಧೀಕರಣಕ್ಕೆ ಪ್ರಯೋಜನಕಾರಿಯಾಗಿದೆ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ:

ನುಗ್ಗೆ ಸೊಪ್ಪಿನ ರಸವು ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸಬಲ್ಲ ಶಕ್ತಿಯನ್ನು ಹೊಂದಿದೆ. ನಿಯಮಿತವಾಗಿ ನುಗ್ಗೆಸೊಪ್ಪಿನ ಜ್ಯೂಸ್ ಸೇವಿಸುವುದರಿಂದ ಹೊಟ್ಟೆ ಹುಣ್ಣಿನಂತಹ ಅಪಾಯದಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ.
ಬಲಿಷ್ಠ ಮೂಳೆ:
ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಹೇರಳವಾಗಿ ಕಂಡು ಬರುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ನುಗ್ಗೆ ಸೊಪ್ಪನ್ನು ಬಳಸುವುದರಿಂದ ಮೂಳೆಗಳು ಬಲಿಷ್ಠವಾಗುವುದರ ಜೊತೆಗೆ ಇದು ಮೂಳೆಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.
ಮಧುಮೇಹ:

ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿಯನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ ಎಂದರೆ ಮಧುಮೇಹ. ನುಗ್ಗೆ ಸೊಪ್ಪು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ತುಂಬಾ ಸಹಕಾರಿಯಾಗುತ್ತದೆ.
ತೂಕ ಇಳಿಕೆ:

ನುಗ್ಗೆ ಸೊಪ್ಪಿನಲ್ಲಿ ದೇಹಕ್ಕೆ ಪ್ರಯೋಜನಕಾರಿಯಾದ ಹಲವು ಪೋಷಕಾಂಶಗಳಿವೆ. ಇದನ್ನು ಜ್ಯೂಸ್ ರೂಪದಲ್ಲಿ ಸೇವಿಸುವುದರಿಂದ ಇದು ನಿಮ್ಮ ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0