ಒತ್ತಡವನ್ನು ಹಗುರವಾಗಿ ತೆಗೆದುಕೊಳ್ಳುವವರು ಅಥವಾ ಒತ್ತಡದಿಂದ ಏನೂ ಆಗುವುದಿಲ್ಲ ಎಂದು ಅಂದುಕೊಳ್ಳುವವರು ಈ ಸಂದೇಶವನ್ನು ಗಮನಿಸಬೇಕು. ನಿರಂತರ ಒತ್ತಡವು ದೇಹದಲ್ಲಿ ‘ಕಾರ್ಟಿಸೋಲ್’ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನುಗಳು ವಿಷಕ್ಕಿಂತಲೂ ಅಪಾಯಕಾರಿಯಾಗಿದ್ದು, ಹೃದಯ, ಮೆದುಳು ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡಬಹುದು.
ಒತ್ತಡದಿಂದ ದೇಹದಲ್ಲಿ ಸಂಭವಿಸುವ ಪ್ರಮುಖ ಬದಲಾವಣೆಗಳು:
- ಹಾರ್ಮೋನುಗಳ ಅಸಮತೋಲನ: ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಹಾರ್ಮೋನುಗಳ ಅಧಿಕ ಮಟ್ಟ ಬಿಡುಗಡೆ, ರಕ್ತದೊತ್ತಡ (ಬಿಪಿ) ಹೆಚ್ಚಳ, ಹೃದಯದ ಮೇಲೆ ಒತ್ತಡ.
- ಜೀರ್ಣಾಂಗ ಸಮಸ್ಯೆಗಳು: ಆಮ್ಲೀಯತೆ, ಮಲಬದ್ಧತೆ, ಜೀರ್ಣಾಂಗ ನಿಧಾನ, ಕೆಲವರಿಗೆ ಹಸಿವು ಕಡಿಮೆಯಾಗುವುದು ಅಥವಾ ಹೆಚ್ಚುವಿಕೆ.
- ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು: ಶೀತ, ಜ್ವರ, ಸೋಂಕುಗಳಿಗೆ ಗ್ರಾಸರಾಗುವ ಸಾಧ್ಯತೆ.
- ಪುರುಷರು ಮತ್ತು ಮಹಿಳೆಯರ ಸಮಸ್ಯೆಗಳು: ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ, ಪುರುಷರಲ್ಲಿ ಹಾರ್ಮೋನುಗಳ ಅಸಮತೋಲನ, ಬಂಜೆತನ ಸಾಧ್ಯತೆ.
- ಮೆದುಳಿನ ಮೇಲೆ ಪರಿಣಾಮ: ಸ್ಮರಣಶಕ್ತಿ ನಷ್ಟ, ಏಕಾಗ್ರತೆಯ ಕೊರತೆ, ನಿರ್ಧಾರ ತೆಗೆದುಕೊಳ್ಳಲು ಅಸಮರ್ಥತೆ.
ಒತ್ತಡವನ್ನು ತಡೆಗಟ್ಟಲು ಸಲಹೆಗಳು:
- ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಅಥವಾ ಯೋಗ ಮಾಡಿ.
- ಪ್ರತಿದಿನ 7-8 ಗಂಟೆ ಚೆನ್ನಾಗಿ ನಿದ್ರೆ ಮಾಡಿ.
- ಸಕಾರಾತ್ಮಕ ಮನಸ್ಥಿತಿಯನ್ನು ಅಳವಡಿಸಿಕೊಳ್ಳಿ. ಅಗತ್ಯವಿದ್ದರೆ ವೈದ್ಯಕೀಯ ಸಲಹೆ ಪಡೆಯಿರಿ.
ಒತ್ತಡ ಕಡಿಮೆ ಮಾಡಲು ಪಾಲಿಸಬಹುದಾದ ಅಭ್ಯಾಸಗಳು:
- ಮಲಗುವ ಮುನ್ನ ಡಿಜಿಟಲ್ ಡಿಟಾಕ್ಸ್: ಮೊಬೈಲ್, ಲ್ಯಾಪ್‌ಟಾಪ್, ಟಿವಿ ಅನ್ನು ಮಲಗುವ 30–60 ನಿಮಿಷಗಳ ಮೊದಲು ಆಫ್ ಮಾಡಿ. ಬದಲಿಗೆ ಪುಸ್ತಕ ಓದುವುದು ಅಥವಾ ಪ್ರೀತಿಪಾತ್ರರೊಂದಿಗೆ ಸಂಭಾಷಣೆ.
- ಆಳವಾದ ಉಸಿರಾಟ ಅಥವಾ ಧ್ಯಾನ: ಶಾಂತ ವಾತಾವರಣದಲ್ಲಿ ಹಾಸಿಗೆಯಲ್ಲಿ ಕುಳಿತು ಧ್ಯಾನ ಮಾಡಿ. ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ.
- ನಿಮಗಾಗಿ ಸಮಯ ಮೀಸಲಿಡಿ: ಮನೆಯಲ್ಲಿಯೂ ಸ್ವಂತ ಸಮಯ, ಆರೋಗ್ಯಕರ ಊಟ, ಚರ್ಮದ ಆರೈಕೆ, ಮೊಬೈಲ್ ದೂರ.
- ಜರ್ನಲಿಂಗ್: ದಿನದ ಚಟುವಟಿಕೆಗಳು ಮತ್ತು ಭಾವನೆಗಳನ್ನು ದಿನಚರಿಯಲ್ಲಿ ಬರೆಯುವುದು.
- ಯೋಗ ಅಥವಾ ಸ್ಟ್ರೆಚಿಂಗ್: ಶವಾಸನ, ಬಾಲಾಸನ, ವ್ಯಾಯಾಮ, ವಾಕಿಂಗ್, ಸಮಯಕ್ಕೆ ಸರಿಯಾದ ಊಟ.
- ಸಮಯಕ್ಕೆ ಸರಿಯಾಗಿ ಮಲಗಿ: ಸರಿಯಾದ ಸಮಯದಲ್ಲಿ ಮಲಗಿ, ನಿದ್ರೆ ಉತ್ತಮವಾಗಿಡಿ ಮತ್ತು ಒತ್ತಡ ನಿಯಂತ್ರಣ.