ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜೂ. 27 ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ನೀಟ್ -2004 ಪರೀಕ್ಷೆ ಫಲಿತಾಂಶದಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಅದ್ಭುತ ಸಾಧನೆ ಮಾಡಿದೆ. 2025-26ನೇ ಸಾಲಿನ ಪ್ರವೇಶ ಪ್ರಕ್ರಿಯೆ ಸಹ ಆರಂಭಿಸಿದ್ದು, ಶಿವಮೊಗ್ಗ ಸೇರಿದಂತೆ ನೆರೆಹೊರೆಯ ಜಿಲ್ಲೆಗಳ ಮಕ್ಕಳಿಗೂ ಪ್ರವೇಶ
ಅವಕಾಶ ಕಲ್ಪಿಸಿದೆ ಎಂದು ಅಕಾಡೆಮಿ ಮುಖ್ಯಸ್ಥ ರಾಕೇಶ ವಿನ್ಸೆಂಟ್ ಡಿಸೋಜ ಹೇಳಿದರು.
ನಗರದಲ್ಲಿ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಪ್ರವೇಶ ಸಿದ್ಧತೆಗೆ ಮೀಸಲಾದ
ಮಲೆನಾಡಿನ ಪ್ರಪ್ರಥಮ ವಸತಿಯುತ ಸಂಸ್ಥೆಯಾದ ದೇಶ್ ನೀಟ್ ಅಕಾಡೆಮಿಯ ಚೊಚ್ಚಲ ಬ್ಯಾಚ್‍ನ 45ಕ್ಕೂ ಹೆಚ್ಚು ವಿದ್ಯಾರ್ಥಿ-
ವಿದ್ಯಾರ್ಥಿನಿಯರು ಮೆಡಿಕಲ್ ಸೀಟ್ ಪಡೆಯುವ ದೃಢ ನಿರೀಕ್ಷೆಯಲ್ಲಿ ಇದ್ದಾರೆ ಎಂದರು.
ಅಕಾಡೆಮಿಯ ಕೆ.ರೀತು ಅಕ್ಷಯ್, ಸ್ಮಿತಾ ಡಿಮೆಲ್ಲೋ, ಎ.ಎನ್.ದೀಕ್ಷಿತ, ಫಣಿರಾಜ, ಸಿ.ಡಿ.ಅರುಣ್, ಕೆ.ಜಿ.ಆತ್ಮೀಯ, ಮೋಹನ
ದಾವನೊಲು ಮಂಜು ವರದಿ ವುಲ್ ಪಾಟೀಲ, ಎಸ್.ಸುಚಿಂತ್, ಎಚ್.ಸಿ.ವರ್ಷ ಹೆಚ್ಚು ಅಂಕಗಳಿಸುವ ಮೂಲಕ ಅದ್ಭುತಸಾಧನೆ
ಮಾಡಿದ್ದಾರೆ. ಎಚ್.ಜೆ. ಹರ್ಷ ಶೇ.96.28 ಅಂಕದೊಂದಿಗೆ ಸಿಎಟ್ ಆಲ್ ಇಂಡಿಯಾ ರ್ಯಾಂಕಿಂಗ್‍ನಲ್ಲಿ 561 ಅಂಕ ಪಡೆದು,
ಸಾಧನೆ ಮಾಡಿದ್ದಾನೆ ಎಂದು ಹೇಳಿದರು.
ಬಿ.ಜಿ.ಕೀರ್ತನ, ಬಿ.ಕೆ.ಭುವನ್, ಎಚ್. ಎಸ್.ರಕ್ಷಿತ್, ಎಚ್.ಜೆ.ಹರ್ಷ, ಅಸ್ಥಿತ, ಸೃಷ್ಟಿ ಎಸ್.ಗೌಡ, ಎಂ.ಸಂಜನಾ, ಆಯೇಷಾ ಹಸನ್,
ಎಂ.ಬಿ. ದೀಪ್ತಿ, ಜಿ.ಜೆ.ಮನೋಜ್, ಜಿ.ಟಿ.ಚಿಂತನ್, ಟಿ.ನಂದನ್ ಡಿಸ್ಟಿಂಕ್ಷನ್‍ನಲ್ಲಿ ಉತ್ತೀರ್ಣ ರಾಗಿದ್ದಾರೆ. ಉನ್ನತ ಮಟ್ಟದ ಶೈಕ್ಷಣಿಕ
ಸಾಧನೆಯಿಂದ ಅಕಾಡೆಮಿಗೆ ಕೀರ್ತಿ ತಂದ ಹಾಗೂ ವೈದ್ಯಕೀಯ ಕನಸು ಕಂಡ ವಿದ್ಯಾರ್ಥಿಗಳ ಸಾಧನೆಗೆ ದೇಶ್ ನೀಟ್ ಅಕಾಡೆಮಿ
ಆಡಳಿತ ಮಂಡಳಿ, ವ್ಯವಸ್ಥಾಪಕ ನಿರ್ದೇಶಕ ಎ.ಆರ್. ಅವಿನಾಶ್, ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ ಎಂದರು.
ಅಕಾಡೆಮಿಯ ಎಸ್.ಪ್ರದೀಪ್. ಜೀವಶಾಸ್ತ್ರ ವಿಭಾಗ ಮುಖ್ಯಸ್ಥ ಗೋವರ್ಧನ್ ಇದ್ದರು.