22ರಂದು ಭಾರತಕ್ಕೆ ಎಲಾನ್‌ ಮಸ್ಕ್ ಭೇಟಿ

ಹೊಸದಿಲ್ಲಿ: ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಭಾರತಕ್ಕೆ ಭೇಟಿ ನೀಡಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್ 22 ರಂದು ಅವರು ಭೇಟಿ ನೀಡುವ ನಿರೀಕ್ಷೆ ಇದೆ. ಭೇಟಿ ಸಮಯದಲ್ಲಿ ಅವರು ಹೂಡಿಕೆಯ ಯೋಜನೆಗಳು ಹಾಗೂ ಭಾರತದಲ್ಲಿ ಹೊಸ ಕಾರ್ಖಾನೆಯೊಂದರ ಸ್ಥಾಪನೆ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ ಎಂದು ಹೆಸರು ಹೇಳಲು ಬಯಸದ ಇಬ್ಬರು ಪ್ರವಾಸದ ವಿವರಗಳನ್ನು ನೀಡಿದ್ದಾರೆ. ಮೋದಿ ಅವರ ಕಚೇರಿ ಮತ್ತು ಟೆಸ್ಲಾ ಪ್ರತಿಕ್ರಿಯೆಗಾಗಿ ಮಾಡಿದ ಮನವಿಗೆ ಪ್ರತಿಕ್ರಿಯಿಸಲಿಲ್ಲ.

ಮಸ್ಕ್ ಅವರ ಭಾರತ ಪ್ರವಾಸದ ಕಾರ್ಯಸೂಚಿ ಬದಲಾಗುವ ಸಂಭವವೂ ಇದೆ. ಉತ್ಪಾದನಾ ಘಟಕವೊಂದರ ಸ್ಥಾಪನೆಗಾಗಿ ಸ್ಥಳ ಪರಿಶೀಲನೆ ಮಾಡಲು ಟೆಸ್ಲಾ ಅಧಿ ಕಾರಿಗಳು ಈ ತಿಂಗಳು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *