English Alphabet 27th Latter: ಇಂಗ್ಲೀಷ್‌ ‌ವರ್ಣಮಾಲೆಯಲ್ಲಿ 26 ಅಲ್ಲ 27 ಅಕ್ಷರಗಳಿವೆ, ಆ ಇಪ್ಪತ್ತೇಳನೇ ಅಕ್ಷರ ಯಾವುದು?

ನಮಗೆಲ್ಲ ತಿಳಿದಿರುವಂತೆ ಆಧುನಿಕ ಇಂಗ್ಲೀಷ್‌ ವರ್ಣಮಾಲೆಯಲ್ಲಿ 26 ಅಕ್ಷರಗಳಿವೆ. ಶಾಲೆಯಲ್ಲಿಯೂ A ಯಿಂದ ಹಿಡಿದು Z ವರೆಗೆ ಇಂಗ್ಲೀಷ್‌ ವರ್ಣಮಾಲೆಯಲ್ಲಿ ಒಟ್ಟು 26 ಅಕ್ಷರಗಳಿವೆ ಎಂಬುದನ್ನು ಶಿಕ್ಷಕರು ಮಕ್ಕಳಿಗೆ ಕಲಿಸಿಕೊಡುತ್ತಾರೆ. ಆದರೆ ನಿಮಗೆ ಗೊತ್ತಾ ಒಂದು ಕಾಲದಲ್ಲಿ ಇಂಗ್ಲೀಷ್‌ ವರ್ಣಮಾಲೆಯಲ್ಲಿ 27 ಅಕ್ಷರಗಳಿತ್ತಂತೆ. ಹಾಗಾದರೆ ಆ ಇಪ್ಪತ್ತೇಳನೆ ಅಕ್ಷರ ಯಾವುದೂ ಎಂಬುದನ್ನು ನೋಡೋಣ ಬನ್ನಿ.

ಇಂಗ್ಲೀಷ್‌ ವರ್ಣಮಾಲೆಯ 27 ನೇ ಅಕ್ಷರ ಯಾವುದು?

ʼ&ʼ ಇಂಗ್ಲೀಷ್‌ ವರ್ಣಮಾಲೆಯ 27 ನೇ ಅಕ್ಷರವಾಗಿದೆ. ಇದನ್ನು ಆಂಪರ್ಸಂಡ್‌ ಎಂದು ಉಚ್ಛರಿಸಲಾಗುತ್ತಿತ್ತು. ಬ್ರಿಟಾನಿಕಾ ವೆಬ್‌ಸೈಟ್‌ ವರದಿಯ ಪ್ರಕಾರ, 1835 ವರೆಗೆ ಆಂಪರ್ಸೆಂಡ್‌ (&) ಅನ್ನು ವರ್ಣಮಾಲೆಯ 27 ಅಕ್ಷರವೆಂದು ಪರಿಗಣಿಸಲಾಗಿತ್ತು. ಅಲ್ಲಿಯವೆರೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವರ್ಣಮಾಲೆಯಲ್ಲಿ A ಯಿಂದ & ವರೆಗೆ 27 ಅಕ್ಷರಗಳಿವೆ ಎಂಬುದನ್ನು ಕಲಿಸಿಕೊಡುತ್ತಿದ್ದರು. ಆಂಪರ್ಸೆಂಡ್‌ (&) ಲ್ಯಾಟಿನ್‌ ಪದವಾದ ʼetʼ ನಿಂದ ಮಾಡಲ್ಪಟ್ಟಿದೆ. ಮತ್ತು ಇದನ್ನು ʼಪರ್‌ ಸೆʼ ಎಂದು ಕರೆಯಲಾಯಿತು. ನಂತರ ಇದು ಉಚ್ಚಾರಣೆಯಲ್ಲಿ ʼಆಂಪರ್ಸಂಡ್ʼ ಎಂದು ಧ್ವನಿಸಲು ಪ್ರಾರಂಭಿಸಿತು. ಲ್ಯಾಟಿನ್‌ ಭಾಷೆಯಲ್ಲಿ ಪರ್‌ ಸೆ ಎಂದರೆ ಇತರರಿಂದ ಪ್ರತ್ಯೇಕಿಸಲ್ಪಟ್ಟ ಅಥವಾ ಏಕಾಂಗಿ ಎಂದರ್ಥ.

1835 ರಲ್ಲಿ ಇಂಗ್ಲೀಷ್‌ ವರ್ಣಮಾಲೆಯನ್ನು ಬದಲಾಯಿಸಲಾಯಿತು ಮತ್ತು ʼ&ʼ ಅಕ್ಷರವನ್ನು ತೆಗೆದು ಹಾಕಿ 19 ನೇ ಶತಮಾನದ ಅಂತ್ಯದ ವೇಳೆಗೆ ಆಂಪರ್ಸೆಂಡ್‌ ಅಕ್ಷರವನ್ನು ಕೇವಲ ಒಂದು ಚಿಹ್ನೆ ಎಂದು ಪರಿಗಣಿಸಲಾಯಿತು. ಕ್ರಮೇಣ ʼ&ʼ ಚಿಹ್ನೆ ಮಾರ್ಕ್ಸ್‌ & ಸ್ಪೆನ್ಸರ್‌, H&M ಇತ್ಯಾದಿ ಕಂಪೆನಿಗಳ ಹೆಸರುಗಳಲ್ಲಿ ಮತ್ತು ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ನಲ್ಲಿಯೂ ಕಾಣಿಸಿಕೊಳ್ಳಲು ಪ್ರಾರಂಭವಾಯಿತು.

Source : https://tv9kannada.com/trending/ever-heard-of-ampersand-the-long-lost-27th-letter-of-the-english-alphabet-kannada-news-mda-861223.html

Leave a Reply

Your email address will not be published. Required fields are marked *