Roasted Chana Benefits: ಹುರಿಗಡಲೆ ತಿನ್ನುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಾಗುತ್ತದೆ. ಇನ್ನು ಹುರಿಗಡಲೆ ತಿನ್ನುವುದಕ್ಕೆ ರುಚಿ ಕೂಡಾ. ಹಾಗಾಗಿ ಅನೇಕ ಮಂದಿ ಈ ಹುರಿಗಡಲೆಯನ್ನು ತಿನ್ನುತ್ತಾರೆ.

- ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಆಹಾರದಲ್ಲಿ ಕೆಲವು ಸೂಪರ್‌ಫುಡ್‌ಗಳನ್ನು ಸೇರಿಸಿಕೊಳ್ಳಬೇಕು.
- ಇದು ದೇಹವನ್ನು ಆರೋಗ್ಯಕರವಾಗಿಡಲು ಬಹಳಷ್ಟು ಸಹಾಯ ಮಾಡುತ್ತದೆ.
- ಹುರಿಗಡಲೆ ತಿನ್ನುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಾಗುತ್ತದೆ.
Roasted Chana Benefits : ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಆಹಾರದಲ್ಲಿ ಕೆಲವು ಸೂಪರ್‌ಫುಡ್‌ಗಳನ್ನು ಸೇರಿಸಿಕೊಳ್ಳಬೇಕು. ಈ ಸೂಪರ್‌ಫುಡ್‌ಗಳಲ್ಲಿ ಹುರಿಗಡಲೆ ಕೂಡಾ ಒಂದು. ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣವು ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ದೇಹವನ್ನು ಆರೋಗ್ಯಕರವಾಗಿಡಲು ಬಹಳಷ್ಟು ಸಹಾಯ ಮಾಡುತ್ತದೆ. ಹುರಿಗಡಲೆ ತಿನ್ನುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಾಗುತ್ತದೆ. ಇನ್ನು ಹುರಿಗಡಲೆ ತಿನ್ನುವುದಕ್ಕೆ ರುಚಿ ಕೂಡಾ. ಹಾಗಾಗಿ ಅನೇಕ ಮಂದಿ ಈ ಹುರಿಗಡಲೆಯನ್ನು ತಿನ್ನುತ್ತಾರೆ. ಪ್ರತಿದಿನ ಒಂದು ಮುಷ್ಠಿ ಹುರಿಗಡಲೆ ಸೇವಿಸಿದರೆ, ದೇಹವು ಅನೇಕ ಪ್ರಯೋಜನಗಳನ್ನು ಪಡೆಯಬಹುದು.
1. ಸಕ್ಕರೆ ಮಟ್ಟ ನಿಯಂತ್ರಣದಲಿರುತ್ತದೆ : ಮದುಮೇಹಿಗಳು ತಮ್ಮ ಆಹಾರದಲ್ಲಿ ಹುರಿಗಡಲೆ ಸೇರಿಸಿಕೊಳ್ಳಬೇಕು. ಹುರಿಗಡಲೆ ರಕ್ತದಲ್ಲಿನ ಗ್ಲೂಕೋಸ್ ಅನ್ನು ಹೀರಿಕೊಳ್ಳುತ್ತದೆ. ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಸಕ್ಕರೆಯನ್ನು ನಿಯಂತ್ರಿಸಲು, ಪ್ರತಿದಿನ ಒಂದು ಮುಷ್ಠಿ ಹುರಿಗಡಲೆ ತಿಂದರೆ ಸಾಕು.
2. ಮಲಬದ್ಧತೆಯಿಂದ ಪರಿಹಾರ :
ಹೊಟ್ಟೆ ಸ್ವಚ್ಛವಾಗಿಲ್ಲದಿದ್ದರೆ ಅಥವಾ ಮಲಬದ್ಧತೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಹುರಿಗಡಲೆ ಔಷಧಿಯಾಗಿ ಕೆಲಸ ಮಾಡುತ್ತದೆ. ಹುರಿಗಡಲೆಯಲ್ಲಿ ಹೇರಳವಾದ ನಾರಿನಂಶವಿದ್ದು ಇದು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
3. ರಕ್ತದ ಕೊರತೆ ಸರಿದೂಗಿಸುತ್ತದೆ :
ಹುರಿಗಡಲೆಯಲ್ಲಿ ಕಬ್ಬಿಣವು ಹೇರಳವಾಗಿ ಕಂಡುಬರುತ್ತದೆ. ದೇಹದಲ್ಲಿ ರಕ್ತದ ಕೊರತೆಯಿದ್ದರೆ ಪ್ರತಿದಿನ ಒಂದು ಹಿಡಿ ಹುರಿಗಡಲೆ ತಿನ್ನಿ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ ಮತ್ತು ರಕ್ತಹೀನತೆಯೂ ಕಡಿಮೆಯಾಗುತ್ತದೆ.
4. ತೂಕ ಇಳಿಕೆಗೆ ಸಹಕಾರಿ :
ಹುರಿಗಡಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್ ಕಂಡುಬರುತ್ತದೆ. ಇದನ್ನು ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ. ಹಾಗಾಗಿ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದು ದೇಹ ತೂಕ ಹೆಚ್ಚಿಸಲು ಆವಕಾಶ ಮಾಡುವುದಿಲ್ಲ. ನಿಮ್ಮ ದೇಹದ ಬೊಜ್ಜು ಕಡಿಮೆ ಮಾಡಲು ಬಯಸಿದರೆ ಆಹಾರದಲ್ಲಿ ಹುರಿಗಡಲೆ ಸೇವಿಸಬೇಕು.
5. ರೋಗನಿರೋಧಕ ಶಕ್ತಿ ಹೆಚ್ಚಳ :
ಚಳಿಗಾಲದಲ್ಲಿ, ಶೀತ, ಜ್ವರ ಮತ್ತು ಕೆಮ್ಮಿನಂತಹ ಋತುಮಾನದ ಕಾಯಿಲೆಗಳು ಹೆಚ್ಚಾಗಿ ಕಾಡುತ್ತವೆ. ಈ ಕಾಯಿಲೆಗಳಿಂದ ದೂರವಿರಲು, ದೈನಂದಿನ ಆಹಾರದಲ್ಲಿ ಒಂದು ಹಿಡಿ ಹುರಿಗಡಲೆ ಸೇರಿಸಿಕೊಳ್ಳಬೇಕು.
(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.)
Source: https://zeenews.india.com/kannada/health/must-have-roasted-channa-to-get-these-benefits-179737
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
ಸಮಗ್ರಸುದ್ದಿ ವ್ಯಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/KnDIfiBURQ9G5sLEJLqshk
Views: 0