ಬರೀ ಹೊಟ್ಟೆಯಲ್ಲಿ ವಾರಕ್ಕೆ ಮೂರಾದ್ರೂ ಪೇರಲ ಎಲೆ ತಿನ್ನಿ… ಈ ಕಾಯಿಲೆಗಳಿಗೆ ಹೇಳಿ ಶಾಶ್ವತವಾಗಿ ಗುಡ್ ಬೈ!

Health Benefits Of Guava Leaves: ಚಳಿಗಾಲ ಅದಾಗಲೇ ಪ್ರಾರಂಭವಾಗಿದೆ. ಈ ಋತುವಿನಲ್ಲಿ ಪೇರಲ ಹಣ್ಣು ಹೇರಳವಾಗಿ ದೊರಕುವ ಕಾರಣ ಜನರು ಹೆಚ್ಚಾಗಿ ಖರೀದಿಸಿ ಸೇವಿಸುತ್ತಾರೆ. ಆದರೆ ಪೇರಲ ಮಾತ್ರವಲ್ಲ, ಇದರ ಎಲೆಯಲ್ಲಿಯೂ ಅದ್ಭುತ ಆರೋಗ್ಯ ಪ್ರಯೋಜನವಿದೆ ಎಂದರೆ ನಂಬುವಿರಾ?

ಪೇರಲ ಎಲೆಗಳು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಅದರಲ್ಲೂ ಮುಂಜಾನೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿದು ನಂತರ ಬರೀ ಹೊಟ್ಟೆಯಲ್ಲಿ ಪೇರಲ ಎಲೆಗಳನ್ನು ತಿಂದರೆ ಸಿಗುವ ಪ್ರಯೋಜನ ಅಷ್ಟಿಷ್ಟಲ್ಲ.  

ಪೇರಲ ಎಲೆಗಳಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇದೇ ಕಾರಣದಿಂದ ಇವುಗಳನ್ನು ಸೇವಿಸಿದರೆ, ತ್ವಚೆಯ ಜೊತೆಗೆ ಆರೋಗ್ಯವೂ ಅದ್ಭುತವಾಗಿರುತ್ತದೆ.

ಬದಲಾಗುತ್ತಿರುವ ಹವಾಮಾನದಿಂದಾಗಿ, ಜನರು ಬಾಯಿ ಹುಣ್ಣುಗಳ ಸಮಸ್ಯೆಯನ್ನು ಎದುರಿಸುತ್ತಾರೆ. ಇದಕ್ಕೆ ಬೆಸ್ಟ್ ಮನೆಮದ್ದು ಪೇರಲದ ಚಿಗುರು ಅಥವಾ ಎಳತಾಗಿರುವ ಎಲೆ.

ಪೇರಲ ಎಲೆಗಳಲ್ಲಿ ಕ್ವೆರ್ಸೆಟಿನ್ ಮತ್ತು ವಿಟಮಿನ್ ಸಿ ಕಂಡುಬರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ, ಪ್ರತಿದಿನ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.

ಮಧುಮೇಹಿಗಳು ತಮ್ಮ ಆಹಾರಗಳ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಒಂದು ವೇಳೆ ಪೇರಲ ಎಲೆಗಳನ್ನು ಸೇವಿಸುತ್ತಾ ಬಂದಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಅನೇಕ ಜನರು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಪೇರಲ ಎಲೆಯು ರಾಮಬಾಣ ಎಂದೇ ಹೇಳಬಹುದು. ಇದರಲ್ಲಿ ಕಂಡುಬರುವ ಫೈಬರ್ ಮತ್ತು ವಿಟಮಿನ್ಗಳನ್ನು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

Source : https://zeenews.india.com/kannada/photo-gallery/health-benefits-of-eating-guava-leaves-on-empty-stomach-177765/health-benefits-of-guava-leaves-177766

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *