ಚಿತ್ರದುರ್ಗ ಸೆ. 5
ದೇಶದ ಜನತೆಗೆ ಇವಿಎಂ ಬಗ್ಗೆ ವಿಶ್ವಾಸ ಹೋಗಿಲ್ಲ ದೇಶದ ಮತದಾರರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆಯೇ ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ವಿಶ್ವಾಸ ಹೋಗಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಯಾದವಾನಂದ ಶ್ರೀಗಳನ್ನ ಬೇಟಿ ಮಾಡಿ ಆಶಿರ್ವಾದ ಪಡೆದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಮಹತ್ತರ ನಿರ್ಣಯವನ್ನ ತೆಗೆದುಕೊಂಡಿದ್ದಾರೆ ಸ್ಥಳೀಯ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸುವ ಬಗ್ಗೆ ತೀರ್ಮಾನಕ್ಕೆ ಬರುತ್ತಿದ್ದಾರೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಗೆ ವಿಶ್ವಾಸ ಹೋಗಿದೆಯಂತೆ ಇದೊಂದು ರೀತಿ ಪ್ರಜಾ ಪ್ರಭುತ್ವದ ಕಗ್ಗೊಲೆಯಾಗಿದೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಗೆÉ ವಾಸ್ತವಿಕ ಸತ್ಯದಿಂದ ದೂರ ಹೋಗದಂತೆ ಕಿವಿಮಾತು ಹೇಳುತ್ತೇನೆಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಇದನ್ನ ಅರ್ಥ ಮಾಡಿಕೊಳ್ಳಬೇಕು ದೇಶದ ಜನತೆಗೆ ಇವಿಎಂ ಬಗ್ಗೆ ವಿಶ್ವಾಸ ಹೋಗಿಲ್ಲ ದೇಶದ ಮತದಾರರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆಯೇ ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ವಿಶ್ವಾಸ ಹೋಗಿದೆ ಎಂದು ಕಿಡಿ ಕಾರಿದರು.
ದೇಶವನ್ನ ಮುನ್ನಡೆಸುವ ಶಕ್ತಿ ಇರುವುದು ನರೇಂದ್ರ ಮೋದಿಯವರಿಗೆ ಮಾತ್ರ ಎಂದು ದೇಶದ ಜನರಿಗೆ ಗೊತ್ತಿದೆ ಇದನ್ನ ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಈ ರೀತಿಯ ಹುಚ್ಚಾಟ ಮಾಡುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ರಾಜ್ಯದ ಮುಖ್ಯಮಂತ್ರಿಗಳಿಗೆ ನಾನು ಸವಾಲ್ ಹಾಕುತ್ತೇನೆ ಚುನಾವಣೆಯಲ್ಲಿ ಅಕ್ರಮ ನಡೆದಿದ್ದೆ ಆಗಿದ್ದರೆ ನಿಮ್ಮ 136 ಶಾಸಕರನ್ನ ರಾಜೀನಾಮೆ ಕೊಡಿಸಿ, ಸಂಸದರ ರಾಜೀನಾಮೆ ಕೊಡಿಸಿ ತಾಕತ್ ಇದ್ದರೆ ಮತ್ತೆ ಚುನಾವಣೆ ಎದುರಿಸಲಿ ಎಂದು ಹೇಳಿದ ಅವರು ಮುಡಾ ಪ್ರಕರಣದಲ್ಲಿ ಸಿಎಂ ಸಿದ್ಧರಾಮಯ್ಯ ಕ್ಲೀನ್ ಚಿಟ್ ವಿಚಾರ ಸಿಎಂ ಸಿದ್ಧರಾಮಯ್ಯ ಕುತಂತ್ರದಿಂದ ಕ್ಲೀನ್ ಚಿಟ್ ಪಡೆದಿದ್ದಾರೆ ಸಿಎಂ ಸಿದ್ಧರಾಮಯ್ಯ ಭಂಡರಿದ್ದಾರೆ, ಸುಲಭವಿಲ್ಲ ಬಿಜೆಪಿ ಪಾದಯಾತ್ರೆ ವೇಳೆ 14ನಿವೇಶನ ವಾಪಸ್ ನೀಡಿದ್ದರು ತಪ್ಪಿಲ್ಲ ಎಂದರೆ ಸಿಎಂ ನಿವೇಶನ ಹಿಂದುರುಗಿಸುವ ಕೆಲಸ ಮಾಡ್ತಿರಲಿಲ್ಲ ಪ್ರಾಮಾಣಿಕರಾಗಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು ಯಾರೇ ಕ್ಲೀನ್ ಚಿಟ್ ಕೊಟ್ಟರೂ ಸಿಎಂ ಮನಸಾಕ್ಷಿ ಅಪರಾಧಿ ಎನ್ನುತ್ತದೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಮಾಡುವ ಯೋಗ್ಯತೆ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಹುದ್ದೆಯನ್ನು ಭರ್ತಿ ಮಾಡದೆ ಶಿಕ್ಷಕರ ನೇಮಕಾತಿ ಆಗುತ್ತಿಲ್ಲ ಗ್ರಾಮೀಣ ಬಾಗದಲ್ಲಿ ರೈತರಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ ಹೆಲಿಕ್ಯಾಪ್ಟರ್ ಖರೀದಿಗೆ ಕಾಂಗ್ರೆಸ್ ಸರ್ಕಾರ ಹೊರಟಿದ್ದಾರೆ ಸರ್ಕಾರಕ್ಕೆ ಮರ್ಯಾದೆ ಇದೆಯಾ ಎಂದು ರಾಜ್ಯದ ಜನ ಮಾತನಾಡುತ್ತಿದ್ದಾರೆ ಶಾಪವನ್ನು ಕಾಂಗ್ರೆಸ್ ಸರ್ಕಾರಕ್ಕೆ ಜನ ಹಾಕುತ್ತಿದ್ದಾರೆ ರಾಜ್ಯದ ಜನ ಗ್ಯಾರಂಟಿಗಳ ಮೇಲೆ ಜೀವನ ನಡೆಸುತ್ತಿದ್ದಾರೆ ಗ್ಯಾರಂಟಿಗಳನ್ನ ಅನುಷ್ಠಾನ ಮಾಡಲು ಹೋಗಿ ಹಿಮಾಚಲ ಪ್ರದೇಶದ ಸರ್ಕಾರ ಸಮಸ್ಯೆ ಎದುರಿಸುತ್ತಿದೆ ತೆಲಂಗಾಣ ಸರ್ಕಾರ ಮುಖ್ಯಮಂತ್ರಿಗಳು ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ ಎಂದು ಸದನದಲ್ಲಿ ಹೇಳಿದ್ದಾರೆ ಮುಖ್ಯಮಂತ್ರಿಗಳು ಕೇವಲ ಬೆಂಗಳೂರಿಗೆ ಅಲ್ಲದೆ ರಾಜ್ಯದ ಮುಖ್ಯಮಂತ್ರಿಗಳು ಇದನ್ನ ಅರ್ಥ ಮಾಡಿಕೊಂಡು ರಾಜ್ಯದ ಅಭಿವೃದ್ಧಿಗೆ ಹಣ ಕೊಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಜಿಎಸ್ಟಿ ಕಡಿಮೆ ಮಾಡಿದ್ದು ಉತ್ತಮ ನಿರ್ಧಾರವಾಗಿದೆ ಇದರಿಂದಾಗಿ ಜನಸಾಮಾನ್ಯರಿಗೆ ಅನುಕೂಲ ಆಗಿದೆ ಕೇಂದ್ರದ ಮಂತ್ರಿಗಳು ಒಳ್ಳೆಯ ನಿರ್ದಾರ ತೆಗೆದುಕೊಂಡಿದ್ದಾರೆ ಎಂದ ಅವರು ಯಾದವ ಸಮುದಾಯವನ್ನು ಎಸ್ಟಿ ಪಟ್ಟಿಕೆ ಸೇರಿಸುವ ಬೇಡಿಕೆ ಇದೆ ಕೇಂದ್ರದ ವರಿಷ್ಠರ ಗಮನಕ್ಕೆ ತಂದು ಈ ಬಗ್ಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿ ಧರ್ಮಸ್ಥಳದಲ್ಲಿ ಸೌಜನ್ಯ ಮನೆ ಭೇಟಿ ರಾಜಕಾರಣಕ್ಕಾಗಿ ಅಲ್ಲ ಸೌಜನ್ಯ ಪ್ರಕರಣದ ಮರು ತನಿಖೆಗೆ ಸರ್ಕಾರಕ್ಕೆ ಆಗ್ರಹಿಸಿದ್ದೇವೆ ಸುಪ್ರೀಂಕೋರ್ಟ್ ಗೆ ಮನವಿ ಮಾಡಿ ಎಂದು ಹೇಳಿದ್ದೇವೆ ಸೌಜನ್ಯ ಕುಟುಂಬ ಭೇಟಿ ವೇಳೆ ನಾವು ಹೇಳಿದ್ದೇವೆ ವೆಚ್ಚ ಭರಿಸುವುದಾಗಿ ನಾವು ಸೌಜನ್ಯ ಕುಟುಂಬಕ್ಕೆ ಹೇಳಿದ್ದೇವೆ ಸೌಜನ್ಯ ಪ್ರಕರಣ ಬಗ್ಗೆ ಸರ್ಕಾರದಿಂದ ಗೊಂದಲ ಸೃಷ್ಠಿ ಬೇಡ ಸೌಜನ್ಯ ಪ್ರಕರಣದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ ಎಂದು ವಿಜಯೇಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಶಾಸಕರಾದ ಡಾ.ಎಂ.ಚಂದ್ರಪ್ಪ, ಖನಿಜ ನಿಗಮದ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿ, ವೀರಶೈವ ಬ್ಯಾಂಕ್ನ ಅಧ್ಯಕ್ಷರಾದ ಪಟೇಲ್ ಶಿವಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು
Views: 3