ಚಿತ್ರದುರ್ಗ 30: ನಗರದ ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳಿಂದ ಜನ ಜಾಗೃತಿ ಜಾಥನನ್ನು ಏರ್ಪಡಿಸಲಾಯಿತು.

ಪ್ಲಾಸ್ಟಿಕ್ ಬಳಕೆಯ ನಿಷೇಧ, ಪರಿಸರ ಜಾಗೃತಿ ಮೂಡಿಸಲು ನಗರದ ಪ್ರಮುಖ ಬೀದಿಗಳಲ್ಲಿ ಜಾಥವನ್ನು ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಲಾಯಿತು. ಜಾಥವನ್ನು ಶಾಲೆಯ ಅದ್ಯಕ್ಷರಾದ ಭಾಸ್ಕರ್. ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ. ಉದ್ಘಾಟಿಸಿದರು. ಶಾಲೆಯ ಪ್ರಾಚಾರ್ಯ ಸಂಪತ್ ಕುಮಾರ್ ಸಿ.ಡಿ ಮುಖ್ಯೋಪಾಧ್ಯಾಯ ರಾದ ವೆಂಕಟೇಶ್, ಹೆಡ್ ಕೋ ಆರ್ಡಿನೇಟರ್ ಬಸವರಾಜ್.ಕೆ, ಶಿಕ್ಷಕ ಗಿರೀಶ್ ಜಾಥದಲ್ಲಿ ಭಾಗವಹಿಸಿದ್ದರು.

ಬಿ.ಇಡಿ ವಿದ್ಯಾರ್ಥಿಗಳಾದ ನಿವೇದಿತ .ವಿ,ಚೇತನ್, ಧನಲಕ್ಷ್ಮಿ .ಎಚ್ ಎಮ್.,ರಾಮಸ್ವಾಮಿ ಬಿ, ರಾಕೇಶ್ ಹೆಗಡೆ, ಅಮೃತ, ಕೋಕಿಲ, ಭುವನ್, ರಾಧಿಕಾ, ರಮ್ಯಾ, ಸುಕನ್ಯ,ಕೀರ್ತನ, ನಿಶಾನ್ ನಾಯ್ಕ್
ಇನ್ನು ಮುಂತಾದವರು ನೇತೃತ್ವವನ್ನು ವಹಿಸಿದ್ದರು.
Views: 128