Ektha Kapoor Got Emmy Award: ಪ್ರಸ್ತುತ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿರುವ 51ನೇ ಇಂಟರ್‌ನ್ಯಾಶನಲ್ ಎಮ್ಮಿ ಅವಾರ್ಡ್ಸ್‌ನಲ್ಲಿ ಏಕ್ತಾ ಕಪೂರ್ ಅವರಿಗೆ ದೀಪಕ್ ಚೋಪ್ರಾ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ನವೆಂಬರ್ 20ರಂದು ಭಾರತೀಯ ಚಲನಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೆ 51 ನೇ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಡೈರೆಕ್ಟೊರೇಟ್ ಪ್ರಶಸ್ತಿ’ ನೀಡಲಾಗಿದೆ.
ಏಕ್ತಾ ಕಪೂರ್ ಅಂತಾರಾಷ್ಟ್ರೀಯ ‘ಎಮ್ಮಿ ಡೈರೆಕ್ಟೊರೇಟ್ ಪ್ರಶಸ್ತಿ’ ಪಡೆದ ಮೊದಲ ಭಾರತೀಯ ಮಹಿಳಾ ಚಲನಚಿತ್ರ ನಿರ್ಮಾಪಕಿಯಾಗಿದ್ದಾರೆ.
ಏಕ್ತಾ ಕಪೂರ್ ಅವರ ಗೆಲುವು ಟೆಲಿವಿಷನ್ ಉದ್ಯಮಕ್ಕೆ ಅವರು ನೀಡಿರುವ ಕೊಡುಗೆಗಳು ಮತ್ತು ಈ ಕ್ಷೇತ್ರದಲ್ಲಿ ಅವರ ಹೊಸ ಹೊಸ ಐಡಿಯಾಗಳು, ಸಾಂಪ್ರದಾಯಿಕ ಮನಸ್ಥಿತಿಯನ್ನು ಮುರಿಯುವ ಹಲವು ವಿಚಾರಗಳಿಗೆ ಸಿಕ್ಕ ಗೆಲುವಾಗಿದೆ.
51ನೇ ಇಂಟರ್‌ನ್ಯಾಶನಲ್ ಎಮ್ಮಿ ಅವಾರ್ಡ್ಸ್‌ನಲ್ಲಿ ಏಕ್ತಾ ಕಪೂರ್ ಕಿತ್ತಳೆ ಬಣ್ಣದ ಹೆವಿ ವರ್ಕ್ ಇರುವ ಡ್ರೆಸ್ ಧರಿಸಿದ್ದರು.
ನಟ ಜೀತೇಂದ್ರ ಕಪೂರ್ ಮತ್ತು ಶೋಭಾ ಕಪೂರ್ ಪುತ್ರಿಯಾದ ಏಕ್ತಾ ಕಪೂರ್, 1994 ರಲ್ಲಿ ಏಕ್ತಾ ಕಪೂರ್ ಬಾಲಾಜಿ ಟೆಲಿಫಿಲ್ಮಂ ಪ್ರಾರಂಭಿಸಿದರು.
ಏಕ್ತಾ ಕಪೂರ್‌ರವರ ಬಾಲಾಜಿ ಬ್ಯಾನರ್‌ನಿಂದ ಭಾರತದ ಟಿವಿ ಇತಿಹಾಸದಲ್ಲಿ ಹೊಸ ಬದಲಾವಣೆಗಳು ಶುರುವಾಗಿ, 17,000 ಗಂಟೆಗಳ ಟಿವಿ ಸೀರಿಯಲ್ಸ್ ಮತ್ತು 45 ಚಲನಚಿತ್ರಗಳನ್ನು ನಿರ್ಮಿಸಲಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1