Betel Leaf Benefits: ಭಾರತೀಯ ಸಂಪ್ರದಾಯದಲ್ಲಿ ಭೋಜನದ ಬಳಿಕ ವೀಳ್ಯದೆಲೆ ತಿನ್ನುವ ಅಭ್ಯಾಸವಿದೆ. ಇದು ಕೇವಲ ಸಂಪ್ರದಾಯವಷ್ಟೇ ಅಲ್ಲ ಇದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.

ವೀಳ್ಯದೆಲೆ, ತಾಂಬೂಲ, ಪಾನ್ ಎಂಬ ನಾನಾ ಹೆಸರುಗಳಿಂದ ಕರೆಯಲ್ಪಡುವ ವೀಳ್ಯದೆಲೆ ಭಾರತೀಯ ಧಾರ್ಮಿಕ ಆಚರಣೆಯ ಭಾಗವೆಂದು ಹೇಳಿದರೂ ತಪ್ಪಾಗಲಾರದು.
ವೀಳ್ಯದೆಲೆಯು ವಿಟಮಿನ್ ಸಿ , ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್, ಕ್ಯಾರೋಟಿನ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದ್ದು, ಭೋಜನದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಅದ್ಭುತ ಪ್ರಯೋಜನಗಳು ಲಭ್ಯವಾಗುತ್ತದೆ. ಅವುಗಳೆಂದರೆ…
ವೀಳ್ಯದೆಲೆಯ ರಸವು ದೇಹದ ಆಂತರಿಕ ನೋವುಗಳಿಗೆ ಪರಿಹರಿಸುತ್ತದೆ. ಭೋಜನದ ಬಳಿಕ ತಾಂಬೂಲ ಸೇವನೆಯಿಂದ ಕಡಿತ, ಮೂಗೇಟುಗಳು, ದದ್ದುಗಳಿಂದ ಉಂಟಾಗುವ ನೋವನ್ನು ನಿವಾರಿಸಲು ಸುಲಬವಾಗುತ್ತದೆ.
ಭೋಜನದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಇದರಲ್ಲಿರುವ ಇದು ಚಯಾಪಚಯವನ್ನು ಹೆಚ್ಚಿಸಿ ರಕ್ತಪರಿಚಲನೆಯನ್ನು ಪ್ರಚೋದಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ವೀಳ್ಯದೆಲೆಯು ಕೆಮ್ಮು ಮತ್ತು ಶೀತಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಅತ್ಯುತ್ತಮ ಮದ್ದು ಎಂದು ಹೇಳಲಾಗುತ್ತದೆ. ಊಟದ ನಂತರ ವೀಳ್ಯದೆಲೆ ತಿನ್ನುವುದರಿದ್ನ ಇದು ಅಸ್ತಮ ರೋಗಿಗಳಿಗೆ ಹೆಚ್ಚು ಪ್ರಯೋಜನವನ್ನು ನೀಡಲಿದೆ.
ವೀಳ್ಯದೆಲೆ ತಿನ್ನುವುದರಿಂದ ಇದು ಕೀಲುಗಳಲ್ಲಿನ ಅಸ್ವಸ್ಥತೆ ಮತ್ತು ನೋವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.
ವೀಳ್ಯದೆಲೆಯನು ಜಗಿದು ತಿನ್ನುವುದರಿಂದ ಇದು ಡಯಾಬಿಟಿಕ್ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.