
Health Benefits:ಅಂಜೂರ ಪೋಷಕಾಂಶಗಳ ನಿಧಿಯಾಗಿದೆ.ಇದು ಸೂಪರ್ಫುಡ್ನಂತೆ ಇದ್ದು, ಕೆಲ ಗುಣಗಳನ್ನು ಮಾತ್ರ ಹೊಂದಿರತೆ ಅನೇಕ ರೀತಿ ಆರೋಗ್ಯಕರ ಪೌಷ್ಟಿಕಾಂಶ ಹೊಂದಿದೆ. ವಿಶೇಷವಾಗಿ ಬೇಸಿಗೆಯಲ್ಲಿ ದೇಹಕ್ಕೆ ತಂಪು ಹಾಗೂ ಶಕ್ತಿ ಸೇರಿ ಅನೇಕ ಆರೋಗ್ಯ ಪ್ರಯೋಜನೆಗಳನ್ನು ನೀಡುತ್ತದೆ.
ತಾಜಾ ಹಾಗೂ ಒಣ ರೂಪದಲ್ಲಿ ಸೇರಿದಂತೆ ಯಾವುದೇ ರೀತಿಯಲ್ಲಿ ಇದನ್ನು ತಿನ್ನಬಹುದು.
1.ಜೀರ್ಣಕ್ರಿಯೆ ಸುಧಾರಣೆ
ಅಂಜೂರ ಫೈಬರ್ನಲ್ಲಿ ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆ ಕಾರ್ಯಕ್ರಗಳನ್ನು ಸುಧಾರಿಸುತ್ತದೆ. ಮಲಬದ್ಧತೆ, ಅಜೀರ್ಣ ಹಾಗೂ ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಅಂಜೂರ ಪರಿಹಾರ ನೀಡುತ್ತದೆ.
2. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಅಂಜೂರವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಅದು ದೇಹವನ್ನು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
3.ಮೂಳೆಗಳ ಬಲ
ಅಂಜೂರದಲ್ಲಿ ಕ್ಯಾಲ್ಸಿಯಂ, ಮೇಗ್ನಿಸಿಯಂ ಹಾಗೂ ರಂಜಕದಂತಹ ಪೋಷಕಾಂಶಗಳು ಅಧಿಕವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
4.ತೂಕ ಇಳಿಸಲು ಸಹಾಯ
ಅಂಜೂರವು ಕಡಿಮೆ ಕ್ಯಾಲೋರಿಗಳನ್ನು ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿದ್ದು, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನೆನೆಸಿದ ಅಂಜೂರವನ್ನು ತಿನ್ನುವುದು ತೂಕ ಇಳಿಸಲು ಸಹಾಯ ಮಾಡುತ್ತದೆ ಏಕೆಂದರೆ ಇದು ಫೈಬರ್ ಅನ್ನು ಹೊಂದಿರುತ್ತದೆ. ಫೈಬರ್ ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುತ್ತದೆ, ಇದು ನಿಮ್ಮನ್ನು ಆಗಾಗ್ಗೆ ತಿನ್ನುವುದನ್ನು ತಡೆಯುತ್ತದೆ.
5.ರಕ್ತದೊಡದಲ್ಲಿ ನಿಲ್ಲಿಸುವಲ್ಲಿ ಸಹಕಾರಿ
ಅಂಜೂರವು ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಅಂಜೂರವು ಹೃದಯ ರೋಗಿಗಳಿಗೆ ಸಹ ತುಂಬಾ ಪ್ರಯೋಜಕಾರಿಯಾಗಿದೆ.(ಏಜೆನ್ಸೀಸ್)
Vijayavani
Views: 17