ಮಳೆಗಾಲದಲ್ಲಿ ಮೊಸರು ಸೇವನೆ ಆರೋಗ್ಯಕ್ಕೆ ಒಳ್ಳೆಯದೇ? ತಜ್ಞರು ಹೇಳುವುದೇನು?

ಮೊಸರು ಪೋಷಕಾಂಶಗಳ ಶಕ್ತಿಕೇಂದ್ರವಾಗಿದೆ. ಮೊಸರನ್ನು ಪ್ರತಿದಿನ ಸೇವಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಲ್ಯಾಕ್ಟೋಬಾಸಿಲಸ್ ಎಸ್ಪಿ, ಲ್ಯಾಕ್ಟೋಕೊಕಸ್ ಎಸ್ಪಿ, ಮತ್ತು ಸ್ಟ್ರೆಪ್ಟೋಕೊಕಸ್ ಎಸ್ಪಿಯಂತಹ ಬ್ಯಾಕ್ಟೀರಿಯಾವನ್ನು ಒಳಗೊಂಡಿರುವ ಹುದುಗುವಿಕೆ ಪ್ರಕ್ರಿಯೆಯಿಂದ ಮೊಸರು ಉತ್ಪತ್ತಿಯಾಗುತ್ತದೆ. ಮೊಸರು ಉತ್ತಮ ಬ್ಯಾಕ್ಟೀರಿಯಾವನ್ನು ಹೊಂದಿದ್ದು ಅದು ಹೊಟ್ಟೆಗೆ ತುಂಬಾ ಒಳ್ಳೆಯದು. ಮೊಸರು ದೇಹದಲ್ಲಿನ ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಹಾಲು ಇಷ್ಟಪಡದ ಜನರು ತಮ್ಮ ಆಹಾರದಲ್ಲಿ ಮೊಸರನ್ನು ಸೇರಿಸಬೇಕೆಂದು ತಜ್ಞರು ಶಿಫಾರಸು ಮಾಡುತ್ತಾರೆ.

ಮಳೆಗಾಲದಲ್ಲಿ ಮೊಸರು ತಿಂದರೆ ಏನು ಲಾಭ?

  • ಮಳೆಗಾಲದಲ್ಲಿ ದಿನಕ್ಕೆ ಎರಡು ಬಾರಿ 200 ಗ್ರಾಂ ಮೊಸರು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.
  • ಮಾನ್ಸೂನ್ ಸಮಯದಲ್ಲಿ ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
  • ಮಾನ್ಸೂನ್ ಸಮಯದಲ್ಲಿ ಸ್ವಲ್ಪ ಪ್ರಮಾಣದ ಮೊಸರು ತಿನ್ನುವುದರಿಂದ ಅತಿಸಾರವನ್ನು ತಡೆಯಬಹುದು.
  • ಮೊಸರಿನಲ್ಲಿರುವ ವಿಟಮಿನ್ ಡಿ, ಪ್ರೊಟೀನ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಡಿಮೆ ಬಳಸುವುದು ಉತ್ತಮ:

ಮೊಸರು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿದ್ದರೂ, ಮಳೆಗಾಲದಲ್ಲಿ ಮೊಸರು ಸೇವಿಸುವಾಗ ಕೆಲವು ಮುನ್ನೆಚ್ಚರಿಕೆಗಳು ಅಗತ್ಯ. ರಾತ್ರಿಯಲ್ಲಿ ಹೆಚ್ಚು ಮೊಸರು ತಿಂದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಅಲ್ಲದೆ, ಮೊಸರು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಮೊಸರಿಗಿಂತ ರಾತ್ರಿ ಮಜ್ಜಿಗೆ ಉತ್ತಮ. ಕಾಲೋಚಿತ ರೋಗಗಳ ಅಪಾಯವನ್ನು ಕಡಿಮೆ ಮಾಡಲು, ತಾಜಾ ಮೊಸರು ಮಾತ್ರ ತಿನ್ನಿರಿ. ಹಳೆಯ ಮೊಸರು ತಿನ್ನಬೇಡಿ.

Source : https://tv9kannada.com/health/right-way-to-consume-curd-during-monsoon-aks-868943.html

 

Leave a Reply

Your email address will not be published. Required fields are marked *