ನಿತ್ಯ ಭವಿಷ್ಯ| : 24 ಆಗಸ್ಟ್| ಇಂದು ಈ ರಾಶಿಯವರಿಂದ ಅತಿಯಾಗಿ ನಿರೀಕ್ಷೆ ಬೇಡ.

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಭಾದ್ರಪದ, ಸೌರ ಮಾಸ: ಸಿಂಹ, ಮಹಾನಕ್ಷತ್ರ: ಮಘಾ, ವಾರ: ಭಾನು, ಪಕ್ಷ: ಶುಕ್ಲ ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ವ್ಯತಿಪಾತ್, ಕರಣ: ಕಿಂಸ್ತುಘ್ನ, ಸೂರ್ಯೋದಯ – 06 : 21 am, ಸೂರ್ಯಾಸ್ತ – 06 : 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:42 – 17:15, ಗುಳಿಕ ಕಾಲ 06:21- 07:55 ಯಮಗಂಡ ಕಾಲ 12:35- 14:08

ಮೇಷ ರಾಶಿ: ಎಲ್ಲರೆದುರು ಕಲ್ಲೆದೆಯಂತೆ ಇದ್ದರೂ ಮನಸ್ಸಿನಲ್ಲಿ ಆರ್ದ್ರತೆ ಇರುವುದು. ಇಂದು ನೀವು ಯಾವದೇ ವಿಚಾರವನ್ನು ಸಂಪೂರ್ಣವಾಗಿ ತಿಳಿದು ಮಾತನಾಡುವುದು ಒಳ್ಳೆಯದು.‌ ನಿಮ್ಮ ಮಾತು ಇತರರಿಗೆ ನೋವನ್ನು ಕೊಡಬಹುದು. ಆದಾಯದ ವಿಚಾರದಲ್ಲಿ ನಿಮಗೆ ಹತ್ತಾರು ಯೋಚನೆಗಳು ಬಂದರೂ ಅದನ್ನು ಕ್ರಮಬದ್ಧಗೊಳಿಸಲು ಪ್ರಯತ್ನಿಸಿ. ನಿಮ್ಮ ತಾಳ್ಮೆಯು ನಿಮಗೆ ಸಹಕಾರ ನೀಡುವುದು. ನಿರ್ಮಾಣಕ್ಕೂ ಅದರ ಖರ್ಚಿಗೂ ಸರಿಯಾದ ತಳೆ ಸಿಗದು. ಇಂದು ನಿಮ್ಮ ಉತ್ಸಾಹಭಂಗವನ್ನು ಮಿತ್ರರು ಮಾಡಿಯಾರು. ನಕಲಿ ದಾಖಲೆಗಳಿಂದ ನಿಮ್ಮನ್ನು ಯಾಮಾರಿಸಬಹುದು. ಕುತೂಹಲದ‌ ನೆಪದಲ್ಲಿ ಏನಾದರೂ ಮಾಡಿಕೊಳ್ಳಬೇಡಿ. ನಿಮಗೆ ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನವಿರಲಿ. ಏರುಧ್ವನಿಯಲ್ಲಿ ಮಾತನಾಡುವುದಕ್ಕಿಂತ ವಿವೇಚನೆಯಿಂದ ಮಾತನಾಡಿ. ಯಾರನ್ನೂ ಗೆಲ್ಲುವೆನು ಎಂಬ ಹುಂಬುತನ ಬೇಡ. ದೂರಾಗುವರನ್ನು ಬಿಟ್ಟುಕೊಡುವಿರಿ. ಸಿಟ್ಟಗೊಂಡು ಮಾತನಾಡಬೇಕಾದ ಅವಶ್ಯಕತೆ ಇಲ್ಲ. ಸಮಾಧಾನಚಿತ್ತರಾಗಿ ಮಾತನಾಡಿ.

ವೃಷಭ ರಾಶಿ: ತಂತ್ರಜ್ಞರಿಗೆ ಆತಂಕ, ಸಾಲದಿಂದ ಮುಕ್ತರಾಗುತ್ತೇವೋ ಇಲ್ಲವೋ ಎಂಬ ಭೀತಿ. ಇಂದು ಚರಾಸ್ತಿಯ ವಿಚಾರಕ್ಕೆ ಸಹೋದರರ ನಡುವೆ ವಾಗ್ವಾದ ನಡೆಯಬಹುದು. ನಿಮಗೆ ಸಾಲ ಕೊಡಲು ಯಾರಾದರೂ ಮುಂದೆಬರಬಹುದು. ನಿಮ್ಮ ವಿವೇಕವು ಸರಿಯಾಗಿ ಇರಲಿ. ನಿಮ್ಮವರನ್ನೇ ನೀವು ನಂಬದ ಸ್ಥಿತಿಯಲ್ಲಿ ಇರಬಹುದು. ನಿಮ್ಮ ಸಿಟ್ಟು ಇಂದು ಕಾಣಿಸಿಕೊಳ್ಳದೇ ಇದ್ದೀತು. ನಿಮ್ಮದೇ ಬದ್ಧತೆಯನ್ನು ನೀವು ಬಿಟ್ಟುಕೊಡಲಾರಿರಿ. ತಾಳ್ಮೆಯಿಂದ ನಿಮ್ಮ ವ್ಯವಹಾರ ಇರಲಿ. ವಿನಂತಿಸಿದರೆ ಏನನ್ನೂ ಮಾಡಿಕೊಡುವಿರಿ. ಅಸಾಧ್ಯವನ್ನು ಸಾಧಿಸುವ ಹಠದ ಸ್ವಭಾವ ಒಳ್ಳೆಯದೇ. ಎಲ್ಲವೂ ಕೈಗೂಡುವುದು ಎಂಬ ಅತಿಯಾದ ಆತ್ಮವಿಶ್ವಾಸಬೇಡ. ನಿರ್ಭಾವುಕತೆಯು ನಿಮಗೆ ಶೋಭೆಯನ್ನು ತಂದುಕೊಡದು. ಅನ್ನಿಸಿದ್ದನ್ನು ನೀವು ಇನ್ನೊಬ್ಬರಿಗೆ ಹೇಳುವಾಗ ತಡೆಯುವಿರಿ. ನಿಮ್ಮ ಕೈಲಾದ ಸಹಾಯವನ್ನು ಮಾಡಬೇಕಾದೀತು. ಅಂದುಕೊಂಡಿದ್ದನ್ನು ಸಾಧಿಸಲಾಗದು ಎಂಬ ಅಳುಕು ನಿಮ್ಮಲ್ಲಿ ಇರುವುದು. ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ.

ಮಿಥುನ ರಾಶಿ: ಮನೆಯ ಸ್ಥಿತಿ ನಿಮ್ಮನ್ನು ಸಂಪಾದನೆಯ ಹಿಂದೆ ಹೋಗುವಂತೆ ಮಾಡುವುದು. ಇಂದು ನಿರುಪಯೋಗಿ ವಸ್ತುಗಳನ್ನು ಅನ್ಯರಿಗೆ ಕೊಡುವಿರಿ. ಸಾಮಾಜಿಕ ಕಾರ್ಯದಲ್ಲಿ ತಾರತಮ್ಯವನ್ನು ತೋರಿಸುವುದು ಬೇಡ. ಎಲ್ಲವನ್ನೂ ಮಾತಿನಿಂದಲೇ ಬಗೆಹರಿಸಲಾಗದು. ನೀವು ನಿಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವಿರಿ. ನಿಮಗೆ ಅದು ಬಹಳ ಆಪ್ತವಾಗಲಿದೆ. ಯಾರ ಶ್ರೇಯಸ್ಸನ್ನಾದರೂ ಬಯಸಿದರೆ, ವೈಯಕ್ತಿಕವಾಗಿ ಅದನ್ನು ಮಾಡಿ. ಸಂಗಾತಿಯ ಜೊತೆ ಮುಕ್ತವಾಗಿ ಮಾತನಾಡಿ.ಸ್ಪರ್ಧಾತ್ಮಕತೆಯಲ್ಲಿ ಗೆಲವಿನ ವಿಶ್ವಾಸ ಹೆಚ್ಚಾಗುವುದು. ದೇವರ ದರ್ಶನವನ್ನು ನೀವು ಮಾಡುವಿರಿ.‌ ಸಮಯಕ್ಕೆ ನೀವು ನಿಮ್ಮ ವ್ಯಕ್ತಿತ್ವಗಳನ್ನು ಬಳಸಿಕೊಳ್ಳುವಿರಿ. ಸ್ತ್ರೀಯರಿಗೆ ಸಂಬಂಧಿಸಿದ ಅಪವಾದವನ್ನು ಹೊರಬೇಕಾದೀತು. ಏನೂ ಗೊತ್ತಿಲ್ಲದೇ ಯಾರ ಪರ ವಹಿಸುವ ಅಗತ್ಯವಿರದು. ಯಾರ‌ ಮಾತನ್ನೂ ಕೇಳದೇ ನಿಮ್ಮದೇ ದಾರಿಯಲ್ಲಿ ನಡೆಯುವಿರಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು.

ಕರ್ಕಾಟಕ ರಾಶಿ: ಒಂದೇ ಕಡಿಯ ಅಭಿಪ್ರಾಯವನ್ನು ಸ್ವೀಕರಿಸಿ ತೀರ್ಮಾನ ನೀಡಲಾಗದು. ಅವಿವಾಹಿತರಿಗೆ ಇಂದು ವಿವಾಹಕ್ಕೆ ಯೋಗ್ಯವಾದ ಮಾತುಗಳು ಕೇಳಿಸುವುದು. ನಿಮ್ಮ ಸಂತೋಷದ ಸುದ್ದಿಯನ್ನು ಇತರರಿಗೂ ಹಂಚುವಿರಿ. ನಿಮ್ಮ ಆಲೋಚನೆಗಳನ್ನು ಮನೆಯವರ ಮೇಲೆ‌ಹೇರಲು ಹೋದರೆ ಕಲಹವೇ ಆದೀತು. ನೈತಿಕ ಬೆಂಬಲ ಸಿಗುವುದು ಕಷ್ಟ. ಹಣಕಾಸಿನ‌ ಕೊರತೆ ಇದ್ದರೂ ನೆಮ್ಮದಿಯ ಜೀವನ ಇರಲಿದೆ. ಅಲ್ಪಜ್ಞತೆಯಿಂದ ನಿಮಗೇ ನಿಮ್ಮ ಬಗ್ಗೆ ಬೇಸರವಾಗಲಿದೆ. ನಿಮ್ಮವರು ನಿಮಗೆ ಕೊಡುವ ಸಲಹೆಗಳು ನಿಮಗೆ ನಕಾರಾತ್ಮಕವಾಗಿ ತೋರುವುದು. ಇಂದು ನಿಮ್ಮ‌ ಪ್ರೀತಿಪಾತ್ರರನ್ನು ಭೇಟಿ ಮಾಡುವಿರಿ. ನಿಮಗೆ ಏನೇ ಆಗುವುದಿದ್ದರೂ ದಾಖಲೆ ಸಹಿತವಾಗಿ ಇರಲಿ. ನಿಮ್ಮಲ್ಲಿ ಹೊಸ ಬಗೆಯ ಉತ್ಸಾಹವು ಇರಲಿದೆ. ರಾಜಕೀಯದವರ ಬೆಂಬಲ ಸಿಗಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುವುದು ಉತ್ತಮ. ನಿಮಗೆ ಆಯ್ಕೆಗಳನ್ನು ಮಾಡಲು ಗೊಂದಲವಿರಬಹುದು. ನಿಮ್ಮ‌ ಮೇಲಿರುವ ಭಾವನೆಯು ದೂರಾಗಬಹುದು. ಆತುರದಲ್ಲಿ ನಿಮ್ಮ ಎಲ್ಲ ಕಾರ್ಯವೂ ಮೊಟಕುಮಾಡುವಿರಿ. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ.

ಸಿಂಹ ರಾಶಿ: ಅಧಿಕ ಆಲೋಚನೆಯಿಂದ ನಿಮ್ಮ ಸಮಯವನ್ನು ಅನ್ಯರು ಹಾಳುಮಾಡುವರು. ಇಂದು ಮನೆಯನ್ನು ನೋಡಿಕೊಳ್ಳುವ ಹೊಣೆ ನಿಮಗೆ ಸಿಗಲಿದೆ. ನಿಮ್ಮ ಉತ್ಸಾಹವೇ ನಿಮಗೆ ಶಾಪವಾದೀತು. ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ನಿಮ್ಮ ಉದ್ಯೋಗಕ್ಕೆ ಬೇಕಾದ ಸಲಹೆಗಳನ್ನು ನೀವು ತೆಗೆದುಕೊಳ್ಳಬೇಕಾಗಬಹುದು. ಪ್ರಚೋದನಾತ್ಮಕ ಹೇಳಿಕೆಗೆ ಸಮಾಧಾನ ಹೇಳಬೇಕಾಗುವುದು. ಹೆಚ್ಚಿನ ಕೆಲಸಗಳನ್ನು ನೀವು ಮುಂದೂಡಲಿದ್ದೀರಿ. ಎಲ್ಲದಕ್ಕೂ ನೀವು ಇನ್ನೊಬ್ಬರನ್ನು ಬೊಟ್ಟು ಮಾಡಿಸಲಿದ್ದೀರಿ. ನಿಮ್ಮ ಮನವೊಲಿಸಲು ಬಹಳ ಕಷ್ಟವಾದೀತು. ಸಂಗಾತಿಯ ವಿಷಯದಲ್ಲಿ ನಿಮಗೆ ಬೇಸರವಾಗಲಿದೆ. ಸುಖವನ್ನು ಪಡೆಯಲು ನೀವು ಬೇರೆ ಮಾರ್ಗವನ್ನು ಹುಡುಕುವಿರಿ.‌ ಕೆಟ್ಟ ಅಭ್ಯಾಸವನ್ನು ಆರಂಭಿಸುವ ಸಾಧ್ಯತೆ ಇದೆ. ವಿವಾಹಕ್ಕೆ ಸಂಬಂಧಿಸಿದ ಅಪವಾದವನ್ನು ಎದುರಿಸಬೇಕಾಗಲಿದೆ. ವಿದ್ಯಾರ್ಥಿಗಳು ಸಾಮರ್ಥ್ಯವನ್ನು ತೋರಿಸುವಿರಿ. ಹಣಸಂಪಾದನೆಯ ವಿಚಾರವೇ ತಲೆಯಲ್ಲಿ ಓಡಾಡಲಿದೆ‌. ತೋರಿಕೆಗೆ ಮಾತ್ರ ದಾನ ಬೇಡ, ಮನಸ್ಸಿನಿಂದ ಇರಲಿ. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು.

ಕನ್ಯಾ ರಾಶಿ: ಸತ್ಯವು ಬೇರೆ ರೀತಿಯ ಪರಿಣಾಮವನ್ನು ನೀಡುವುದು. ಇಂದು ನಿಮ್ಮ ಉದ್ಯಮದಲ್ಲಿ ಆದ ನಷ್ಟದಿಂದ ಮನಸಿನೊಳಗೆ ಸಂಕಟಪಡುವಿರಿ. ತಂತ್ರಜ್ಞಾನದಿಂದ ನಿಮ್ಮ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ. ಸಮಯದ ಬೆಲೆಯನ್ನು ನೀವು ಇಂದು ಅರ್ಥಮಾಡಿಕೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಭಾವನೆಗಳು ಬದಲಾಗಬಹುದು. ಕುಟುಂಬವು ಮನಸ್ತಾಪದಿಂದ ಮುಕ್ತವಾಗಿ ಸಹಜಸ್ಥಿತಿಗೆ ಮರಳುವುದು. ಇಷ್ಟಪಟ್ಟಿದ್ದನ್ನು ನೀವು ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸಕ್ಕೆ ಸಮಯ ಹೊಂದಿಕೆ ಕಷ್ಟವಾದೀತು. ಮನೋವ್ಯಥೆಯನ್ನು ನೀವು ನಿಧಾನವಾಗಿ ಕಳೆದುಕೊಳ್ಳುವಿರಿ. ನಿಮಗೆ ಸಮ್ಮಾನ ಮಾಡಲು ಆಪ್ತರು ನಿಶ್ಚಯಿಸುವರು. ನೂತನ ವಸ್ತುಗಳನ್ನು ಪಡೆದುಕೊಳ್ಳುವವರಿದ್ದೀರಿ. ನಿಮ್ಮ ಸಿಟ್ಟಿಗೆ ಮನೆಯಲ್ಲಿ ಭಯ ಉಂಟಾಗಬಹುದು. ಕಲಾವಿದರಿಗೆ ಉತ್ತಮ ವ್ಯವಸ್ಥೆ ಇಂದು ಸಿಗಲಿದೆ. ಕುಟುಂಬದಿಂದ‌ ನಿಮಗೆ ಬೇಕಾದ ಸಹಕಾರ ಸಿಗಲಿದೆ. ಮಕ್ಕಳು ನಿಮ್ಮನ್ನು ಪ್ರೀತಿಸುವರು. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು.

ತುಲಾ ರಾಶಿ: ಸಣ್ಣ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಅಂದುಕೊಂಡ ಕಾರ್ಯಕ್ಕೆ ಧನಲಾಭ. ನಿಮ್ಮ ಕಾರ್ಯದಕ್ಷತೆಗೆ ಜವಾಬ್ದಾರಿಗಳು ಬದಲಾಗಲಿವೆ. ಚೆನ್ನಾಗಿರುವ ವ್ಯವಸ್ಥೆಯನ್ನು ಇನ್ನೂ ಚೆನ್ನಾಗಿ ಮಾಡಲು ಹೋಗಿ ಹಾಳು ಮಾಡುವಿರಿ. ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ತಾಳ್ಮೆಯಿಂದ ಇರುವುದು ಇಂದು ನಿಮಗೆ ಕಷ್ಟವಾದೀತು. ಇನ್ನೊಬ್ಬರ ಮಾತಿಗೆ ಅವಕಾಶವನ್ನು ಮಾಡಿಕೊಡಿ. ಕೃಷಿಯಲ್ಲಿ ನೀವು ಹೊಸ ವಿಧಾನವನ್ನು ರೂಪಿಸಿಕೊಳ್ಳುವಿರಿ‌. ಆತಂಕವಿರುವ ಕಾರ್ಯಕ್ಕೆ ಯಾರ‌ ಪ್ರೋತ್ಸಾಹದ ಮಾತನ್ನೂ ಕೇಳುವುದು ಬೇಡ. ವಿದೇಶಕ್ಕೆ ಹೋಗುವುದು ಕಾರಣಾಂತರಗಳಿಂದ ನಿಂತುಹೋದೀತು. ಬಹಳ ದಿನಗಳ ಅನಂತರ ಭೇಟಿಯಾದ ಮಿತ್ರನಿಗೆ ಆತಿಥ್ಯ ಮಾಡುವಿರಿ. ಮಿತ್ರರ ಮೂಲಕ ನಿಮ್ಮ ವಿವಾಹವು ಸಂಭವಿಸುವುದು. ತಂದೆ, ತಾಯಿಗಳು ಮಕ್ಕಳ‌ ಮೇಲೆ ಕಣ್ಣಿಡುವುದು ಒಳ್ಳೆಯದು. ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ನಿಮ್ಮ ಮಾತು ಸತ್ಯವೇ ಆದರೂ ಅದನ್ನು ಹೇಳುವ ರೀತಿಯಲ್ಲಿ ಹೇಳಿ.

ವೃಶ್ಚಿಕ ರಾಶಿ: ಮೋಜಿಗಾಗಿ ನಿಮ್ಮ ಖರ್ಚಿರುವುದು. ನಿಮಗೆ ಸಿಗುವ ಸಾಮಾಜಿಕವಾಗಿ ಮನ್ನಣೆಯು ಅಧಿಕ ಕಾರ್ಯವನ್ನು ಮಾಡುವಂತೆ ಮಾಡೀತು. ಮಕ್ಕಳ ಆರೋಗ್ಯದ ಕಾರಣದಿಂದ ನೀವು ಕಛೇರಿಗೆ ವಿರಾಮ‌ ಹಾಕಬೇಕಸದೀತು. ನಿಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಎಲ್ಲರನ್ನೂ ಶಪಸುವುದು ಸರಿಯಲ್ಲ. ಹೇಳಿದಷ್ಟು ಸುಲಭವಾಗಿ ಮಾಡಲಾಗದು ಎನ್ನುವುದು ಗೊತ್ತಾಗಲಿದೆ. ನಿಮ್ಮವರ ಸಲಹೆಯನ್ನು ಪಡೆದು ಕೆಲಸಕ್ಕೆ ಹೋಗುವುದು ಒಳ್ಳೆಯದು. ನಿಮ್ಮ ಪರೀಕ್ಷೆಯ ಕಾಲವಾಗಿದ್ದು ನೀವು ಅದನ್ನು ದಾಟಲು ಶ್ರಮಪಡಬೇಕಾದೀತು. ಆಕಸ್ಮಿಕವಾಗಿ ವಸ್ತುವನ್ನು ಕಳೆದುಕೊಳ್ಳುವಿರಿ. ಅನಿವಾರ್ಯವಿದ್ದಾಗ ಮಾತ್ರ ಪ್ರಯಾಣ ಮಾಡಿ. ಬಂಧುಗಳ ನಡುವೆ ಕಲಹವಾಗಬಹುದು. ಅವರು ನಿಮ್ಮಿಂದ ದೂರ ಉಳಿಯಬಹುದು. ನಿಮಗೆ ಕಿರಿಕರಿಯಾಗುವ ಸ್ಥಳದಿಂದ‌ ದೂರವಿರಲು ಪ್ರಯತ್ನಿಸುವಿರಿ. ದೇಹವನ್ನು ದಂಡಿಸುವುದು ಪ್ರಮಾಣಬದ್ಧವಾಗಿರಲಿ. ಸರಿಯಾದ ಮಾರ್ಗವನ್ನು ಅನುಸರಿಸಿ. ನಿಮ್ಮ‌ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯಾಗಲಿದೆ.

ಧನು ರಾಶಿ: ಗೆಲ್ಲುವ ಒತ್ತಡದಲ್ಲಿ ನಿಮ್ಮ ಕಾರ್ಯವೂ ವ್ಯತ್ಯಾಸವಾಗಬಹುದು. ಇಂದು ನಿಮ್ಮ ದಾಂಪತ್ಯದ ಬಿರುಕು ನ್ಯಾಯಾಲಯದ ಮೆಟ್ಟಿಲೇರಿಸಲೂಬಹುದು. ನಿಮ್ಮ ವಸ್ತುವನ್ನು ಯಾರಿಗೂ ಕೊಡುವ ಮನಸ್ಸಾಗದು‌. ಆಸ್ತಿಯ ವಿಚಾರದಲ್ಲಿ ಕಲಹಗಳು ಉಂಟಾಗಬಹುದು. ನಿಮ್ಮ ಆಲೋಚನೆಗಳನ್ನು ಸಂಗಾತಿಯು ತಿದ್ದಲು ಪ್ರಯತ್ನಿಸಬಹುದು. ಏನೇ ಪಡೆದುಕೊಳ್ಳುವುದಿದ್ದರೂ ಸರಿಯಾದ ಮಾರ್ಗದಿಂದ ಪಡೆಯಲು ಪ್ರಯತ್ನಿಸಿ. ಕಲೆಗಳಲ್ಲಿ ಕೌಶಲ ತೋರಿಸುವಿರಿ. ಯಾವುದಾದರೂ ಉತ್ತಮ ವಿಚಾರಗಳು ನಿಮ್ಮಿಂದ‌ ಹೊರಬರುವುದು ಕಷ್ಟಸಾಧವಾದೀತು. ನಿಮ್ಮನ್ನು ಗೌರವಿಸಿಲ್ಲ ಎಂಬ ವ್ಯಥೆಯು ಹೆಚ್ಚಾಗಬಹುದು. ‌ಏಕಾಂತದಲ್ಲಿ ಇರುವುದು ನಿಮಗೆ ಕಷ್ಟವಾದೀತು. ಬೇಕಾದುದನ್ನು ಪಡೆಯಲು ನೀವು ಬಹಳ ಪರಿಶ್ರಮಿಸಬಹುದು. ನಂಬಿಕೆಯ ಕೊರತೆಯು ಅತಿಯಾಗಿ ಕಾಡಬಹುದು. ಭೂಮಿಯ ಖರೀದಿಗೆ ಸಹೋದರನ ಸಹಕಾರ ಪಡೆಯುವಿರಿ.‌ ವಂಚಿಸುವ ಯೋಚನೆ ಮಾಡಿದ್ದರೆ ಅದನ್ನು ಮರೆತುಬಿಡಿ. ಎಲ್ಲದಕ್ಕೂ ಯಾರನ್ನಾದರೂ ಕಾರಣವಾಗಿಸುವಿರಿ.

ಮಕರ ರಾಶಿ: ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ತಂತ್ರ ಸಫಲವಾಗಲಿದೆ. ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳುವುದು ಔಚಿತ್ಯವಿಲ್ಲ. ವ್ಯವಹಾರದಲ್ಲಿ ಯಾರಾದರೂ ನಿಮ್ಮನ್ನು ಮಾತಿನಿಂದ ಮರುಳುಮಾಡಬಹುದು. ಹಣದ ಪ್ರಾಮುಖ್ಯವನ್ನು ತಿಳಿದುಕೊಳ್ಳುವ ಸಮಯವಿಂದು. ಹಣವನ್ನು ನೀವು ಹೂಡಿಕೆಯಲ್ಲಿ ಇಡುವ ಸಾಧ್ಯತೆ ಇದೆ. ಸಾಲದ ಹಣವನ್ನು ಪಾವತಿಸಿ ಸ್ವಲ್ಪ ಖುಷಿಪಡುವಿರಿ. ನೌಕರರಿಂದ ಕೆಲಸವನ್ನು ಮಾಡಿಸಿಕೊಳ್ಳುವ ಚಾಣಾಕ್ಷತನ ಬೇಕು. ಮಕ್ಕಳಿಂದಾದ ತೊಂದರೆಯನ್ನು ಕುಳಿತು ಮಾತನಾಡಿ ಬಗೆಹರಿಸಿ. ನಿಮ್ಮ ಔದಾರ್ಯತೆಯು ನಿಮಗೇ ಬಹಳ ಕಷ್ಟವಾಗಬಹುದು. ಹಿರಿಯರಿಂದ ಶುಭಾಶೀರ್ವಾದವನ್ನು ಪಡೆದು ನಿಮಗೆ ಧೈರ್ಯ ಬರಬಹುದು. ಸತ್ಯವನ್ನು ಆಡಲು ನೀವು ಹಿಂಜರಿಯುವಿರಿ. ಸರಳವನ್ನು ನೀವು ಕ್ಲಿಷ್ಟಕರವಾಗಿಸಿಕೊಳ್ಳುವಿರಿ. ನಿಮ್ಮ ಖಾಸಗಿ ತನಕ್ಕೆ ತೊಂದರೆಯಾಗಲಿದೆ. ವಂಚನೆಯ ಸುಳಿವನ್ನು ಮೊದಲೇ ಪಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆಯುವಿರಿ. ನಿಮ್ಮ‌ ವಸ್ತುಗಳ ಮೇಲೆ ಅತಿಯಾದ ಮೋಹವು ಇರುವುದು.

ಕುಂಭ ರಾಶಿ: ಮಾರ್ಗದರ್ಶಕ‌ ಸ್ಥಾನಕ್ಕೆ ಆಯ್ಕೆಯಾಗುವಿರಿ. ಸಜ್ಜನರ ಭೇಟಿಯಾಗುವ ಸಾಧ್ಯತೆ ಇದೆ. ನಿಮಗೆ ನಿರೀಕ್ಷಿತ ಫಲ‌ಸಿಗದೇ ಮನೆಯವರಿಗೆ ಬೇಸರವಾಗಬಹುದು. ಆಪ್ತರ ಜೊತೆ ಉದ್ಯೋಗಕ್ಕೆ ಸಂಬಂಧಿಸಿದ ಸಮಾಲೋಚನೆಯನ್ನು ನಡೆಸುವಿರಿ. ಇಂದಿನ ಬೆಳಗ್ಗೆ ಹೆಚ್ಚಿನ ಉತ್ಸಾಹ ಇರಲಿದೆ. ಅನುಕೂಲಕರ ವಾತಾವರಣವನ್ನು ನೀವು ಸೃಷ್ಟಿಸಿಕೊಂಡು ಇರುವಿರಿ. ನಿಮಗೆ ಆರ್ಥಿಕವಾಗಿ ಬಲವಾಗಲು ಆಲೋಚಿಸುವಿರಿ. ನಿಮ್ಮ ನಿರೀಕ್ಷೆ ಸುಳ್ಳಾಗದು. ನಿಮ್ಮ‌ ಮನಸ್ಸು ಕ್ಷಣವೂ ಬೇರೆ ಆಲೋಚನೆಯಲ್ಲಿ‌ ಮುಳುಗಿರುವುದು. ಸಹೋದ್ಯೋಗಳ ಸಹಕಾರ ಬೇಕಿದ್ದರೆ ಅವರನ್ನು ನಿಮ್ಮತ್ತ ಒಲಿಸಿಕೊಳ್ಳಬೇಕು. ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಲು ಇಷ್ಟಪಡುವಿರಿ. ಆಯಾಸವು‌ ಅಧಿಕವಾಗಿದ್ದರೂ ಆಲಸ್ಯದಿಂದ ಮೇಲೇರುವ ಯೋಚನೆ‌ಮಾಡುವಿರಿ. ಸರಳವಾದ ಕೆಲಸಗಳನ್ನು ಮಾಡುವಿರಿ. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಮಾರಾಟದ ವಿಷಯದಲ್ಲಿ ಹಿನ್ನಡೆಯಾಗಲಿದೆ.

ಮೀನ ರಾಶಿ: ಸಾರ್ಥಕತೆಯ ಕ್ಷಣದಲ್ಲಿ ಭಾವನಾತ್ಮಕವಾಗಲಿದ್ದೀರಿ. ಒತ್ತಡದ ನಡುವೆಯೂ ಕಾರ್ಯನಿರ್ವಹಣೆ ಮಾಡಿದ ಕೌಶಲಕ್ಕೆ ಪ್ರಂಶಸೆಗಳು ಸಿಗಲಿವೆ. ಯಾರನ್ನೋ ಗೆಲ್ಲುವುದು ಸುಲಭದ ತುತ್ತಲ್ಲ. ಹಣದ ಸಮಸ್ಯೆಗಳಿಂದ ಮುಕ್ತರಾಗುವಿರಿಸಿ. ನಿಮ್ಮನ್ನು ಇಂದು ಕೆಲವರು ಭೇಟಿಯಾಗಲಿದ್ದಾರೆ. ನಿಮ್ಮ ವ್ಯಕ್ತಿತ್ವವನ್ನು ನೀವು ಪರಿಚಯಿಸುವಿರಿ. ನೀವು ನೆಮ್ಮದಿಯನ್ನು ಕಳೆದುಕೊಳ್ಳಲು ಕೆಲವು ಸಂಗತಿಗಳು ಆಗಬಹುದು. ಆಸ್ತಿಯ ಗೌಪ್ಯತೆಯನ್ನು ರಹಸ್ಯವಾಗಿರಿಸಿ. ಎಲ್ಲ ಕೆಲಸಗಳು ನಿಮ್ಮ ಸ್ಥಾನವನ್ನು ಏರಿಸಬಹುದು. ಬಾಕಿ ಕೆಲಸಗಳನ್ನು ನೀವು ಪೂರೈಸಿಕೊಳ್ಳುವುದು ಉತ್ತಮ. ನಿಮಗೆ ಉಂಟಾದ ನೋವನ್ನು ನೀವೇ ನುಂಗಿಕೊಳ್ಳಬೇಕಾದೀತು. ಹಣಕಾಸಿನ ತೊಂದರೆ ಸ್ವಲ್ಪಮಟ್ಟಿಗೆ ನಿವಾರಣೆ ಆಗಲಿದೆ. ಜೀವನದ ಹಾದಿಯಲ್ಲಿ ಹೆಚ್ಚು ಏರಿಳಿತಗಳು ಇರದೇ ಆರಾಮಾಗಿ ಹೋಗುವಿರಿ. ಜಾಣ್ಮೆಯಿಂದ ಸವಾಲನ್ನು ಎದುರಿಸಬೇಕಾಗಬಹುದು. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ.

Views: 55

Leave a Reply

Your email address will not be published. Required fields are marked *