ನಿತ್ಯ ಭವಿಷ್ಯ| 3 ಸೆಪ್ಟೆಂಬರ್| ಇಂದು ಈ ರಾಶಿಯವರಿಗೆ ತಾಯಿಯ ಸಹಾಯ ಸಿಗುವುದು.

ಶಾಲಿವಾಹನ ಶಕೆ: 1948

ಸಂವತ್ಸರ: ವಿಶ್ವಾವಸು

ಅಯನ: ದಕ್ಷಿಣಾಯನ

ಋತು: ವರ್ಷ

ಚಾಂದ್ರ ಮಾಸ: ಭಾದ್ರಪದ

ಸೌರ ಮಾಸ: ಸಿಂಹ

ಮಹಾನಕ್ಷತ್ರ: ಪೂರ್ವಾಫಲ್ಗುಣೀ

ವಾರ: ಬುಧವಾರ

ಪಕ್ಷ: ಶುಕ್ಲ

ತಿಥಿ: ಏಕಾದಶೀ

ನಿತ್ಯನಕ್ಷತ್ರ: ಉತ್ತರಾಷಾಢಾ

ಯೋಗ: ವೈಧೃತಿ

ಕರಣ: ವಣಿಜ

ಸೂರ್ಯೋದಯ: 06:21 AM
ಸೂರ್ಯಾಸ್ತ: 06:41 PM

ಇಂದಿನ ಶುಭಾಶುಭ ಕಾಲಗಳು:

ರಾಹುಕಾಲ: 12:32 – 14:04

ಗುಳಿಕ ಕಾಲ: 10:59 – 12:32

ಯಮಗಂಡ ಕಾಲ: 07:54 – 09:27

ಇಂದಿನ ರಾಶಿಫಲ

ಮೇಷ

ಉದ್ದೇಶ ಶುದ್ಧವಾಗಿದ್ದು ಕಾರ್ಯಗಳು ಯಶಸ್ವಿಯಾಗುತ್ತವೆ. ಶತ್ರುಗಳನ್ನು ಎದುರಿಸಲು ಜಾಗರೂಕತೆ ಅಗತ್ಯ. ಉದ್ಯೋಗದಲ್ಲಿ ಅವಕಾಶಗಳು ಬರುತ್ತವೆ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ. ಸಂಗಾತಿಯಿಂದ ಸಹಕಾರ ದೊರೆಯುವುದು.

ವೃಷಭ

ಹಣದ ವ್ಯಯ ಹೆಚ್ಚಾಗುವುದು. ಮನೆಯ ನಿರ್ಮಾಣದಲ್ಲಿ ಗೊಂದಲ. ಕುಟುಂಬದಲ್ಲಿ ಸೌಖ್ಯ ಬಯಸುವಿರಿ. ಮಕ್ಕಳೊಂದಿಗೆ ಸ್ವಾತಂತ್ರ್ಯದ ಹಂಬಲ. ಇಂದಿನ ಕೆಲಸಗಳು ವಿಳಂಬವಾಗಬಹುದು.

ಮಿಥುನ

ವಿದ್ಯಾರ್ಥಿಗಳಿಗೆ ಭಯ ನಿವಾರಣೆ ಅಗತ್ಯ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಹೊಸ ಯಂತ್ರ ಖರೀದಿಸುವ ಅನಿವಾರ್ಯತೆ. ಬಂಧುಗಳಿಂದ ಪ್ರಶಂಸೆ. ಮಹಿಳೆಯರು ಸ್ವ ಉದ್ಯೋಗದತ್ತ ಆಸಕ್ತಿ ತೋರುವ ಸಾಧ್ಯತೆ.

ಕರ್ಕಾಟಕ

ಹಣ ಸಿಗುವುದರಲ್ಲಿ ಅಡಚಣೆ. ಕೆಲಸದಲ್ಲಿ ಬದಲಾವಣೆ ಬಯಸುವಿರಿ. ಆತುರದ ನಿರ್ಧಾರ ತೊಂದರೆ ತರಬಹುದು. ಪಿತ್ರಾರ್ಜಿತ ಆಸ್ತಿಯಲ್ಲಿ ಆಸಕ್ತಿ. ಮಾನಸಿಕ ಒತ್ತಡ ಹೆಚ್ಚಾಗುವುದು.

ಸಿಂಹ

ಸಣ್ಣ ಅಪಘಾತಗಳಿಂದ ಎಚ್ಚರಿಕೆ. ವಿವಾಹ ಪ್ರಸ್ತಾಪಗಳು ವಿಳಂಬವಾಗುವುದು. ಕೆಲಸದಲ್ಲಿ ಕಲಹ ಸಾಧ್ಯತೆ. ವಾಹನ ಜಾಗರೂಕತೆಯಿಂದ ಚಲಾಯಿಸಬೇಕು. ಪ್ರವಾಸಕ್ಕೆ ಹೋಗುವ ಸೂಚನೆ.

ಕನ್ಯಾ

ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ. ಹಳೆಯ ರೋಗಕ್ಕೆ ಪರಿಹಾರ ಸಿಗುವುದು. ಗೃಹನಿರ್ಮಾಣದಲ್ಲಿ ವಿಘ್ನ. ಆಪ್ತರ ಜೊತೆ ಪ್ರಯಾಣ. ಪ್ರೇಮ ಸಂಬಂಧದಲ್ಲಿ ಅಡಚಣೆ. ನೀರಿನ ಪ್ರದೇಶದಲ್ಲಿ ಎಚ್ಚರಿಕೆ.

ತುಲಾ

ಉದ್ಯೋಗದಲ್ಲಿ ಉತ್ತಮ ಅವಕಾಶ. ಆಪ್ತರಿಂದ ಸಹಕಾರ ದೊರೆಯುವುದು. ಭವಿಷ್ಯದ ಯೋಜನೆ ಹಂಚಿಕೊಳ್ಳುವಿರಿ. ಮಕ್ಕಳ ವಿವಾಹ ವಿಚಾರದಲ್ಲಿ ಓಡಾಟ. ತಪ್ಪನ್ನು ಒಪ್ಪಿಕೊಂಡು ಕಲಹ ನಿವಾರಣೆ.

ವೃಶ್ಚಿಕ

ಸ್ಪರ್ಧೆಯಲ್ಲಿ ಯಶಸ್ಸು. ಕುಟುಂಬದ ಸಣ್ಣ ಕಲಹ. ಸ್ನೇಹಿತರಿಂದ ಉಡುಗೊರೆ ಸಿಗುವುದು. ಹಣದ ನಿರ್ವಹಣೆಯಲ್ಲಿ ಜಾಗರೂಕತೆ ಅಗತ್ಯ. ಉದ್ಯೋಗದಲ್ಲಿ ಅಸಹಾಯಕ ಭಾವನೆ. ಅಪರಿಚಿತರ ಜೊತೆ ಎಚ್ಚರಿಕೆ.

ಧನು

ಅಧಿಕಾರ ಹಸ್ತಾಂತರ ಸಂಭ್ರಮ. ವಿದ್ಯಾಭ್ಯಾಸ ಪ್ರಗತಿ. ಸ್ನೇಹಿತರಿಗಾಗಿ ಸಾಲ ಮಾಡುವ ಸಾಧ್ಯತೆ. ಸಹೋದ್ಯೋಗಿಗಳ ವರ್ತನೆಯಲ್ಲಿ ಅನುಮಾನ. ಸೇವಾ ಮನೋಭಾವ ಹೆಚ್ಚಾಗುವುದು.

ಮಕರ

ಕುಟುಂಬ ಕಲಹಗಳಿಂದ ಪಾಠ. ಆಕಸ್ಮಿಕ ಧನಲಾಭ. ನಿದ್ರಾಹೀನತೆ ಕಾಡುವುದು. ಹೊಸ ಸ್ನೇಹ ಸಂಬಂಧ. ಸಹೋದರರಿಂದ ಸಹಕಾರ. ಅತಿಯಾದ ವಾದವಿವಾದ ತಪ್ಪಿಸುವುದು ಉತ್ತಮ.

ಕುಂಭ

ಸಹೋದರರ ಸಹಕಾರ. ಕುಟುಂಬದಲ್ಲಿ ಬಾಂಧವ್ಯ ಗಟ್ಟಿಯಾಗುವುದು. ಕಾನೂನು ವ್ಯವಹಾರದಲ್ಲಿ ಜಯ. ಆರ್ಥಿಕ ತೊಂದರೆ ನಿಭಾಯಿಸುವ ಸಾಮರ್ಥ್ಯ. ಸಮಾಜಮುಖಿ ಕೆಲಸಗಳಲ್ಲಿ ತೊಡಗುವಿರಿ.

ಮೀನ

ಧಾರ್ಮಿಕ ನಂಬಿಕೆ ಗಟ್ಟಿಯಾಗುವುದು. ಹಣ ಬಂದ ಹಾಗೇ ಹೋಗುವುದು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯ. ತಾಯಿಯ ಸಹಾಯ ಸಿಗುವುದು. ಭೂಮಿ ಖರೀದಿ ಆಲೋಚನೆ ಸಾಧ್ಯ.

Views: 34

Leave a Reply

Your email address will not be published. Required fields are marked *