ಚಿತ್ರದುರ್ಗ ಡಿ. 11
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಅಹೋರಾತ್ರಿ ಧರಣಿ : ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಗೆ ತಿದ್ದುಪಡಿ ತರದಂತೆ ಸರ್ಕಾರಕ್ಕೆ ಒತ್ತಾಯ.

ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ-2020ರ ಪ್ರಸ್ತಾವಿತ ತಿದ್ದುಪಡಿ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸದಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳದ ನೇತೃತ್ವದಲ್ಲಿ ನಗರದಲ್ಲಿ ಅಹೋರಾತ್ರಿ ಧರಣಿ ನಡೆಸಿ ಅನುಮತಿ ನೀಡದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೊಗಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ-2020ರಲ್ಲಿ ಪ್ರಮುಖ ಬದಲಾವಣೆ ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ತೀವ್ರ ಉದ್ವಿಗ್ನತೆ ಯನ್ನು ಉಂಟುಮಾಡಿದೆ ಬೆಳಗಾವಿಯ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಅಕ್ರಮ ಗೋ ಸಾಗಾಟಕ್ಕೆ ಬಳಸುವ ವಾಹನಗಳ ಬಿಡುಗಡೆಯ ನಿಯಮವನ್ನು ಸಡಿಲಗೊಳಿಸುವ ತಿದ್ದುಪಡಿಯನ್ನು ಸರ್ಕಾರ ಮಂಡಿಸಲು ತಯಾರಿ ನಡೆಸುತ್ತಿದೆ. ಇದೀಗ ಜಾರಿಗೆ ಇರುವ ಕಾಯಿದೆಯ ಸೆಕ್ಷನ್ 8ರ ಪ್ರಕಾರ, ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವಾಗ ವಶಪಡಿಸಿದ ವಾಹನವನ್ನು ಬಿಡುಗಡೆ ಮಾಡಿಸಿಕೊಳ್ಳಲು ವಾಹನದ ಮೌಲ್ಯದಷ್ಟು ಬ್ಯಾಂಕ್ ಗ್ಯಾರಂಟಿ ಒಡ್ಡಬೇಕಾಗುತ್ತದೆ. ಇದನ್ನು ಬದಲಿಸಲು ಸರ್ಕಾರ ಮುಂದಾಗಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಈ ಕಠಿಣ ನಿಯಮವನ್ನು ಹಿಂಪಡೆದು ಕೇವಲ ಇನ್ನೆಮಿಟಿ ಬಾಂಡ್ ನೀಡಿದರೂ ವಾಹನ ಬಿಡುಗಡೆ ಸಾಧ್ಯವಾಗುವಂತೆ ಮಾಡಿದರೆ ಅಕ್ರಮ ಗೋಸಾಗಾಟಕ್ಕೆ ನೇರ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ “ಪ್ರತಿಭೆಯೇ ಕ್ರೂರ ಶಕ್ತಿ” ಬ್ಯಾಂಕ್ ಗ್ಯಾರಂಟಿ ನಿಯಮದಿಂದ ಅಕ್ರಮ ಸಾಗಾಟಗಾರರಿಗೆ ತಡೆ ಉಂಟಾಗಿತ್ತು. ಈಗ ಅದನ್ನೇ ತೆರವುಗೊಳಿಸುವ ಮೂಲಕ ಸರ್ಕಾರ ಗೋಕಳ್ಳ ಸಾಗಾಟಗಾರರಿಗೆ ಪರೋಕ್ಷ ಬೆಂಬಲ ನೀಡುತ್ತಿದೆ. ಈ ತಿದ್ದುಪಡಿ ಜಾರಿಗೆ ಬಂದರೆ, ಹಿಂದೂ ಸಮಾಜಕ್ಕೆ ಪವಿತ್ರವಾಗಿರುವ ಗೋವಂಶದ ಮೇಲೆ ಹಿಂಸೆ ಹೆಚ್ಚಾಗುವ ಅಪಾಯವಿದೆ ಎಂದು ದೂರಿದರು.
ಬಹುಸಂಖ್ಯಾತರ ಭಾವನೆಗೆ ಸ್ಪಂದಿಸಿದ್ದ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಗೋ ಸಂರಕ್ಷಣೆ ಸಂಬಂಧ ಕಠಿಣ ಕಾಯ್ದೆ ಜಾರಿಗೊಳಿಸಿತ್ತು. ಅದರೀಗ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಠಿಕರಣ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಲಪಡಿಸುವಂತೆ ಆಗ್ರಹಿಸಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಡಿಲಗೊಳಿಸಿ ಗೋವುಗಳ ಕಳ್ಳರಿಗೆ ಅನುಕೂಲ ಮಾಡಿಕೊಟ್ಟಿದೆ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ತಿದ್ದುಪಡಿಯು ಸಂವಿಧಾನದ ಆಶಯಕ್ಕೆ ಸಮತ್ತ ಆದ್ದರಿಂದ ಇದನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಲಾಯಿತು.
ಡಿ. 10 ರ ಮಧ್ಯಾಹ್ನ 12 ಗಂಟೆಯಿಂದ ಡಿ.11ರ ಮಧ್ಯಾಹ್ನ 12ರವರೆಗೆ ಸುಮಾರು 24 ಗಂಟೆಗಳ ಕಾಲ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅಹೋರಾತ್ರಿ ಧರಣಿಯನ್ನು ನಡೆಸಿದ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳದ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಅಹೋರಾತ್ರಿ ಧರಣಿಯಲ್ಲಿ ಪ್ರಾಂತ ಸಂಯೋಜಕರಾದ ಪ್ರಭಂಜನ್, ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ, ಪ್ರಾಂತ ಉಪಾಧ್ಯಕ್ಷ ಡಾ.ಮಂಜುನಾಥ್, ಜಿಲ್ಲಾ ಸಂಯೋಜಕ ಕೃಷ್ಣ ಸಹ ಸಂಚಾಲಕ ದಿನೇಶ್ ರಾಮು, ಮಾಜಿ ಶಾಸಕರಾದ ಎಸ್,ಕೆ,ಬಸವರಾಜನ್, ನಗರಾಧ್ಯಕ್ಷ ಲೋಕೇಶ್, ಆರ್.ಎಸ್.ಎಸ್,ನ ರಾಜಕುಮಾರ್ ದೃವಕುಮಾರ್, ಯತಿಶ್, ರೇಖಾ ವೆಂಕಟೇಶ್ ಯಾದವ್, ಕೆ.ಟಿ.ಕುಮಾರಸ್ವಾಮಿ ಜಿ,ಎಂ.ಸುರೇಶ್, ವಿಠಲ, ಮೋಹನ್ ಕುಮಾರ್ ಈರಣ್ಣ, ದೀಪಕ್ ರಾಜ್, ದರ್ಶನ್ ನಾಗರಾಜ್ ಬೆದ್ರೇ, ದ್ಯಾಮಣ್ಣ ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.