ನಿತ್ಯ ಭವಿಷ್ಯ| 08 ಸೆಪ್ಟಂಬರ್| : ಇಂದು ಯಾರನ್ನೂ ನೀವು ನಿಮಗಿಂತ ಕೇವಲವಾಗಿ ನೋಡುವುದು ಬೇಡ.

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಕೃಷ್ಣ ಪಕ್ಷದ ಪ್ರತಿಪತ್ ತಿಥಿ ಸೋಮವಾರ ಆರೋಗ್ಯ ಊರ್ಜಿತ, ಸಂಘಟನೆಯ ಫಲಶ್ರುತಿ, ದ್ವಂದ್ವದ ಮನಃಸ್ಥಿತಿ, ಉದ್ಯೋಗಕ್ಕೆ ನಿರುತ್ಸಾಹ, ವಿವಾಹಕ್ಕೆ ಒಪ್ಪಿಗೆ ಇವೆಲ್ಲ ಇಂದಿನ ವಿಶೇಷ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶೋಭನ, ಕರಣ : ಬಾಲವ, ಸೂರ್ಯೋದಯ – 06 – 22 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:53 – 09:26, ಗುಳಿಕ ಕಾಲ 14:02 – 15:34, ಯಮಗಂಡ ಕಾಲ 10:58 – 12:30

ಮೇಷ ರಾಶಿ :

ಯಾರ ಮೇಲೂ ದೂರುಗಳನ್ನು ಹೇಳದೇ ಅವರಿಂದ ಇರುವ ವಿಚಾರಗಳನ್ನು ಕೇಳಿ. ಹೂಡಿಕೆಯಿಂದ ಆರ್ಥಿಕವಾದ ಸಮಾಧಾನ‌ ಸಿಗಲಿದೆ. ಇಂದು ನೀವು ಪರರ ಇಂಗಿತವನ್ನು ಅರ್ಥಮಾಡಿಕೊಂಡು ಮಾತನಾಡುವಿರಿ. ಇಂದು ನೀವು ಅಂದುಕೊಂಡಂತೆ ಆಗಲಿದ್ದು ಅನುಕೂಲವೆನಿಸುವುದು. ಕುಟುಂಬದ ಜೊತೆ ಸಂತೋಷದಿಂದ ದಿನ ಕಳೆಯುವಿರಿ. ವಾಹನ ಖರೀದಿಯನ್ನು ಮಾಡಲು ತೆರಳುವಿರಿ. ಸ್ತ್ರೀಯರಿಂದ ನಿಮಗೆ ಅನೇಕ ಸಹಾಯವು ಆಗಬಹುದು. ಪ್ರತ್ಯಕ್ಷವಾಗಿ ಇಲ್ಲದ ಕಾರಣ ತಪ್ಪುಗಳನ್ನು ನಿಮ್ಮ‌ ಮೇಲೇ ಹಾಕುವವರಿದ್ದಾರೆ. ನಿಮಗೆ ಬರಬೇಕಾದ ಹಣವನ್ನು ಇಂದು ನೀವೇ ಭೌತಿಕವಾಗಿ ಹೋಗಿ ಪಡೆಯುವಿರಿ. ಖರ್ಚಿಗೆ ಬರುವ ಎಲ್ಲ ಮಾರ್ಗವನ್ನೂ ನೀವು ನಿಲ್ಲಿಸುವುದು ಉತ್ತಮ. ವ್ಯಾಪಾರದಲ್ಲಿ ಬೇಡಿಕೆ ಇದ್ದು ಪೂರೈಕೆ ಕಷ್ಟವಾಗಬಹುದು. ಬಂಧುಗಳ‌ ಮನೆಯಲ್ಲಿ ಉಳಿಯುವುದು ಅನಿವಾರ್ಯ ಆದೀತು. ಪತ್ನಿಯನ್ನು ದ್ವೇಷಿಸುವ ಮಾನಸಿಕತೆ ಉಂಟಾಗಲಿದೆ. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಸೂಕ್ಷ್ಮ ವ್ಯವಹಾರವನ್ನು ನಿರ್ವಹಿಸಲು ಸುಲಭವಾಗಿ ಸಾಧ್ಯ.

ವೃಷಭ ರಾಶಿ :

ಹೊಸ ವಸ್ತುಗಳ ಬಳಕೆ ಹೆಚ್ಚಾಗುವುದು. ನಿಮ್ಮ ಇಂಗಿತವನ್ನು ಅರಿತು ಬೇಕಾದ ಉಡುಗೊರೆಯನ್ನು ಕೊಡುವರು. ನಿಮ್ಮ ಆದಾಯವು ಇನ್ನೊಬ್ಬರ ಕಣ್ಣನ್ನು ಕುಕ್ಕಬಹುದು. ಇಂದು ನಿಮಗೆ ಹೊಸ ಉತ್ಪನ್ನಗಳ ಅವಶ್ಯಕತೆ ಇದ್ದರೆ ಮಾತ್ರ ಖರೀದಿಸಿ. ಆಹಾರದ ವ್ಯತ್ಯಾಸವು ಅನಾರೋಗ್ಯಕ್ಕೆ ಕಾರಣವಾಗಬಹುದು. ಮಾತಿನ ಮೇಲೆ ನಿಮಗೆ ಹಿಡಿತವಿರಲಿ. ಕಲಾವಿದರು ಅವಕಾಶಗಳನ್ನು ಕೇಳಿ ಪಡೆಯಬೇಕಾದೀತು. ಶತ್ರುಗಳ ಕಾಟವು ಬೇರೆ ಕೆಲಸವನ್ನು ನಿಧಾನ ಮಾಡಬಹುದು. ನಿಮ್ಮ ಯೋಜಿತ ಖರ್ಚು ಮೊದಲೇ ಆಗಿದ್ದು ನಿಮಗೆ ಸ್ವಲ್ಪ ಆತಂಕವಾಗಬಹುದು. ಇಂದು ನಿಮಗೆ ಕಛೇರಿಯ ಘಟನೆಗಳೂ ನೆನಪಾಗಬಹುದು. ಅತಿಯಾದ ಕೆಲಸದಿಂದ ಆರೋಗ್ಯವು ಕೆಡಬಹುದು. ನಿಮ್ಮ ಮಾತನ್ನು ನಂಬಲು ಅಸಾಧ್ಯವಾಗಬಹುದು. ವಿರುದ್ಧದ ಹೇಳಿಕೆಗಳಿಗೆ ಹೆಚ್ಚು ಕಿವಿಗೊಡುವುದು ಬೇಡ. ನಿಮ್ಮವರೇ ನಿಮ್ಮ‌ ಬಗ್ಗೆ ಆಪಾದನೆಯನ್ನು ಮಾಡುವರು. ನಿಮ್ಮ ಮಾತಿನಲ್ಲಿ ಇರುವ ಸುಳ್ಳು ಇತರರಿಗೂ ಗೊತ್ತಾಗುವುದು. ಏನನ್ನಾದರೂ ಹೇಳಿ ಅವಮಾನ ಮಾಡಿಕೊಳ್ಳುವ ಸಾಧ್ಯತೆ ಇದೆ. ಯಾರಿಗಾದರೂ ಇಂದು ಸಾಲವಾಗಿ ಹಣವನ್ನು ಕೊಡುವಿರಿ.

ಮಿಥುನ ರಾಶಿ :

ಇನ್ನೊಬ್ಬರನ್ನು ನೋಡಿ ಹೊಟ್ಟೆಕಿಚ್ಚು ಬಂದರೆ ಬೇರೆ ಯಾವುದಾದರೂ ರೀತಿಯಲ್ಲಿ ಅದನ್ನು ಆರಿಸಿಕೊಳ್ಳುವಿರಿ. ಹಲವು ವೈಷಮ್ಯಗಳಿಂದ ನಿಮಗೆ ಮಾನಸಿಕವಾಗಿ ಕಷ್ಟವಾಗಬಹುದು. ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಒತ್ತಡ ಇರುವುದು. ಆರ್ಥಿಕತೆಯಿಂದ ಬೀಗುವುದು ಬೇಡ. ಮನಸ್ಸಿನಲ್ಲಿ ನಾನಾತರಹದ ಆಲೋಚನೆಗಳು ಬರಬಹುದು. ದೂರ ಪ್ರಯಾಣ ಮಾಡಲಿದ್ದು ಇಷ್ಟದೇವರನ್ನು ಸ್ಮರಿಸಿಕೊಂಡು ಹೋಗುವುದು ಉತ್ತಮ. ಓದಿನ ಕಡೆ ಅಥವಾ ಅಧ್ಯಯನದ ಬಗ್ಗೆ ಆಸಕ್ತಿ ಹೆಚ್ಚಾಗುವುದು. ವಾಹನವನ್ನು ಚಲಾಯಿಸಲು ಮನಸ್ಸು ಮಾಡುವಿರಿ. ಪರಸ್ಪರ ವಿರುದ್ಧ ಆಹಾರದಿಂದ ನಿಮ್ಮ ಆರೋಗ್ಯವು ಕೆಡಬಹುದು. ನೀವು ಬಿದ್ದಾಗ ಯಾರೂ ಮೇಲೆತ್ತಲೆ ಬಾರರು. ನಿಮ್ಮನ್ನು ಉತ್ತಮಗೊಳಿಸಿಕೊಳ್ಳುವ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಅಸಹಜ ನಡೆಯಿಂದ ಬೇರೆಯವರಿಗೆ ಬೇಸರವಾದೀತು. ಕೆಲಸ ಕೊಡಿಸುವುದಾಗಿ ನಿಮ್ಮನ್ನು ನಂಬಿಸುವರು. ಆಪ್ತರಿಗೆ ನಿಮ್ಮ ಒಡಲಾಳವನ್ನು ಹೇಳಿಕೊಳ್ಳುವಿರಿ. ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು. ಅನಗತ್ಯ ಮಾತುಗಳಿಗಿಂತ ಮೌನವೇ ಲೇಸು.

ಕರ್ಕಾಟಕ ರಾಶಿ :

ವಿದ್ಯಾರ್ಥಿಗಳು ಗೊತ್ತಾಗದ ಸಂಗತಿಯನ್ನು ಹೇಳಿಕೊಳ್ಳಲು ಮುಜುಗರ ಪಡಬಹುದು. ಸಹನೆಯ ಕಟ್ಟೆಯನ್ನು ಒಡೆಯಲು ನಿಮಗೆ ಹೆಚ್ಚು ಸಮಯ ಬೇಕಿಲ್ಲ. ಯಾರದೋ ಕೆಳಗೆ ಕೆಲಸ ಮಾಡುವ ಮನಸ್ಸು ಹೋಗುವುದು. ಭೂಮಿಯಿಂದ ಲಾಭ ಪಡೆಯುವ ತಂತ್ರವನ್ನು ಮಾಡುವಿರಿ. ಒಳಗೆ ಕ್ರೂರ ಹೊರಗೆ ಸೌಮ್ಯವಾದ ಮುಖವಾಡ ಧರಿಸುವಿರಿ. ಮಕ್ಕಳ ವಿವಾಹದ ಚಿಂತೆ ನಿಮಗಿರಲಿದೆ. ಪ್ರೀತಿಯಿಂದ ಕೊಟ್ಟಿದ್ದನ್ನು ಮರಳಿ ಕೇಳುವುದು ಬೇಡ. ಸಂಗಾತಿಯ ಜೊತೆ ಕಾಲು ಕೆರದುಕೊಂಡು ಜಗಳಕ್ಕೆ ಹೋಗುವುದು ಬೇಡ. ನಿಮ್ಮನ್ನು ಇನ್ನೊಬ್ಬರ ಸ್ಥಳದಲ್ಲಿ ಕಲ್ಪನೆ ಮಾಡಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯು ನಿಮಗೆ ಸಂತೋಷವಾಗುವುದು. ನಿಮ್ಮವರ ಜೊತೆಯೇ ಎಲ್ಲ ವ್ಯವಹಾರವನ್ನು ಮಾಡಿ. ನಿಮಗೆ ಕೆಲವು ವಿಚಾರಗಳನ್ನು ಮನವರಿಕೆ ಮಾಡಿಸುವುದು ಕಷ್ಟ. ಹಳೆಯ ರೋಗವು ಪುನಃ ಕಾಣಿಸಿಕೊಳ್ಳಬಹುದು. ನಿಮ್ಮ ತಮಾಷೆಯು ಅತಿರೇಕವಾದೀತು. ಎಲ್ಲವನ್ನೂ ಬದಲಿಸುತ್ತೇನೆ ಎಂಬ ಅಧಿಕಾರದ ಮಾತು ವ್ಯರ್ಥವಾಗಬಹುದು. ಯಾರನ್ನೂ ನೀವು ನಿಮಗಿಂತ ಕೇವಲವಾಗಿ ನೋಡುವುದು ಬೇಡ.

ಸಿಂಹ ರಾಶಿ :

ಅನಿವಾರ್ಯತೆಯನ್ನು ಸೃಷ್ಟಿಮಾಡಿಕೊಳ್ಳದೇ ಇರುವಂತೆ ಕೆಲಸ ಮಾಡುವಿರಿ. ನಂಬಲರ್ಹರಿಂದ ಮಾತ್ರ ಸತ್ಯಾಸತ್ಯತೆಯನ್ನು ತಿಳಿಯಿರಿ. ನೀವು ಇಂದು ಆಪ್ತರಿಂದ ಅಲ್ಪ ಹಣವನ್ನು ಸಾಲವಾಗಿ ಪಡೆಯುವಿರಿ. ಇಂದಿನ‌ ಕೆಲಸದಲ್ಲಿ ಹೆಚ್ಚಿನ ಮುನ್ನಡೆಯಾಗಲಿದ್ದು ನಿಮ್ಮ ಪ್ರಯತ್ನದ ಬಗ್ಗೆ ವಿಶ್ವಾಸವು ಮೂಡುವುದು. ಯಾರಾದರೂ ಸುಳ್ಳು ಹೇಳಿ ಸರಳವಾಗಿ ನಿಮ್ಮನ್ನು ನಂಬಿಸುವರು. ಆಕಸ್ಮಿಕವಾದ ವಿಷಯಗಳು ನಿಮಗೆ ಕ್ಲೇಶವನ್ನು ಕೊಡಬಹುದು. ಅಶಿಸ್ತಿನ ಜೀವನವು ನಿಮಗೆ ಅಸಮಾಧನಾವನ್ನು ಕೊಡಬಹುದು. ನಿಮ್ಮ ಪ್ರಾರ್ಥನೆ ಫಲಿ ಕೊಟ್ಟಿದ್ದು ಅಚ್ಚರಿಯಾಗಲಿದೆ. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ನೀವು ಇರುವುದಿಲ್ಲ. ಆತ್ಮೀಯರ ಭೇಟಿಯು ಆಕಸ್ಮಿಕವಾಗುವುದು. ಅಲ್ಪದರಲ್ಲಿ ತೃಪ್ತಿಪಡಬೇಕಾದೀತು. ನೀವು ಸಂತೋಷವಾಗಿರಲು ನಾನಾ ಕಾರಣಗಳನ್ನು ಹುಡುಕಬಹುದು. ಅನ್ಯರಿಂದ ಸಂತೋಷವನ್ನು ಪಡೆಯುವಿರಿ. ಉದ್ಯೋಗಕ್ಕೆ ವಿದೇಶದತ್ತ ಗಮನವಿರುವುದು. ಇನ್ನೊಬ್ಬರ ಮೇಲಿನ ದ್ವೇಷವನ್ನು ನಿಲ್ಲಿಸಲಾಗದು.

ಕನ್ಯಾ ರಾಶಿ :

ಶಕ್ತಿ ಮೀರಿದ ದುಡುಕಿಯಿಂದ ಅನ್ಯರ ಮನಸ್ಸು ಕರಗಿ, ಹೊಸ ದಾರಿಯನ್ನು ತೋರಿಸಬಹುದು. ಆತ್ಮಬಲವಿದ್ದರೆ ಯಾವುದಕ್ಕೂ ಪಲಾಯನ ಮಾಡಬೇಕಿಲ್ಲ. ಆರೋಪವನ್ನೂ ಅಪವಾದವನ್ನೂ ಧೈರ್ಯದಿಂದ ಎದುರಿಸುವಿರಿ. ನಿಮ್ಮ ಉದ್ಯಮಕ್ಕೆ ಸಲಹೆಗಾರರನ್ನು ನಿಯಮಿಸಿಕೊಳ್ಳುವ ಸಾಧ್ಯತೆ ಇದೆ. ತಾಯಿಯ ಕಡೆಯಿಂದ ಲಾಭವನ್ನು ನೀವು ನಿರೀಕ್ಷಿಸುವಿರಿ. ಯಾರಾದರೂ ನಿಮ್ಮ ಮೇಲೆ ಅಧಿಕಾರವನ್ನು ಚಲಾಯಿಸಬಹುದು. ನೂತನ ವಸ್ತ್ರಗಳನ್ನು ಖರೀದಿ ಮಾಡುವಿರಿ. ನಿಮ್ಮ ಆದಾಯದ ಮೂಲವು ಅಧಿಕವಾಗಬಹುದು. ಕೆಲಸದಲ್ಲಿ ಎಂದಿನ ಪ್ರಾಮಾಣಿಕತೆ ಇರಲಿ. ಪಾಲುದಾರಿಕೆಯಿಂದ ಹೊರಬರಲು ಬಯಸುವಿರಿ. ಅನ್ಯ ಮನಃಸ್ಥಿತಿಯಿಂದ ಏಕಾಗ್ರತೆಗೆ ಭಂಗ. ಸ್ನೇಹಿತರ ವಿಚಾರದಲ್ಲಿ ನೀವು ಮೃದು‌ಮನಸ್ಸನ್ನು ಹೊಂದಿರುವಿರಿ. ವಿವಾಹವು ನಿಶ್ಚಯವಾಗುವ ಸಾಧ್ಯತೆ ಇದೆ. ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ. ಎಲ್ಲವನ್ನೂ ಬಲ್ಲವರಂತೆ ತೋರಿಸಿಕೊಳ್ಳುವಿರಿ. ನಿಮ್ಮ ಉತ್ಸಾಹಕ್ಕೆ ಸರಿಯಾದ ಬೇರೆ ದಾರಿ ಸಿಗಲಿದೆ.

ತುಲಾ ರಾಶಿ :

ತುರ್ತು ಸಂದರ್ಭಗಳು ಬಂದಾಗ ಬಾಕಿಯ ಕಾರ್ಯಗಳನ್ನು ಬಿಡದೇ ವಿಧಿ ಇಲ್ಲ.‌ ನಿಮಗೆ ಬರಲಿರುವ ಕಾರ್ಯದಿಂದ ನೀವು ದೂರ ಸರಿಯುವಿರಿ. ಇಂದು ವ್ಯಾಪಾರದ ಪೈಪೋಟಿಯು ನಿಮ್ಮ ನೆಮ್ಮದಿಯನ್ನು ಕೆಣಕಬಹುದು. ನಿಮ್ಮ ಮನಸ್ಸಿನಲ್ಲಿ ಅವ್ಯಕ್ತವಾಗಿ ಆತಂಕವು ಮನೆ ಮಾಡಬಹುದು. ಇಂದು ಕೈಗೊಂಡ ಪ್ರವಾಸದಲ್ಲಿ ನಿಮಗೆ ಅಸಮಾಧನ ಇರಲಿದೆ. ಮನೆಯಲ್ಲಿ ನಡೆಯುವ ಶುಭಕಾರ್ಯಗಳು ಮುಂದಕ್ಕೆ ಹೋಗಬಹುದು. ಸಹನೆಯಿಂದ ಆಗುವ ಲಾಭವು ಅನುಭವವೇದ್ಯವಾಗಿರಲಿದೆ. ಮಕ್ಕಳು ನಿಮ್ಮ ಮಾತನ್ನು ಕೇಳದೇ ಸ್ವೇಚ್ಛೆಯಿಂದ ನಡೆದುಕೊಳ್ಳುವರು.‌ ಪದೋನ್ನತಿಯನ್ನು ನೀವು ಬಯಸಲಿದ್ದೀರಿ. ಕೆಲವರಿಂದ ಅನಿರೀಕ್ಷಿತವಾದುದು ಜರುಗಬಹುದು. ಭೂಮಿಯ ವ್ಯವಹಾರವು ಲಾಭದಾಯಕವಾಗಿಲ್ಲ. ಅಲ್ಪ ಸುಖಕ್ಕಾಗಿ ನೀವು ಹೆಚ್ಚು ಶ್ರಮಿಸುವಿರಿ. ನಿಮ್ಮ ಆಡಿದ ಮಾತಿಗೆ ಅರ್ಥವಿರಲಿ. ಕಲಾವಿದರು ವಿದೇಶಗಳಿಗೆ ಹೋಗುವ ಅವಕಾಶ ಇರುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು. ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿಯೇ ಮುಂದುವರಿಯಲಿ.

ವೃಶ್ಚಿಕ ರಾಶಿ :

ನಿಮಗೆ ಕೊಟ್ಟ ಹಣದ ಬಗ್ಗೆ ದಾಖಲೆಯನ್ನು ಪಡೆಯಿರಿ. ಭವಿಷ್ಯ ದೃಷ್ಟಿಯಿಂದ ಇದು ಅತಿ ಅವಶ್ಯಕ. ವೃತ್ತಿಯ ಬಗ್ಗೆ ನಿಮಗೆ ಕಲ್ಪನೆ ಸರಿಯಾಗಿ ಇರದು. ನೀವು ಎಲ್ಲವೂ ದೈವಾನುಗ್ರದಂತೆ ಆಗುತ್ತದೆ ಎಂದು ಸುಮ್ಮನಿರದೇ ಪ್ರಯತ್ನವನ್ನೂ ಮಾಡಿ. ಪ್ರಯೋಜನಕ್ಕೆ ಬಾರದ ಸಂಗತಿಗಳನ್ನು ಮಾತನಾಡಿ ಸಮಯ ಹಾಳು ಮಾಡುವಿರಿ. ಸಂಗಾತಿಯ ಮೌನವು ನಿಮ್ಮಲ್ಲಿ ಆತಂಕವನ್ನು ಹುಟ್ಟಿಸಬಹುದು. ನಿಯಮ ಉಲ್ಲಂಘನೆಯನ್ನು ಮಾಡಿ ದಂಡ ಕಟ್ಟಬಹುದು. ಇಷ್ಟವಾದ ವಸ್ತುವು ನಷ್ಟವಾಗಿ ಸಂಕಟ ಪಡುವಿರಿ. ನಿಮಗೆ ಸಂಬಂಧಿಸದ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದು ಬೇಡ. ಧಾರ್ಮಿಕ ಕಾರ್ಯದಲ್ಲಿ ತೊಡಗಿದವರಲ್ಲಿ ಶ್ರದ್ಧೆ ಕಾಣಿಸುವುದು. ಸ್ವೇಚ್ಛೆಯಿಂದ ವಾಹನ ಸಂಚಾರ ಮಾಡಿ, ದಂಡವನ್ನು ವಿಧಿಸಿಕೊಳ್ಳಬೇಕಾಗುವುದು. ಮನಸ್ಸಿನಲ್ಲಿ ಅಧಿಕ ಚಿಂತೆಗಳು ಸುಳಿದಾಡುವುದು. ನಿಮ್ಮನ್ನು ಅಪರಿಚಿತರು ಭೇಟಿ ಮಾಡಬಹುದು. ಅವಶ್ಯಕತೆಗೆ ಇದ್ದಷ್ಟನ್ನು ಮಾತ್ರ ಹೇಳಿ. ಉದ್ಯೋಗದಲ್ಲಿ ಸರಿಯಾದ ಮಿತ್ರರು ಸಿಗಬಹುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು.

ಧನು ರಾಶಿ :

ಮುಂದಿನ ಹಂತಕ್ಕೆ ಹೋದಷ್ಟೂ ಎಚ್ಚರಿಕೆ ಬಹಳ ಅಗತ್ಯ. ಉದ್ಯಮಿಗಳು ಬಹಳ ಓಡಾಟದಿಂದ ಲಾಭವನ್ನು ಮಾಡಿಕೊಳ್ಳಬೇಕು. ಸರ್ಕಾರಿ ಉದ್ಯೋಗವು ಕಿರಿಕಿರಿ ಎನಿಸಿದರೂ ನೀವು ಅದನ್ನು ಬಿಡಲಾರಿರಿ. ನಿಮಗೆ ಶತ್ರುಗಳು ಪಾಠಕಲಿಸುವರು. ನಿಮ್ಮನ್ನು ವ್ಯಕ್ತಪಡಿಸಲಾಗದ ಸಮಸ್ಯೆಯೊಂದು ಕಾಡುತ್ತಿದ್ದು ಅದನ್ನು ಪರಿಹಾರ ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಸಣ್ಣ ಕಿರಿಕಿರಿ ಆರಂಭವಾಗುವುದು. ನಿಮ್ಮ ಇಷ್ಟದವರನ್ನು ಭೇಟಿಯಾಗುವಿರಿ. ಹಳೆಯ ವಸ್ತುಗಳ ಮಾರಾಟದ ಮೂಲಕ ಸಾಲದ ಮರುಪಾವತಿ ಆಗುವುದು. ದ್ವೇಷಭಾವವನ್ನು ಬಿಟ್ಟು ಮುಂದುವರಿಯುವುದು ಉತ್ತಮ. ಒತ್ತಡದಿಂದ ನಿಮಗೆ ಕೆಲಸಗಳು ಸೂಚಿಸದೇ ಹೋಗಬಹುದು. ಬಂಧುಗಳನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳುವಿರಿ. ಹಿರಿಯರಿಂದ ನಿಮಗೆ ಸರಿಯಾದ ಮಾರ್ಗದರ್ಶನ ಸಿಗದು. ನಿಮ್ಮವರ ವರ್ತನೆಯು ನಿಮ್ಮ‌ ದುಃಖಕ್ಕೆ ಕಾರಣವಾಗಬಹುದು. ನಿಮ್ಮಿಂದ ಹೆಚ್ಚು ಉಪಯುಕ್ತವಾದ ಕೆಲಸಗಳು ಆಗಬಹುದು. ನಿಮ್ಮ ಒಳಮನಸ್ಸು ಹೇಳಿದಂತೆ ಆಗುವುದು.

ಮಕರ ರಾಶಿ :

ನೀವು ಬೆಳೆಸಿದ ವ್ಯಕ್ತಿಗಳು ನಿಮ್ಮ ವಿರುದ್ಧ ಬರಬಹುದು. ಅವರಿಂದ ತಪ್ಪಿಸಿಕೊಳ್ಳುವುದು ಸುಲಭಕ್ಕೆ ಆಗದು. ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳುವ ಬಗ್ಗೆ ಆಲೋಚಿಸುವಿರಿ. ಆರ್ಥಿಕ ಕ್ಷೇತ್ರದ ಜನರಿಗೆ ತೊಂದರೆ ಬಾರದೇ ಕಾರ್ಯಗಳು ಮುಗಿಯುವುದು. ಅನಿರೀಕ್ಷಿತ ದ್ರವ್ಯದ ಲಾಭದಿಂದ ನಿಮಗೆ ಸಂತೋಷವಾಗಲಿದೆ. ಫಲಿತಾಂಶಕ್ಕೆ ಮೊದಲೇ ನಿಮಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ನಿಷ್ಠುರದ ನಿಮ್ಮ ಮಾತಗಳನ್ನು ಕೇಳಿ ನಿಮ್ಮ ಬಗ್ಗೆ ಭಾವವು ಬದಲಾಗಬಹುದು. ಕಳೆದುಕೊಂಡಿದ್ದನ್ನು ಹೆಚ್ಚು ನೆನಪಿಸಿಕೊಳ್ಳುವಿರಿ. ಪುತ್ರೋತ್ಸವದ ಸಂತೋಷವು ಇರಲಿದೆ. ಸಾಮಾನ್ಯ ಜ್ಞಾನದ ಕೊರತೆಯು ನಿಮಗೆ ತಿಳಿಯಬಹುದು. ನಿಮ್ಮ ಕಷ್ಟಗಳು ಇತರರಿಗೆ ಬಾಲಿಶವೆನಿಸುವುದು. ಸಂತೋಷಕ್ಕಾಗಿ ಯಾರನ್ನೋ ಅವಲಂಬಿಸಬೇಕಿಲ್ಲ. ದಾಂಪತ್ಯದಲ್ಲಿ ಪರಸ್ಪರ‌ ವೈರಿಗಳಂತೆ ಕಚ್ಚಾಡುವುದು ಬೇಡ. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು. ಬೇಕಾದ ವಸ್ತುವು ಕಣ್ಮರೆಯಾಗಿ ಹುಡುಕಾಟ ಮಾಡುವಿರಿ.

ಕುಂಭ ರಾಶಿ :

ಮನೆಯವ ಸದಸ್ಯರನ್ನು ನಿಮ್ಮತ್ತ ಸೆಳೆಯುವ ಪ್ರಯತ್ನ ಸಾಗುವುದು. ಉನ್ನತ ಸ್ಥಾನಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸಣ್ಣ ಪ್ರಯತ್ನವಾದರೂ ಅನುಕೂಲಕರವಾಗುವುದು. ಇಂದು ನಿಮ್ಮ ಪರಿಧಿಯನ್ನು ಮೀರಿ ವರ್ತಿಸುವಿರಿ. ಮನಸ್ಸಿನ ನೆಮ್ಮದಿಯನ್ನು ನೀವು ಹಾಳುಮಾಡಿಕೊಳ್ಳಲಿದ್ದೀರಿ. ಸಂಗಾತಿಯಿಂದ ಸಿಗುವ ಸುಖದಿಂದ ನೀವು ವಂಚಿತರಾಗಬಹುದು. ದೀರ್ಘಕಾಲದ ಕಾರ್ಯಕ್ಕೆ ಅಲ್ಪವಿರಾಮ ಬೇಕಾಗುವುದು. ನಿಮ್ಮ ನಿರೀಕ್ಷೆಯು ಹುಸಿಯಾಗಬಹುದು. ಉತ್ತಮವಾದ ಆಯ್ಕೆಯಲ್ಲಿ ನೀವು ಸೋಲುವಿರಿ. ನೀವು ಇಂದು ಅಸಹಜವಾಗಿ ವರ್ತಿಸುವಿರಿ. ಆಲಸ್ಯದ ಕಾರಣ ಕಾರ್ಯಕ್ಕೆ ನೆಪವನ್ನು ಕೊಡುವಿರಿ. ನಿಮ್ಮ ಬೆಳವಣಿಗೆಗೆ ಕಾರಣರಾದವರನ್ನು ಕೃತಜ್ಞತೆಯಿಂದ ಸ್ಮರಿಸಿ. ಸಂಬಂಧಗಳು ನಿಮ್ಮ ಜೊತೆ ಶಾಶ್ವತವಾಗಿ ಇರಲಾರದು ಎಂಬ ಬೇಸರವೂ ಇರಲಿದೆ. ಮನಸ್ಸನ್ನು ಖಾಲಿ ಬಿಡದೇ ಏನನ್ನಾದರೂ ಆಲೋಚಿಸಿ. ಕುಟುಂಬದ ಭೇದವನ್ನು ಬಹಿರಂಗಪಡಿಸುವುದು ಬೇಡ.

ಮೀನ ರಾಶಿ :

ವಾತಾವರಣವು ಪ್ರತಿಕೂಲವಾದ ಕಾರಣ ಉದ್ಯೋಗದ ಸ್ಥಳವನ್ನು ಬದಲಾವಣೆ ಮಾಡಬೇಕಾದೀತು. ಸಾಮಾಜಿಕ ಕಾರ್ಯದಲ್ಲಿ ಬೆಂಬಲ ಪಡೆಯುವಿರಿ. ನಿಮ್ಮ ವ್ಯಾಪಾರದಲ್ಲಿ ಇಂದು ವೆಚ್ಚಗಳು ಕಡಿಮೆಯಾಗಿ ಆದಾಯವೂ ಎಣಿಕೆಗಿಂತ ಅಧಿಕವಾಗಲಿದೆ. ದಾಂಪತ್ಯದ ಸುಖವು ನಿಮಗೆ ಹೆಚ್ಚು ಇಷ್ಟವಾದೀತು. ಮನಸ್ಸಿನಲ್ಲಿ ಸಂಯಮವಿರಲಿ. ವೈವಾಹಿಕ ಜೀವನಕ್ಕೆ ಬಂಧುಗಳಿಂದ ಒತ್ತಡ ಬರಬಹುದು. ಆತುರದಿಂದ ಏನ್ನಾದರೂ ಮಾಡಿಕೊಳ್ಳಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳಲು ಹೋಗಬೇಡಿ. ದೂರ ಪ್ರಯಾಣದಲ್ಲಿ ದಾರಿ ತಪ್ಪಬಹುದು. ನಿಮ್ಮಲ್ಲಿನ ಚೈತನ್ಯವೇ ನಿಮಗೆ ನಿರಂಕುಶ ಶಕ್ತಿಯನ್ನು ನೀಡುವುದು. ನಿಮ್ಮ ದಾರಿಯು ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ವಸ್ತುಗಳ ವಿಚಾರದಲ್ಲಿ ನೀವು ಮೋಸ ಹೋಗಬಹುದು. ಖರೀದಿಯನ್ನು ಬಹಳ ಸಂತೋಷದಿಂದ ಮಾಡುವಿರಿ. ಸಂಗಾತಿಗೆ ಬೇಕಾದ ವಸ್ತುಗಳನ್ನು ಕೊಡುವಿರಿ. ಇನ್ನೊಬ್ಬರ ಬಗ್ಗೆ ಇಂದು ನಿಮಗೆ ಹೆಚ್ಚು ಕುತೂಹಲ ಇರಲಿದೆ. ಅನಪೇಕ್ಷಿತ ಚರ್ಚೆಯಿಂದ ನೀವು ದೂರವಿರುವಿರಿ. ಇಂದು ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುವಿರಿ.

Views: 52

Leave a Reply

Your email address will not be published. Required fields are marked *