ಕಸ್ಟರ್ಡ್ ಆಪಲ್ ಸೇವನೆಯಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಪ್ರಯೋಜನ.

Benefits Of Custard Apple: ಎತ್ತರದ ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯುವ ಸೀತಾಫಲದಲ್ಲಿ ಕಂಡು ಬರುವ ಪೋಷಕಾಂಶಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿವೆ.

  • ರುಚಿಯಲ್ಲಿ ಸಿಹಿಯಾಗಿರುವ ಸೀತಾಫಲ ಹಣ್ಣಿನಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ ಅಡಕವಾಗಿವೆ.
  • ಫೈಬರ್, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಸೀತಾಫಲ ಹಣ್ಣಿನ ಸೇವನೆಯು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಸೀತಾಫಲ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳು ಲಭ್ಯವಿವೆ ಎಂದು ತಿಳಿಯೋಣ…

Custard Apple Benefits: ಸಾಮಾನ್ಯವಾಗಿ ಸೀತಾಫಲ ಎಂತಲೇ ಪ್ರಸಿದ್ಧವಾಗಿರುವ ಚೆರಿಮೊಯಾ ಹಣ್ಣು ಹಸಿರು ಬಣ್ಣದ ಹೃದಯಾಕಾರದಲ್ಲಿ ಕಂಡು ಬರುತ್ತದೆ. ಮೂಲತಃ ದಕ್ಷಿಣ ಅಮೆರಿಕಾದ ಆಂಡಿಸ್ ಪರ್ವತಗಳಲ್ಲಿ ಹುಟ್ಟಿಕೊಂಡಿದೆ ಎಂದು ಭಾವಿಸಲಾಗಿರುವ ಈ ಹಣ್ಣನ್ನು ಸ್ಪೇನ್‌ನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ರುಚಿಯಲ್ಲಿ ಸಿಹಿಯಾಗಿರುವ ಸೀತಾಫಲ ಹಣ್ಣಿನಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ ಅಡಕವಾಗಿವೆ. 

ಫೈಬರ್, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಸೀತಾಫಲ ಹಣ್ಣಿನ ಸೇವನೆಯು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೀತಾಫಲ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳು ಲಭ್ಯವಿವೆ ಎಂದು ತಿಳಿಯೋಣ… 

ಸೀತಾಫಲ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು:- 
*  ಉತ್ಕರ್ಷಣ ನಿರೋಧಕ: 

ಫ್ಲೇವನಾಯ್ಡ್‌ಗಳು, ಕೌರೆನೊಯಿಕ್ ಆಮ್ಲ, ವಿಟಮಿನ್ ಸಿ ಮತ್ತು ಕ್ಯಾರೊಟಿನಾಯ್ಡ್‌ಗಳು ಸೇರಿದಂತೆ ವಿವಿಧ ಉತ್ಕರ್ಷಣ ನಿರೋಧಕ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ.  ಸೀತಾಫಲ ಸೇವನೆಯಿಂದ ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ನಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ತುಂಬಾ ಪ್ರಯೋಜನಕಾರಿಯಾಗಿದೆ. 

* ಕಣ್ಣಿನ ಆರೋಗ್ಯ: 
ಸೀತಾಫಲ ಹಣ್ಣಿನಲ್ಲಿ ಲುಟೀನ್‌ ಸಮೃದ್ಧವಾಗಿದೆ. ಇದು ಕಣ್ಣಿನಲ್ಲಿ ಕಂಡು ಬರುವ 
ಪ್ರಮುಖ ಕ್ಯಾರೊಟಿನಾಯ್ಡ್‌ಗಳಲ್ಲಿ ಒಂದಾಗಿದ್ದು ಲುಟೀನ್ ಬೆಳಕಿನ ಫಿಲ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ, ನಿಯಮಿತ ಸೀತಾಫಲ ಸೇವನೆಯು  ಕಣ್ಣಿನ ಪೊರೆಗಳಂತಹ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

* ಖಿನ್ನತೆ: 
ಸೀತಾಫಲ ವಿಟಮಿನ್ ಬಿ 6 ನ ಅತ್ಯುತ್ತಮ ಮೂಲವಾಗಿದೆ. ಮನಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುವ ಡೋಪಮೈನ್ ಮತ್ತು ಸಿರೊಟೋನಿನ್ ಸೇರಿದಂತೆ ನರಪ್ರೇಕ್ಷಕಗಳನ್ನು ರಚಿಸಲು B6 ಅವಶ್ಯಕವಾಗಿದ್ದು, ಖಿನ್ನತೆಯಂತಹ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. 

* ಜೀರ್ಣಕಾರಿ: 
ಸೀತಾಫಲ ಫೈಬರ್‌ನಲ್ಲಿ ಅಧಿಕವಾಗಿದೆ. ಫೈಬರ್ ಉತ್ತಮ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ. ಫೈಬರ್ ಜೀರ್ಣಕಾರಿ ಆರೋಗ್ಯವನ್ನು ವಿವಿಧ ರೀತಿಯಲ್ಲಿ ಉತ್ತೇಜಿಸುತ್ತದೆ. ಇದರಿಂದಾಗಿ, ಮಲಬದ್ಧತೆಯಂತಹ ಸಮಸ್ಯೆಯಿಂದಲೂ ರಕ್ಷಣೆ ಪಡೆಯಬಹುದು. 

* ರಕ್ತದೊತ್ತಡ: 
ಸೀತಾಫಲದಲ್ಲಿ  ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಹೆಚ್ಚಾಗಿದ್ದು ಇದು ರಕ್ತದೊತ್ತಡದಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ. 

* ಕ್ಯಾನ್ಸರ್: 
ಸೀತಾಫಲ ಹಣ್ಣು ಎಪಿಕಾಟೆಚಿನ್, ಕ್ಯಾಟೆಚಿನ್ ಮತ್ತು ಎಪಿಗಲ್ಲೊಕಾಟೆಚಿನ್‌ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಅಧ್ಯಯನಗಳ ಪ್ರಕಾರ, ಇದರ ಸೇವನೆಯು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. 

ಸೂಚನೆ:  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ. 

Source: https://zeenews.india.com/kannada/health/eating-custard-apple-has-so-many-health-benefits-180446

 ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *