ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ದಶಮೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಪ್ರೀತಿ, ಕರಣ : ವಣಿಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 07 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:39 – 15:08, ಗುಳಿಕ ಕಾಲ 09:09 – 10:39, ಯಮಗಂಡ ಕಾಲ 06:10 – 07:40
ವಿಜಯದಶಮಿಯಂದು ಆಯುಧಪೂಜೆ. ಹೊಸ ಕಾರ್ಯಕ್ಕೆ ಚಾಲನೆ, ಹೊಸತನವನ್ನು ತಂದುಕೊಳ್ಳಲು, ಕಾರ್ಯದಲ್ಲಿ ಪ್ರಗತಿಯಾಗಲು ವಿಜಯದ ಶಮಿಯನ್ನು ವಿಜಯದಶಮಿಯಂದು ಪಡೆಯುವುದು. ಸಕಲರಿಗೂ ವಿಜಯದಶಮಿಯ ಶುಭಾಶಯ. ಬದುಕಿನಲ್ಲಿ ವಿಜಯವೇ ವಿಶೇಷವಾಗಿ ಪ್ರಾಪ್ತವಾಗಲಿ.
ಮೇಷ ರಾಶಿ: ಯಾರದೂ ರೆಫರೆನ್ಸ್ ಪಡೆದು ಕೆಲಸ ಮಾಡಿಸಿಕೊಳ್ಳುವುದು ಇಷ್ಟವಾಗದು. ಇರುವಲ್ಲಿಯೇ ಸಂತೋಷದಿಂದ ಇರುವಿರಿ. ನಿಮ್ಮ ಇಂದಿನ ಕಾರ್ಯವು ಜನರಿಂದ ಮೆಚ್ಚುಗೆ ಪಡೆಯಬಹುದು. ಲೆಕ್ಕಾಚಾರವು ನಿಮಗೆ ಕಗ್ಗಂಟಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಆರೋಗ್ಯವು ನಿನ್ನೆಗಿಂತ ಉತ್ತಮವಾಗಿದ್ದು, ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸಿ. ಆಸ್ತಿಯನ್ನು ಮಾರಾಟಮಾಡುವ ಆಲೋಚನೆ ಇರಲಿದೆ. ಅವ್ಯವಸ್ಥಿತಿತವಾದ ಚಿತ್ತದಿಂದ ಏನು ಮಾಡುತ್ತಿದ್ದೇನೆ ಎಂಬುದು ಗೊತ್ತಾಗದೇ ಹೋಗಬಹುದು. ನೀವು ಅಜ್ಞಾನದಿಂದ ಮುಟ್ಟಿದರೂ ಬೆಂಕಿ ಸುಡಲಾರದೇ. ನೌಕರರ ಮೇಲೆ ನಿಮಗೆ ಪಶ್ಚಾತ್ತಾಪ ಬರಬಹುದು. ಹಳೆಯ ವಿಚಾರಗಳನ್ನು ನೀವು ಮತ್ತೆ ಕೆದಕುವಿರಿ. ಬಾಯಿ ಮಾತಿನ ಯಾವುದನ್ನೂ ದಾಖಲೆಯಾಗಿ ಪಡೆಯದೇ ಬರಹದ ಮೂಲಕ ವ್ಯಕ್ತಪಡಿಸಿ. ಅನ್ಯರ ವಿಚಾರಗಳನ್ನು ಆಡಿಕೊಳ್ಳಲಿದ್ದೀರಿ. ನಕಾರಾತ್ಮಕ ಮಾತೇ ಆಗಿದ್ದರೂ ನಿಮ್ಮ ದೃಷ್ಟಿಕೋನ ಬದಲಾಗಲಿ. ಬಿಡಿಸಲಾಗದ ಸಮಸ್ಯೆಗಳು ನಿಮ್ಮೆದುರು ಬರಬಹುದು. ಆಪ್ತರ ಸಲಹೆಯನ್ನು ಪಡೆದುಕೊಳ್ಳುವಿರಿ.
ವೃಷಭ ರಾಶಿ: ಬರವಣಿಗೆಯ ವ್ಯಾಪ್ತಿ ವಿಸ್ತಾರವೂ ಬದಲೂ ಆಗುವುದು. ಗಂಧದ ಜೊತೆ ಗುದ್ದಾಟಮಾಡಿದರೆ ಮೈ ಸುಗಂಧವಾಗುವುದು. ಯಾವ ತೊಂದರೆಯನ್ನೂ ಹಂಚಿಕೊಳ್ಳಲಾರಿರಿ. ಪರೀಕ್ಷೆಯಲ್ಲಿ ನೀವು ಅಂದುಕೊಂಡಷ್ಟು ಯಶಸ್ಸು ಸಿಗದು. ಸಂಗಾತಿಯು ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ನಿಮಗೆ ಬೇಸರ ಮಾಡಬುದು. ಆಲಸ್ಯವನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ. ಇಂದು ನೀವು ಯಾವುದನ್ನೂ ನೇರವಾಗಿ ಹೇಳಲಾರಿರಿ. ಪ್ರತಿಷ್ಠಿತರ ನಡುವೆ ದ್ವೇಷ ಏರ್ಪಡುವುದು. ಸಿಟ್ಟನ್ನು ಬಿಟ್ಟು ಶಾಂತವಾಗಿ ವರ್ತಿಸುವುದು ಮುಖ್ಯವಾಗುವುದು. ಹರಿವು ಇಲ್ಲದ ನೀರಿನಿಂದ ಕ್ರಿಮಿಗಳು ಉತ್ಪತ್ತಿಯಾಗುವುದು. ಕಛೇರಿಯಲ್ಲಿ ನೀವು ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ಶಿಸ್ತಿನಿಂದ ಇರುವಿರಿ. ಕೆಲವು ಸಂಗತಿಗಳು ಅನಿರೀಕ್ಷಿತವಾಗಿ ಬಂದು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡವುವು.. ಅತಿಯಾದ ಆತ್ಮವಿಶ್ವಾಸದ ಜೊತೆ ಪೂರ್ವಾಪರಜ್ಞಾನವೂ ಇರಲಿ.
ಮಿಥುನ ರಾಶಿ: ಮಕ್ಕಳ ಜೊತೆ ಹೋಗುವಾಗ ಜೇಬನ್ನು ಗಟ್ಟಿಯಾಗಿಟ್ಟುಕೊಳ್ಳಿ. ದೂರದೃಷ್ಟಿಯಿಂದ ಇಟ್ಟ ಹೆಜ್ಜೆಯು ಸರಿಯಾಗಿರುವುದು. ನಿಧಾನವಾದರೂ ಇಂದಿನ ಕೆಲಸವನ್ನು ಮಾಡಿ. ನಿಮ್ಮ ಅಶಕ್ತತೆಯು ಸಿಟ್ಟಾಗಿ ಬದಲಾಗುವುದು. ಪಾಲುದಾರಿಕೆಯಲ್ಲಿ ಕಲಹವಾಗಬಹುದು. ಮಾರ್ಗದಲ್ಲಿ ಕಾಲಿಗೆ ಕಲ್ಲು ತಾಕಬಹುದು. ಅದನ್ನು ನಿಂದಿಸಿ ಪ್ರಯೋಜನವಿಲ್ಲ. ಅಪರಿಚಿತರು ನಿಮ್ಮ ತಮಾಷೆಯನ್ನು ಹಾಗೆಯೇ ಸ್ವೀಕರಿಸುತ್ತಾರೆ ಎಂದೇನಿಲ್ಲ. ಗೊತ್ತಿಲ್ಲ ಕೆಲಸಕ್ಕೆ ಮುನ್ನುಗ್ಗುವುದು ಬೇಡ. ನಿಮ್ಮ ಮಾತುಗಳು ಹಾಸ್ಯಾಸ್ಪದವಾಗಿ ಇರಲಿದೆ. ಹೊಸ ಯೋಜನೆಗಳನ್ನು ಆರಂಭಿಸುವಾಗ ಆಪ್ತರ ಜೊತೆ ಚರ್ಚೆಯನ್ನು ಮಾಡಿ. ಧನದ ವ್ಯವಹಾರದಲ್ಲಿ ನಿಮಗೆ ಸರಿಯಾದ ಮಾಹಿತಿಯ ಕೊರತೆ ಇರಲಿದೆ. ಕುಟುಂಬದ ಜೊತೆ ಸಮಯವನ್ನು ಕಳೆಯುವಿರಿ. ಬಂಧುಗಳ ವಿಚಾರದಲ್ಲಿ ನಿಮಗೆ ಅಸಮಾಧಾನ ಇರಬಹುದು. ಸಭೆಯಲ್ಲಿ ಇದ್ದಕ್ಕಿದ್ದಂತೆ ಮಾತನಾಡಲು ಆಹ್ವಾನ ಬರಲಿದೆ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ನಿರ್ಮಾಣ ಮಾಡಿಕೊಳ್ಳುವಿರಿ. ನಿಮ್ಮ ಆದಾಯದ ಹೆಚ್ಚಿನ ಭಾಗವು ಸೌಂದರ್ಯಕ್ಕೆ ಹೋಗುವುದು.
ಕರ್ಕಾಟಕ ರಾಶಿ: ಆಚರಣೆಗಳನ್ನು ಗಾಳಿಗೆ ತೂರಿದರೆ ಯಾರೂ ಸಹಾಯಕ್ಕೆ ಬರದು. ವ್ಯವಹಾರದ ಪ್ರಜ್ಞೆ ಇಲ್ಲದವರ ಜೊತೆ ವ್ಯವಹಾರ ಕಷ್ಟ. ಇನ್ನೊಬ್ಬರನ್ನು ಬೆಳೆಸುವ ಉತ್ಸಾಹ ಯೋಜನೆ ನಿಮ್ಮಲ್ಲಿ ಇರುವುದು. ನಿಮಗೆ ಖಾಸಗಿ ಸಂಸ್ಥೆಯ ಮುಖ್ಯಸ್ಥರಾಗಲು ಕರೆ ಬರಬಹುದು. ಸಾಲದಿಂದ ನೀವು ಮುಕ್ತರಾಗಿ ಖುಷಿಪಡುವಿರಿ. ವಿನೀತರಂತೆ ನೀವು ತೋರುವಿರಿ. ಕೃಷಿಕರು ಸ್ವಲ್ಪ ಲಾಭವನ್ನು ಪಡೆಯುವರು. ವಿನಾಕಾರಣ ಇನ್ನೊಬ್ಬರ ಮೇಲೆ ಸಿಟ್ಟಾಗುವುದು ಸರಿಯಾಗದು. ನಿಮ್ಮ ಪ್ರೇಮ ಪ್ರಕರಣವು ಹೊಸ ರೂಪವನ್ನು ಒಡೆಯುವುದು. ನಿಮ್ಮ ಮಾತಿಗೆ ಬೇಗ ಕೆಲಸವಾಗುತ್ತದೆ ಎಂದೇನಿಲ್ಲ. ಚಿಕಿತ್ಸೆಯು ಫಲಕಾರಿಯಾಗದೇ ಇರಬಹುದು. ಅಧಿಕಾರಿಯುತವಾದ ವರ್ತನೆಯು ಸರಿಯಾಗದು. ದೂರ ಪ್ರಯಾಣವನ್ನು ಇಂದು ಮಾಡುವುದು ಬೇಡ. ಧಾರ್ಮಿಕ ಕ್ಷೇತ್ರಗಳ ದರ್ಶನವನ್ನು ಮಾಡುವಿರಿ. ಕೆಲಸದ ಕುರಿತು ಗೊಂದಲ ಇರಲಿದೆ. ಯಾರದ್ದಾದರೂ ನೋವಿಗೆ ಸ್ಪಂದಿಸಿ. ಹಂಗಿನಿಂದ ಹೊರಬರಲು ನಿಮಗೆ ದಾರಿ ಸಿಗದು.
ಸಿಂಹ ರಾಶಿ: ಇಂದು ನೀವು ಸೇವಿಸುವ ಆಹಾರದಲ್ಲಿ ತೀಕ್ಷ್ಣವಾದ ರುಚಿಗಳು ಅಧಿಕವಾಗಿದ್ದು, ಜೀರ್ಣಕ್ರಿಯೆಯಲ್ಲಿ ಏರುಪೇರು ಆಗುವುದು. ಪ್ರಯಾಣದಲ್ಲಿ ನಿಮಗೆ ಏನಾದರೂ ತೊಂದರೆ ಕಾಣಿಸೀತು. ನಿಮ್ಮ ಬಲವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಅದನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಯಾರನ್ನೋ ಸಂಶಯಿಸುತ್ತ ಇರುವುದು ಬೇಡ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿಗೆ ಹೇಳಿ. ಇಂದು ವ್ಯವಹಾರವು ಅಧಿಕ ಲಾಭವನ್ನು ತಂದುಕೊಡದು. ಪರಿಶೀಲನೆಗೆ ಮಾತ್ರ ಮಿತಿಯಲ್ಲಿ ಖರೀದಿ ಮಾಡಿ. ಶಿಸ್ತನ್ನು ರೂಢಿಸಿಕೊಳ್ಳುವುದು ಕಷ್ಟವಾದೀತು. ನಿಮ್ಮ ಮನಸ್ಸಿನ ಕೊಳ ತಿಳಿಯಾಗಿದ್ದರೆ ಏನು ಬಿದ್ದರೂ ಕಾಣಿಸುತ್ತದೆ. ಕಾರಣಾಂತರಗಳಿಂದ ನೀವು ಹೋಗುವ ಪ್ರಯಾಣವು ಸ್ಥಗಿತಗೊಳ್ಳಬಹುದು. ಆಡಳಿತಾತ್ಮಕ ವಿಚಾರದಲ್ಲಿ ನಿಮಗೆ ಹಿನ್ನಡೆ ಆಗಬಹುದು. ದೂರ ಪ್ರಯಾಣವು ನಿಮಗೆ ಇಷ್ಟವಾದೀತು. ಪರಿಮಳದ ವೃಕ್ಷದ ಬಳಿ ನಿಂತರೆ ಅಲ್ಲಿಂದ ಬರುವ ಗಾಳಿಯೇ ನಿಮಗೆ ಸುಗಂಧವನ್ನು ಕೊಡುವುದು. ಇಂದು ಉದರಬಾಧೆಯಿಂದ ಸಂಕಟ.
ಕನ್ಯಾ ರಾಶಿ: ಮಕ್ಕಳಿಗೆ ಮಾಡಬೇಕಾದ ಖರೀದಿಯನ್ನು ಮುಂದೆ ಹಾಕಿ ಇಂದು ಪಡೆಯಬೇಕಾದ ಸ್ಥಿತಿ ಬರಲಿದೆ. ನಿಮ್ಮ ವಿರಾಮ ಸಮಯವನ್ನು ಯಾರಾದರೂ ಕಸಿದುಕೊಳ್ಳಬಹುದು. ಯಾರದೋ ಮಾತಿನ ಮೇರೆಗೆ ಇಂದು ಕುಟುಂಬದಲ್ಲಿ ಕಲಹವಾಗಬಹುದು. ಯಾರನ್ನೂ ನಿಮ್ಮ ಮೂಗಿನ ನೇರಕ್ಕೆ ಅಳೆಯಬಾರದು. ಇಂದು ನಿಮಗೆ ಕಛೇರಿಯ ಕೆಲಸಗಳು ಅತಿಯಾಗಿದೆ ಎಂದು ಅನ್ನಿಸಬಹುದು. ಕುರುಡಾಗಿ ಯಾರನ್ನೂ ನಂಬಬಹದು. ಸಂಗಾತಿಗೆ ನಿಮ್ಮ ವರ್ತನೆಯಲ್ಲಿ ಬದಲಾವಣೆ ಕಾಣಿಸುವುದು. ಪಾಠೋಪಕರಣದ ದಾನವನ್ನು ಮಾಡಿ ಧನ್ಯತೆ ಎನಿಸಿಕೊಳ್ಳುವುದು. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ. ನಿಮ್ಮ ಸಾಮರ್ಥ್ಯದಿಂದ ಉನ್ನತ ಹುದ್ದೆಯನ್ನು ನೀವು ಅಲಂಕರಿಸುವಿರಿ. ಭೀತಿಯಿದ್ದರೆ ಯಾವುದನ್ನೂ ಮಾಡಲಾಗದು, ಕಲಿಯಲೂ ಆಗದು. ಯಾವುದಕ್ಕಾದರೂ ಒಂದು ಮಾಪನವಿರಲಿ. ಚಂಚಲವಾದ ಮನಸ್ಸು ನಿಮಗೆ ಅನೇಕ ಒಳ್ಳೆಯ ಆಯ್ಕೆಯನ್ನು ತಪ್ಪಿಸುವುದು.
ತುಲಾ ರಾಶಿ: ವಸ್ತುಗಳ ಹಂಚಿಕೆಯಲ್ಲಿ ವೈಷಮ್ಯವಿರಲಿದ್ದು, ಕಡಿಮೆ ವಸ್ತು ಪಡೆದವರಿಂದ ಕಲಹ. ಭಿನ್ನ ಮನಸ್ಸುಗಳ ಜೊತೆ ನಿಮಗೆ ಹೊಂದಾಣಿಕೆ ಅಸಾಧ್ಯನಿಮ್ಮ ಮೇಲೆ ಇತರರ ದೃಷ್ಟಿ ಬೀಳುವ ಸಾಧ್ಯತೆ ಇರದು. ಸಾಮಾಜಿಕ ಜೀವನದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನಿಮ್ಮ ಮಮಕಾರದಿಂದ ನಿಮಗೆ ತೊಂದರೆಯಾಗಲಿದೆ. ನಿಮ್ಮ ತಪ್ಪು ತಿಳಿವಳಿಕೆಗೆ ಯಾರನ್ನೂ ದೂರುವುದು ಬೇಡ. ಹಣದ ಸಂಪಾದನೆಗೆ ಅನೇಕ ಮಾರ್ಗಗಳು ಇದ್ದರೂ ನಿಮಗೆ ಅದಾವುದೂ ಇಷ್ಟವಾಗದು. ಪಾಲುದಾರಿಕೆಯ ಉದ್ಯೋಗದಿಂದ ಸ್ವಲ್ಪ ಮಟ್ಟಿಗೆ ನಿಶ್ಚಿಂತೆ. ಇಂದು ನಿಮ್ಮ ಒಬ್ಬರ ಶ್ರಮವು ವ್ಯರ್ಥವಾಗಬಹುದು. ಸ್ನೇಹ ಬಳಗವು ದೊಡ್ಡದಾಗಬಹುದು. ನಿರ್ಮಾಣದ ಕೆಲಸವು ಬಹಳ ನಿಧಾನವಾಗಬಹುದು. ಇದರಿಂದ ನಿಮ್ಮಲ್ಲಿ ಆತಂಕ ಹೆಚ್ಚಬಹುದು. ಹೆಸರು ಗಳಿಸಬೇಕು ಎಂಬ ಹಂಬಲ ಬರುವುದು. ಯಾರೋ ಮಾಡಿದ ತಪ್ಪಿಗೆ ನಿಮಗೆ ತೊಂದರೆಯಾಗಲಿದೆ. ಅನಿರೀಕ್ಷಿತ ಗೆಲುವು ನಿಮಗೆ ಖುಷಿಕೊಟ್ಟೀತು. ನಿರ್ಧಾರಗಳನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳುವಿರಿ. ಅಧಿಕಾರಿಗಳು ನಿಮ್ಮ ಬಗ್ಗೆ ತಪ್ಪಾದ ಭಾವನೆಗಳನ್ನು ಇಟ್ಟುಕೊಳ್ಳುವರು.
ವೃಶ್ಚಿಕ ರಾಶಿ: ನಿಮ್ಮ ಅಧಿಕಾರಕ್ಕೆ ರಾಜಕೀಯವೇ ಕಾರಣವಾಗಲಿದೆ. ವಿದೇಶದ ವ್ಯವಹಾರದಲ್ಲಿ ನಿಮಗೆ ವ್ಯಾಪಕತೆ ಸಿಗಲಿದೆ. ನಿಮ್ಮ ಬಳಿ ಇರುವ ಸಂಪತ್ತನ್ನು ಸಹಾಯಕ್ಕಾಗಿ ಕೊಟ್ಟು ಕಳೆದುಕೊಳ್ಳುವಿರಿ. ಖರ್ಚಿನ ಮೇಲೆ ನಿಯಂತ್ರಣ ಸಾಧಿಸಬೇಕೆಂದು ಹೊರಟರೂ ಅದು ಮತ್ತೆಲ್ಲೋ ಒಂದು ಕಡೆ ಹರಿದು ಹೋಗುವುದು. ಮನೆಗೆ ಬೇಕಾದ ವಸ್ತುಗಳ ಪಟ್ಟಿಯು ದೀರ್ಘವಾಗಿ ಕಾಣಿಸುವುದು. ಪ್ರಸಾರದ ಚಪಲತೆಯು ಹೆಚ್ಚಾಗಲಿದೆ. ನೂತನ ವಸ್ತುಗಳ ಖರೀದಿಯನ್ನು ನೀವು ಮಾಡಲಿದ್ದೀರಿ. ವಂಚಿತರಾಗುವ ಸಾಧ್ಯತೆ ಇದೆ. ನಿಮ್ಮನ್ನು ಗುರುತಿಸಬೇಕು ಎನ್ನುವ ಹಂಬಲ ಇರಲಿದೆ. ನಿಮಗೆ ಗೌರವ ಸಿಗುವ ಸ್ಥಾನದಲ್ಲಿ ಮಾತ್ರ ಇರುವಿರಿ. ನಿಮ್ಮ ಗುಣಗಳನ್ನು ದುರುಪಯೋಗ ಮಾಡಿಕೊಳ್ಳುವರು. ಪ್ರೀತಿಯಿಂದ ಗೆಲ್ಲುವ ನಿರ್ಧಾರವು ಒಳ್ಳೆಯದು. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು. ನಿಮ್ಮ ಯಾರಾದರೂ ಕೆಲಸ ವಹಿಸಿ ನಿಶ್ಚಿಂತರಾಗಬಹುದು. ಅನುಪಯುಕ್ತ ಆಹಾರವನ್ನು ಸೇವಿಸುವುದು ಬೇಡ.
ಧನು ರಾಶಿ: ಹಣಕಾಸಿನ ಸುಲಲಿತ ವ್ಯವಸ್ಥೆಯಿಂದ ಖರ್ಚು ಗೊತ್ತಾಗದಂತೆ ಹೆಚ್ಚಾಗುವುದು. ಮಕ್ಕಳು ಧೃತಿಗೆಡದಂತೆ ಅವರಿಗೆ ಧೈರ್ಯವನ್ನು ತುಂಬುವ ಅನಿವಾರ್ಯತೆ ಇದೆ. ಸ್ವಂತ ಬಲವಿಲ್ಲದೇ ನೀವು ಯಾರನ್ನೂ ಎದುರಿಸಲಾಗದು. ನಿಮಗೆ ಸಂಬಂಧಿಸದ ವಿಚಾರಗಳನ್ನು ನೀವು ಹೆಚ್ಚು ಮಾತನಾಡಲು ಬಯಸುವಿರಿ. ದೂರ ಪ್ರಯಾಣದಿಂದ ಹೆಚ್ಚು ಆಯಾಸಗೊಳ್ಳುವಿರಿ. ಸಿಕ್ಕಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಯೋಚಿಸಿ. ಕೆಲವರಿಂದ ನಿಮ್ಮ ಕಾರ್ಯಕ್ಕೆ ತಾತ್ಸಾರದ ಮಾತು ಕೇಳಿಬರಬಹುದು. ನೀವು ಇಂದು ನಾಜೂಕಾದ ಮಾತುಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಹೆಚ್ಚು ಆಡಂಬರವನ್ನು ನೀವು ಇಷ್ಟಪಡುವಿರಿ. ಹೊಸ ಬಟ್ಟೆಯಿಂದ ಆಕರ್ಷಕವಾಗಿ ಕಾಣುವಿರಿ. ಭೋಗವಸ್ತುಗಳ ಖರೀಯು ಅಧಿಕವಾಗಿ ಇರಲಿದೆ. ಬಂಗಾರದ ಸೂಜಿಯಾದರೂ ಕಣ್ಣಿಗೆ ಚುಚ್ಚುವುದಿಲ್ಲ. ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ. ನಿಮಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವಾಗುವುದು.
ಮಕರ ರಾಶಿ: ಶತ್ರುಗಳು ಕಾನೂನಾತ್ಮಕ ದಾಳಿ ಮಾಡಬಹುದು. ದೈವಾನುಗ್ರಹವಿದ್ದರೆ ಏನನ್ನೂ ಸಾಧಿಸಬಹುದು ಎಂಬ ಆತ್ಮವಿಶ್ವಾಸವು ಇರುವುದು. ಇಂದು ನಿಮ್ಮ ಮನಸ್ಸು ಭಯದಿಂದ ಹಿಂದೇಟು ಹಾಕಬಹುದು. ಉದ್ಯೋಗದ ಕಾರಣದಿಂದ ಬೇರೆ ಊರಿನಲ್ಲಿ ಇದ್ದರೂ ಮನೆಯ ನೆನಪು ನಿಮ್ಮನ್ನು ಅತಿಯಾಗಿ ಕಾಡಬಹುದು. ನಂಬಿದ ಸ್ನೇಹಿತನಿಗೆ ಸಹಾಯ ಮಾಡುವಿರಿ. ಉದ್ಯೋಗವೇ ಸಾಕು ಎನಿಸಬಹುದು. ಸಾಲದ ಅತಿಯಾದ ಚಿಂತೆ ಇರುವುದು. ಅತಿಯಾದ ಒತ್ತಡದಿಂದ ಹೊರಬರಲು ಯಂತ್ರಗಳನ್ನು ಮಾಡುವಿರಿ. ಏಕಾಗ್ರತೆಯಿಂದ ಸ್ವಲ್ಪ ಓದಿದರೂ ನಿಮಗೆ ಹೆಚ್ಚು ಫಲವನ್ನು ಕೊಟ್ಟೀತು. ಅನಗತ್ಯ ತಿರುಗಾಟದಿಂದ ನಿಮಗೆ ಬೇಸರವಾಗಲಿದೆ. ಅನ್ಯ ಸಂಸ್ಥೆಗಳಿಂದ ಒತ್ತಡ ಹೆಚ್ಚಾಗುವುದು. ಸಂಗಾತಿಯನ್ನು ನೀವು ದೂರ ಮಾಡಿಕೊಳ್ಳುವಿರಿ ಉಳಿತಾಯಕ್ಕೆ ಹೆಚ್ಚು ಪ್ರಾಮುಖ್ಯವನ್ನು ಕೊಡುವಿರಿ. ಜಾಡ್ಯವು ನಿಮ್ಮ ಪ್ರಗತಿಗೆ ಮಾರಕ. ಪ್ರತ್ಯೇಕವಾಗಿ ಇರಲು ನಿಮಗೆ ಬಾರದು. ಸಾಲ ಹೊರೆಯ ಸ್ವಲ್ಪ ಕಡಿಮೆ ಆಗುವುದು. ಉನ್ನತ ಅಭ್ಯಾಸವನ್ನು ಸಮಸ್ಯೆಯ ಕಾರಣದಿಂದ ಮುಂದೂಡುವಿರಿ.
ಕುಂಭ ರಾಶಿ: ಮನಸ್ಸಿಗೆ ತರಬೇತಿಯ ಅವಶ್ಯಕತೆ ಇರಲಿದೆ. ನಿಮ್ಮ ಉನ್ನತ ಅಭ್ಯಾಸಕ್ಕೆ ಯಾರಾದರೂ ಆರ್ಥಿಕ ಸಹಾಯವನ್ನು ಮಾಡಬಹುದು. ಸರ್ಕಾರದ ಉದ್ಯೋಗಕ್ಕೆ ನಿಮ್ಮ ಸಣ್ಣ ಪ್ರಯತ್ನ ಇರಲಿದೆ. ಭಾರದ ವಸ್ತುಗಳನ್ನು ನೀವು ಒಯ್ಯುವುದು ಬೇಡ. ನಿಮ್ಮದಾದ ಚೌಕಟ್ಟನ್ನು ಮಾಡಿಕೊಳ್ಳುವಿರಿ. ಪಥ್ಯಾಹಾರ ಸೇವನೆಯಿಂದ ಆರೋಗ್ಯದಲ್ಲಿ ಗಣನೀಯ ಬದಲಾವಣೆ ಗೊತ್ತಾಗುವುದು. ಅಸಾಮಾನ್ಯ ವಿಚಾರವನ್ನು ನೀವು ಸರಳೀಕರಿಸುವ ನೈಪುಣ್ಯತೆಯನ್ನು ಹೊಂದಿರುವಿರಿ. ಕೆಲವು ವಿಚಾರಕ್ಕೆ ಆಲಸ್ಯವು ವರವಾಗಬಹುದು. ಯಾರ ಜೊತೆಯೂ ನೀವು ಕಲಹವನ್ನು ಮಾಡಿಕೊಳ್ಳ ಬೇಡಿ. ಇನ್ಮೊಬ್ಬರನ್ನು ನೋಡಿ ನೀವೂ ನಿರುತ್ಸಾಹಿಗಳಾಗುವಿರಿ. ಸಂಗಾತಿಯ ಜೊತೆ ದೂರ ಪ್ರಯಾಣವನ್ನು ಮಾಡಿ ಬನ್ನಿ. ಅನನುಕೂಲತೆಯನ್ನು ಸ್ನೇಹಿತರಿಗೆ ಹೇಳಿ ಸಮಾಧಾನವನ್ನು ತಂದುಕೊಳ್ಳುವಿರಿ. ವ್ಯಾಪಾರವು ಕುಂಟುತ್ತ ಸಾಗುವುದು. ಹಿರಿಯರ ಮಾತನನ್ನು ಅನಿಸರಿಸಲು ನೀವು ಹಿಂದೇಟು ಹಾಕಬಹುದು. ಅಪರಿಚಿತರು ನಿಮ್ಮನ್ನು ಭೇಟಿಯಾದಾರು. ನಿಮ್ಮ ಸಹಾಯವನ್ನು ಕೇಳಿಯಾರು.
ಮೀನ ರಾಶಿ: ಕ್ಷಮೆಯನ್ನು ಕೇಳಿ ಬಂದವರಿಗೆ ಅದನ್ನು ನೀಡಿ ದೊಡ್ಡವರಾಗುವಿರಿ. ನಿಮ್ಮಲ್ಲಿ ವಿನೀತ ಸ್ವಭಾವವಿದ್ದರೆ ಏನನ್ನೂ ಪಡೆಯಲು ಸಾಧ್ಯ. ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವವನ್ನು ತೋರಿಸಿದಂತೆ ಕಾಣಿಸುಬುದು. ಲಾಭವನ್ನು ಗಮನದಲ್ಲಿಟ್ಟುಕೊಂಡು ನೀವು ಮತ್ತೆಲ್ಲವನ್ನೂ ಮರೆಯುವಿರಿ. ನಿಮ್ಮ ಬಗ್ಗೆ ಇತರರಿಗೆ ಅನುಕಂಪ ಬರಬಹುದು. ನಿಮ್ಮ ಮಾತನ್ನು ನಡಸಿಕೊಡಲು ನಿಮ್ಮಿಷ್ಟದವರು ಪ್ರಯತ್ನಿಸುವರು. ಅಹಂಕಾರವು ನಿಮ್ಮನ್ನು ಎಲ್ಲರಿಂದ ದೂರವಿರಿಸಬಹುದು. ತಾಯಿಯು ನಿಮ್ಮ ಪರವಾಗಿ ನಿಲ್ಲು ಅವರ. ವಾಹನವನ್ನು ಖರೀದಿಸುವ ಯೋಚನೆ ಮಾಡವಿರಿ. ಹಣಕ್ಕಾಗಿ ಸಾಲ ಮಾಡಲು ಸಲಹೆಯನ್ನೂ ಕೊಡಬಹುದು. ನಿರಂತರ ಕಾರ್ಯವನ್ನು ಮಾಡು ಅವಶ್ಯಕತೆ ಇಲ್ಲ. ಸುಮ್ಮನೇ ಕುಳಿತು ಏನ್ನಾದರೂ ನಕಾರಾತ್ಮಕ ಯೋಚನೆಯನ್ನು ಮಾಡುವಿರಿ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ.
Views: 25