ದಿನಾಂಕ 24.10.2025 ರಂದು ಜೆ.ಎಸ್.ಎಸ್. ಕಾಲೇಜ್, ಊಟಿ ರಸ್ಥೆ ಮೈಸೂರು ಇಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮೈಸೂರು, ಮಾಜಕಾರ್ಯ ಅಧ್ಯಯನ ವಿಭಾಗ, ಜೆ.ಎಸ್.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಊಟಿ ರಸ್ಥೆ ಮೈಸೂರು, ಕರ್ನಾಟಕ ಸ್ಟೇಟ್ ಯೂತ್ ನೆಟ್ ವರ್ಕ್ ಸಹಯೋಗದೊಂದಿಗೆ ಮೈಸೂರು ಜಿಲ್ಲೆಯ ಪರಿಸರ ಸಂರಕ್ಷರಣೆಯಲ್ಲಿ ಸರ್ಕಾರ ಹಾಗೂ ಸಾರ್ವಜನಿಕರ ಪಾಲ್ಗೋಳ್ಳುವಿಕೆ ಕುರಿತು ಸಮಾಲೋಚನಾ ಸಭೆ ಕಾರ್ಯಕ್ರಮ ವನ್ನು ನಡೆಸಲಾಯಿತು.
ಶ್ರೀ ಸಾಂಬಶಿವಯ್ಯ ಮುಖ್ಯ ಕಾರ್ಯನಿರ್ವಾಹಕರು ಜೆ.ಎಸ್.ಎಸ್. ಕಾಲೇಜು ಊಟಿ ರಸ್ಥೆ ಮೈಸೂರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಈ ಸಭೆಯ ಆಯೋಜನೆಯು ಗೌರವದ ಹಾಗೂ ಹೆಮ್ಮೆಯ ಕ್ಷಣವಾಗಿದ್ದು, ಈ ರೀತಿಯ ಕಾರ್ಯಕ್ರಮಗಳು ನಮ್ಮೆಲ್ಲರ ಪರಿಸರ ಸಂರಕ್ಷಣೆಯ ಬದ್ಧತೆಯನ್ನು ಪ್ರತಿನಿಧಿಸುತ್ತವೆ. ಇಂತಹ ಚಟುವಟಿಕೆಗಳು ಜನರ ಮತ್ತು ಸರ್ಕಾರದ ಸಂಯುಕ್ತ ಸಹಕಾರದಿಂದ ಮಾತ್ರ ಯಶಸ್ವಿಯಾಗಬಹುದು. ಆರು ಅಭಿವೃದ್ಧಿ ಗುರಿಗಳನ್ನು ಉಲ್ಲೇಖಿಸುತ್ತಾ — ಶುದ್ಧ ಜಲ, ಶುದ್ಧ ಶಕ್ತಿ, ಜವಾಬ್ದಾರಿಯುತ ಉಪಭೋಗ ಮತ್ತು ಉತ್ಪಾದನೆ, ಭೂಮಿಯ ಜೀವಜಗತ್ತು, ಮತ್ತು ಹವಾಮಾನ ಕ್ರಿಯೆ. ಈ ಗುರಿಗಳು ಸತತ ಅಭಿವೃದ್ಧಿ ಮತ್ತು ಪರಿಸರದ ಸಂರಕ್ಷಣೆಗೆ ಅತ್ಯಂತ ಮುಖ್ಯವಾದವು ಎಂದು ಅವರು ತಿಳಿಸಿದರು. ಹಸಿರು ಕರ್ನಾಟಕ ಅಭಿಯಾನ, ಸಸ್ಯಸಿರಿ ಗ್ರಾಮ ಯೋಜನೆ ಮತ್ತು ಮೈಸೂರಿನಲ್ಲಿ 40 ಮೆಗಾವಾಟ್ ಸೌರಶಕ್ತಿ ಯೋಜನೆ ಕುರಿತು ವಿವರಿಸಿದರು. ಮೈಸೂರಿನಲ್ಲಿ ನವೀಕರಿಸಬಹುದಾದ ಶಕ್ತಿಯ ಬಳಕೆ 63% ರಷ್ಟಾಗಿರುವುದು ರಾಜ್ಯದ ಪರಿಸರ ಸ್ನೇಹಿ ಅಭಿವೃದ್ಧಿಯ ಒಂದು ಉತ್ತಮ ಉದಾಹರಣೆ ಎಂದು ಹೇಳಿದರು. ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅರಣ್ಯವೃದ್ಧಿ ಕಾರ್ಯಗಳು, ಕುಕ್ಕರಹಳ್ಳಿ ಕೆರೆಯ ಪುನರುಜ್ಜೀವನ ಕಾರ್ಯಗಳು, ಹಾಗೂ ಗ್ರಾಮಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಜೈವಿಕ ಕೃಷಿಯ ಪ್ರೋತ್ಸಾಹದ ಕುರಿತು ಮಾತನಾಡಿದರು. ಜೊತೆಗೆ, ಸೌರ ಪ್ಯಾನಲ್ ಮೇಲ್ಚಾವಣಿ ಅಳವಡಿಕೆ ಮೂಲಕ ವಿದ್ಯುತ್ ಉಳಿತಾಯ ಹಾಗೂ ಶುದ್ಧ ಶಕ್ತಿಯ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಹೇಳಿದರು. “ನಾವು ಎಲ್ಲರೂ ಸೇರಿ ಶುದ್ಧ, ಹಸಿರು ಮತ್ತು ಆರೋಗ್ಯಕರ ಪರಿಸರ ನಿರ್ಮಾಣದತ್ತ ಹೆಜ್ಜೆ ಇಡೋಣ” ಎಂದು ಎಲ್ಲರಿಗೂ ಪ್ರೇರಣೆ ನೀಡಿದರು. ಅವರು ನಾಗರಿಕರು, ವಿದ್ಯಾರ್ಥಿಗಳು, ಸಂಸ್ಥೆಗಳು ಹಾಗೂ ಸರ್ಕಾರದ ಎಲ್ಲಾ ಇಲಾಖೆಗಳು ಒಂದೇ ಉದ್ದೇಶದೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಪರಿಸರ ಸಂರಕ್ಷಣೆಯ ನಿಜವಾದ ಅರ್ಥ ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಸ್ತಾವಿಕವಾಗಿ ಸಂಸ್ಥೆಯ ನಿರ್ದೇಶಕಿ ಸರಸ್ವತಿ ಮಾತನಾಡುತ್ತಾ RLHP ಸಂಸ್ಥೆ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಮೈಸೂರು, ಗುಂಡ್ಲುಪೇಟೆ, ಗುಲ್ಬರ್ಗ ಮತ್ತು ಬೀದರ್ ತಾಲ್ಲೂಕಿನಲ್ಲಿ 40 ಯುವಕರ ಗುಂಪುಗಳನ್ನು ರಚನೆಮಾಡಿದ್ದು ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಯೂತ್‌ನೆಟ್ವರ್ಕ್ ಎಂಬ ಗುಂಪು ರಚನೆಯಾಗಿದೆ. ಯುವಜನರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಪರಿಸರ ಸಂಬAಧಿತ ಕಾರ್ಯಕ್ರಮಗಳು, ಸಾವಯವ ಗೊಬ್ಬರಗಳ ಬಳಕೆ, ಪ್ಲಾಸ್ಟಿಕ್ ಬಳಕೆಯ ನಿಷೇಧ, ಘನತ್ಯಾಜ್ಯ ಘಟಕ, ಜಾಗತಿಕ ತಾಪಮಾನ ಹಾಗೂ ಪ್ರಕೃತಿ ವಿಕೋಪ ಹೀಗೆ ಹಲವಾರು ಪರಿಸರಕ್ಕೆ ಸಂಬAಧಿಸಿದ ವಿಷಯಗಳ ಕುರಿತು ಮಕ್ಕಳು, ಮಹಿಳೆಯರು, ಯುವಜನರು ಮತ್ತು ಸಮುದಾಯಕ್ಕೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದು, ಪರಿಸರ ಸಂರಕ್ಷಣೆಗೆ ಸಂಬAಧಿಸಿದAತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಸವಾದ ಕಾರ್ಯಕ್ರಮದಲ್ಲಿ ಯುವಜನರ ಮನವಿಗಳು, ಮೈಸೂರಿನ ಕುಕ್ಕರಹಳ್ಳಿ ಕೆರೆ, ಲಿಂಗಾಭುದಿ ಕೆರೆ, ಉಂಡುಬತ್ತಿ ಕೆರೆ ಹಾಗೂ ಕಾರಂಜಿ ಕೆರೆ ಗಳು ವಿವಿಧ ಕಾರಣಗಳಿಂದ ಮಲಿನಗೊಳ್ಳುತ್ತಿವೆ. ಆದುದರಿಂದ ಕೆರೆಗಳ ಹೂಳೆತ್ತಿಸುವುದು, ಚರಂಡಿ ಮತ್ತು ಒಳಚರಂಡಿಗಳ ನೀರು ಕೆರೆಯನ್ನು ಸೇರದಂತೆ ಇಲಾಖೆ ಕ್ರಮವಹಿಸುವುದು, ಸೈಕಲ್‌ಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವುದು ಮತ್ತು ಪ್ರೋತ್ಸಾಹಿಸುವುದು. ಸೈಕಲ್ ಗಳ ಪೂರೈಕೆ, ಸಾರ್ವಜನಿಕ ಸಾರಿಗೆ ಬಳಸುವಂತೆ ಹೆಚ್ಚು ಅರಿವು ಮೂಡಿಸುವುದು, ಹೊಸದಾಗಿ ನಿರ್ಮಾಣಗೊಳ್ಳುವ ಎಲ್ಲಾ ಕಟ್ಟಡಗಳಲ್ಲಿಯೂ ಮಳೆ ನೀರು ಕೊಯ್ಲು ಅಳವಡಿಕೆಯನ್ನು ಕಡ್ಡಾಯಗೊಳಿಸುವುದು, ನಗರದ ರಸ್ತೆ ಅಗಲಿಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯುತ್ತಿರುವುದು (ಉದಾ-ಹೈದರ ಅಲಿ ರಸ್ತೆ, ಚಾಮುಂಡಿ ಬೆಟ್ಟಕೆ ಹೋಗುವ ರಸ್ತೆ ಇತ್ಯಾದಿ) ನಿಲ್ಲಿಸಬೇಕು, ವಾಯುಮಾಲಿನ್ಯವನ್ನು ತಪ್ಪಿಸಲು ನಗರದಲ್ಲಿ ಮತ್ತು ಮುಖ್ಯವಾಗಿ ಚಾಮುಂಡಿ ಬೆಟ್ಟಕೆ ಈ.ವಿ.ಎಮ್ (ವಿದ್ಯುತ್ ಚಾಲಿತ) ಬಸ್ ಸೇವೆ ಪ್ರಾರಂಬ ಮಾಡುವುದು, ನಗರದ ಪ್ರವಾಸಿ ತಾಣಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನ್ನು ನಿಷೇಧಿಸುವುದು ಹಾಗೂ ಕೆರಳ ಮಾದರಿಯ ಬಾಟಲ್ ಆಕಾರದ ರ‍್ಷಕವಾದ ಕಸದ ಬುಟ್ಟಿಗಳನ್ನು ಕಡ್ಡಾಯವಾಗಿ ಇರಿಸುವುದು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಮತ ವೈ.ಎನ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶ್ರೀ ವೆಂಕಟೇಶ್ ಕೃಷಿ ಅಧಿಕಾರಿಗಳು, ಕೃಷಿ ಇಲಾಖೆ, ಶ್ರೀಮತಿ ಕುಸುಮಾ ಆಯರಹಳ್ಳಿ ಸಾಹಿತಿ ಪತ್ರಕರ್ತೆ, ಮೈಸೂರು, ಶ್ರೀಮತಿ ಹೇಮಲತಾ ಪ್ರವಾಸೋಧ್ಯಮ ಇಲಾಖೆ, ಡಾ. ಎಂ ಪ್ರಭು ಪ್ರಾಂಶುಪಾಲರು, ಡಾ. ಸೋಮಶೇಖರ್ ಮುಖ್ಯಸ್ಥರು ಸಮಾಜಕಾರ್ಯ ವಿಬಾಗ, ಜೆ.ಎಸ್,ಎಸ್, ಕಾಲೇಜು ಊಟಿ ರಸ್ಥೆ ಮೈಸೂರು, ಉಪನ್ಯಾಸಕರು, ಆರ್.ಎಲ್.ಹೆಚ್.ಪಿ ಸಿಬ್ಬಂದಿಗಳು ಹಾಗೂ 150ಕ್ಕೂ ಹೆಚ್ಚು ಯುವಜನರು ಭಾಗವಹಿಸಿದ್ದರು.
Views: 15