ED, CBI ತಮ್ಮ ಕಚೇರಿಯನ್ನು ಡಿಕೆಶಿ ಮನೆಯಲ್ಲಿಯೇ ಮಾಡಿಕೊಂಡು ಬಿಡಿ : ರಣದೀಪ್ ಸುರ್ಜೆವಾಲ್

ಬೆಳಗಾವಿ: ಡಿಕೆ ಶಿವಕುಮಾರ್ ಅವರಿಗೆ ಇಡಿ ಮತ್ತು ಸಿಬಿಐ ಆಗಾಗ ಆಹ್ವಾನ ನೀಡುತ್ತಲೇ ಇರುತ್ತವೆ. ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ್ ಅಧಿಕಾರಿಗಳ ಮೇಲೆ ಕಿಡಿಕಾರಿದ್ದಾರೆ. ಸಿಬಿಐ ಹಾಗೂ ಇಡಿ ಅಧಿಕಾರಿಗಳು ತಮ್ಮ ಕಚೇರಿಯನ್ನು ಡಿಕೆಶಿ ಮನೆಗೆ ಶಿಫ್ಟ್ ಮಾಡಿಕೊಳ್ಳುವುದು ಉತ್ತಮ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವಿಚಾರವನ್ನು ಖಂಡಿಸಿರುವ ಸುರ್ಜೆವಾಲ್, ಡಿಕೆಶಿ ಮನೆ ಮೇಲೆ ಒಂದು ಡಜನ್ ಬಾರಿ ದಾಳಿ ನಡೆಸಿದ್ದಾರೆ. ಆದರೆ ಡಜನ್ ಬಾರಿ ದಾಳಿ ನಡೆಸಿದರೂ ಏನು ಸಿಕ್ಕಿಲ್ಲ. ಕಾಂಗ್ರೆಸ್ ಪಕ್ಷ ಯಾವುದಕ್ಕೂ ಹೆದರಲ್ಲ, ಕಾಂಗ್ರೆಸ್ ಪಕ್ಷ, ಕಾರ್ಯಕರ್ತರು ಡಿಕೆಶಿ ಜೊತೆಗಿದ್ದಾರೆ ಎಂದಿದ್ದಾರೆ.

ಬಿಜೆಪಿಯವರು ಜನರ ಅಭಿಪ್ರಾಯದಲ್ಲಿ ನೆಲಕ್ಕೆ ಬಿದ್ದಿದ್ದಾರೆ. ಬೊಮ್ಮಾಯಿ ಸರ್ಕಾರ ಅನೈತಿಕ ಮಾರ್ಗದಿಂದ ಬಂದಿರುವ ಸರ್ಕಾರವಾಗಿದೆ. ಪ್ರಜಾಪ್ರಭುತ್ವದಲ್ಲಿ ಒಂದು ದಿನವೂ ಇರುವ ನೈತಿಕತೆ ಬಿಜೆಪಿ ಸರ್ಕಾರಕ್ಕೆ ಇಲ್ಲ ಎಂದು ಕಿಡಿಕಾರಿದ್ದಾರೆ.

The post ED, CBI ತಮ್ಮ ಕಚೇರಿಯನ್ನು ಡಿಕೆಶಿ ಮನೆಯಲ್ಲಿಯೇ ಮಾಡಿಕೊಂಡು ಬಿಡಿ : ರಣದೀಪ್ ಸುರ್ಜೆವಾಲ್ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/zKlnLhC
via IFTTT

Leave a Reply

Your email address will not be published. Required fields are marked *