Earthquake in Rajasthan: ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ರಾಜಸ್ಥಾನದ ಜೈಪುರದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.4 ದಾಖಲಾಗಿದೆ. ಭೂಮಿ ಕಂಪಿಸುತ್ತಿದ್ದಂತೆ ಮಲಗಿದ್ದ ಜನರು ಭಯಭೀತರಾಗಿ ಮನೆಗಳಿಂದ ಓಡಿ ಹೊರಬಂದಿದ್ದಾರೆ.
![](https://samagrasuddi.co.in/wp-content/uploads/2023/07/image-188.png)
Earthquake in Jaipur Rajasthan: ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ರಾಜಸ್ಥಾನದ ಜೈಪುರದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಭೂಕಂಪದ ತೀವ್ರತೆಯನ್ನು 4.4 ರಿಕ್ಟರ್ ಮಾಪಕದಲ್ಲಿ ಅಳೆಯಲಾಗಿದೆ. ಭೂಕಂಪನದ ಅಬ್ಬರ ಶುರುವಾಗುತ್ತಿದ್ದಂತೆಯೇ ಮಲಗಿದ್ದ ಜನರು ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ. ಭೂಕಂಪವು ಎಷ್ಟು ಪ್ರಬಲವಾಗಿದೆಯೆಂದರೆ ಅದರ ಕಂಪನಗಳು ದೆಹಲಿ-ಎನ್‌ಸಿಆರ್‌ನಲ್ಲಿಯೂ ಕಂಡುಬಂದವು.
ಮುಂಜಾನೆ 3.39ಕ್ಕೆ ಕಂಪಿಸಿದ ಜೈಪುರ :
ಭೂಕಂಪಗಳನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಯಾದ ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್‌ಸಿಎಸ್) ಪ್ರಕಾರ, ಶುಕ್ರವಾರ ಮುಂಜಾನೆ 3.39 ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ. ಆ ಸಮಯದಲ್ಲಿ ಜೈಪುರದ ಜನರು ಗಾಢ ನಿದ್ದೆಯಲ್ಲಿದ್ದರು. ನಂತರ ಪ್ರಬಲ ಭೂಕಂಪ (ಜೈಪುರದಲ್ಲಿ ಭೂಕಂಪ) ಇಡೀ ನಗರವನ್ನು ನಡುಗಿಸಿತು. NCS ಪ್ರಕಾರ, ಈ ಭೂಕಂಪವು 4.4 ತೀವ್ರತೆ ಹೊಂದಿತ್ತು. ಭೂಕಂಪನದಿಂದಾಗಿ ಮನೆಗಳೆಲ್ಲ ನಡುಗಿದವು. ಕೆಲವು ನಿಮಿಷಗಳ ನಂತರ 3.1 ತೀವ್ರತೆಯಲ್ಲಿ ಮತ್ತೆ ಭೂಮಿ ಕಂಪಿಸಿತು.
ಸುತ್ತಮುತ್ತಲಿನ ಜಿಲ್ಲೆಗಳೂ ಭೂಕಂಪದ ಅನುಭವ:
ರಾಸ್ಪ್ಬೆರಿ ಶೇಕ್ ಎಂಬ ಖಾಸಗಿ ಭೂಕಂಪನ ಸಂಸ್ಥೆಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಜೈಪುರದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಈ ಭೂಕಂಪದ ಅನುಭವವು ಸುಮಾರು 35 ಕಿಮೀ ದೂರದಲ್ಲಿರುವ ಬಾಸಿ, 51 ಕಿಮೀ ದೂರದಲ್ಲಿರುವ ಸಂಭಾರ್, 53 ಕಿಮೀ ದೂರದಲ್ಲಿರುವ ಮನೋಹರಪುರ ಮತ್ತು 55 ಕಿಮೀ ದೂರದಲ್ಲಿರುವ ರಿಂಗಾಸ್‌ನಲ್ಲಿಯೂ ಆಗಿದೆ. ಇದರೊಂದಿಗೆ ದೂರದ ದೌಸಾ, ಶಹಪುರ, ನಿವಾಯಿ ಮುಂತಾದ ಪ್ರದೇಶಗಳಲ್ಲಿನ ಮನೆಗಳೂ ಕಂಪನದ ಅನುಭವವಾಗಿದೆ.
ದೆಹಲಿ-ಎನ್‌ಸಿಆರ್‌ನಲ್ಲೂ ಕಂಪನ:
ಜೈಪುರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಮನಗಳಲ್ಲಿನ ವಸ್ತುಗಳು ಸಹ ಅಸ್ತವ್ಯಸ್ತವಾಗಿವೆ. ಗಾಢ ನಿದ್ದೆಯಲ್ಲಿ ಮಲಗಿದ್ದ ಜನರು ಏಕಾಏಕಿ ಗಾಬರಿಯಿಂದ ಎದ್ದು ಕುಳಿತಿದ್ದಾರೆ. ಈ ಭೂಕಂಪದ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಭೂಕಂಪದ ಪರಿಣಾಮ ದೆಹಲಿ-ಎನ್‌ಸಿಆರ್‌ನಲ್ಲೂ ಕಂಡುಬಂದಿದೆ. ಭೂಕಂಪದಿಂದಾಗಿ ಎನ್‌ಸಿಆರ್‌ನಲ್ಲೂ ಭೂಮಿ ನಡುಗಿದೆ. ಆದರೆ, ಎಪಿಕ್ ಸೆಂಟರ್‌ನಿಂದ ದೂರವಿರುವುದರಿಂದ ಜನರಿಗೆ ಹೆಚ್ಚಿನ ಅನುಭವವಾಗಲಿಲ್ಲ.