ಮೊಳಕಾಲ್ಮೂರು ನೀರಾ ತೋಟಕ್ಕೆ ಅಬಕಾರಿ ದಾಳಿ— ರೈತರ ಪರವಾಗಿ ಬಿಜೆಪಿ ರೈತ ಮೋರ್ಚಾದ ಮನವಿ.

ಚಿತ್ರದುರ್ಗ ಡಿ. 11

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರೈತರ ತೋಟಗಳಲ್ಲಿ ನೀರಾ (ಕಲ್ಲರಸ) ವನ್ನು ಪರವಾನಿಗೆ ಪಡೆಯದೇ ಉತ್ಪಾದಿಸಲು ರೈತರಿಗೆ ಅವಕಾಶ ನೀಡಿ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾದ ಅಧ್ಯಕ್ಷರಾದ ಟಿ.ವೆಂಕಟೇಶ್ ಯಾದವ್ ನೇತೃತ್ವದಲ್ಲಿ ಗುರುವಾರ ಸಲ್ಲಿಸಲಾಯಿತು.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಕೂರು ತಾಲ್ಲೂಕಿನಲ್ಲಿ ನೀರಾ (ಕಲ್ಲರಸ) ವನ್ನು ಉತ್ಪಾದನೆ ಮಾಡುತ್ತಿರುವಂತಹ ವಸುಂದರ ಫಾರಂ ಮಾಲೀಕರಾದ ಎಸ್.ಸಿ.ವೀರಭದ್ರಪ್ಪನವರ ತೋಟಕ್ಕೆ ಅಬಕಾರಿ ಅಧಿಕಾರಿಗಳು ಏಕಾಏಕಿ ನುಗ್ಗಿ ಅಲ್ಲಿಂದಂತಹ ನೀರಾ (ಕಲ್ಪರಸ) ನಾಮಫಲಕಗಳನ್ನು ಕಿತ್ತು ಎಸೆದು ನೀರಾ ಬಳಕೆಗೆ ಉತ್ಪಾದಿಸುವ ಪರಿಕರಗಳನ್ನೆಲ್ಲ ಕಿತ್ತೆಸೆದು ನೀರಾ ಉತ್ಪಾದಿಸಿದರೆ ಕೇಸ್ ದಾಖಲಿಸುವಾಗಿ ತಾಖೀತು ಮಾಡಿರುವುದು ಖಂಡನಾರ್ಹವಾಗಿದೆ ಎಂದಿದ್ದಾರೆ.

ಇದರಿಂದ ಮನ ನೊಂದಿರುವ ಇವರಿಗೆ ಅಬಕಾರಿ ಅಧಿಕಾರಿಗಳು ಕ್ಷಮೆಯಾಚಿಸಬೇಕು. ಈ ನೀರಾ (ಕಲ್ಪರಸ) ಉತ್ಪಾದನೆಯಿಂದ ಈ ಸ್ವಾಸ್ತ್ರ ಸಮಾಜಕ್ಕೆ ಆರೋಗ್ಯಕರವಾದಂತೆ ಅಂಶಗಳನ್ನು ಹೊಂದಿದೆ ಎಂದು ಹಿಂದಿನ ಋಷಿ ಪರಂಪರೆ, ವೈದ್ಯಕೀಯ ಪರಂಪರೆ, ಕೃಷಿ ಪರಂಪರೆ ಈ ಎಲ್ಲಾ ಇತಿಹಾಸಗಳನ್ನು ನೋಡಿದಾಗ ಈ ನೀರಾ (ಕಲ್ಪರಸ)ವನ್ನು ಸೇವಿಸಿ ಅನುಭವಿಸಿದಾಗ ಈ ಮನುಷ್ಯ ಸಂಕುಲಕ್ಕೆ ಆರೋಗ್ಯಕರ ಅಂಶಗಳು ಇದರಲ್ಲಿ ಇರುವುದು ಕಂಡು ಬಂದಿದೆ. ಇವತ್ತಿನ ಹಲವಾರು ರೋಗಗಳಿಗೆ ಮತ್ತು ಮನುಷ್ಯಕ್ಕೆ ದೇಹಕ್ಕೆ ಬೇಕಾಗುವಂತಹ ಹಲವಾರು ವಿಟಿಮಿನ್‍ಗಳ (ಖನಿಜಾಂಶ) ಇದರಲ್ಲಿವೆ ಎಂದು ಹಲವಾರು ಬಾರಿ ಸಾಬೀತಾಗಿ ದೃಢಪಟ್ಟಿದೆ ಎನ್ನಲಾಗಿದೆ.

ಇದರ ಉಪ ಉತ್ಪನ್ನವಾದಂತಹ ನೀರಾ ಬೆಲ್ಲ ಉತ್ತಮವಾದ ಗುಣಮಟ್ಟವನ್ನು ಕೂಡ ಹೊಂದಿದೆ. ಹಾಗಾಗಿ ಈ ಸಮಾಜಕ್ಕೆ ನೀರಾ (ಕಲ್ಪರಸ) ದಿಂದ ಸ್ವಾಸ್ತ್ರ ಸಮಾಜವನ್ನು ನಿರ್ಮಾಣ ಮಾಡಲು ಮತ್ತು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಉತ್ತಮವಾದಂತಹ ಒಂದು ಕೃಷಿ ಪರಂಪರೆಯಾಗಿದೆ. ಹಾಗಾಗಿ ತತಕ್ಷಣ ತಾವುಗಳು ಸ್ಥಳೀಯವಾಗಿ ಉತ್ಪಾದಿಸುತ್ತಿರುವ ನೀರಾ (ಕಲ್ಪರಸ)ವನ್ನು ರೈತರಿಗೆ ಇನ್ನಷ್ಟು ಉತ್ಪಾದಿಸಲು ಪ್ರೋತ್ಸಾಹ ನೀಡಬೇಕು ಹಾಗೂ ಸರ್ಕಾರಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲಿ ನೀರಾ (ಕಲ್ಪರಸ)ವನ್ನು ಉತ್ಪಾದಿಸುವಂತ ರೈತರ ರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ನಗರಾಧ್ಯಕ್ಷರಾದ ಲೋಕೇಶ್, ಮೊಳಕಾಲ್ಮೂರು ಮಂಡಲ ಅಧ್ಯಕ್ಷರಾದ ಶ್ರೀರಾಮರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಮಲ್ಲೇಶ್, ಶಾಂತಮ್ಮ ನಾಗರಾಜ್, ಪ್ರಭಾಕರ್ ಸಿದ್ಧಾರ್ಥ, ಬಸುರಾಜ್, ಹರೀಶ್, ನಗರ ಉಪಾಧ್ಯಕ್ಷ ಪಲ್ಲವಿ ಪ್ರಸನ್ನ, ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಜಿಲ್ಲಾ ಕಾರ್ಯದರ್ಶಿ ರೇಖಾ, ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ನಾಗರಾಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *