ರೈತರ ಬೇಡಿಕೆ ಈಡೇರಿಸಿ: ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ರೈತರಿಂದ ಮನವಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 19

ಜಿಲ್ಲೆಯ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್‍ ಅವರನ್ನು ಮುತ್ತಿಗೆ ಹಾಕಿ ಆಗ್ರಹಿಸಲಾಯಿತು.

ಜಿಲ್ಲೆಯಲ್ಲಿ ಅತಿವೃಷ್ಟಿಗೆ ಈರುಳ್ಳಿ ಸಂಪೂರ್ಣ ನಾಶವಾಗಿದ್ದು, ಬೆಳೆ ಪರಿಹಾರ ಕೇವಲ ಬೆರಳಣಿಕೆಯಷ್ಟು ಕೊಟ್ಟಿದ್ದು, ರೈತರಿಗೆ ಬಹಳ ಅನ್ಯಾಯವಾಗಿದೆ ಮತ್ತು ಅಲ್ಪಸ್ವಲ್ಪ ಬೆಳೆಗೆ ಬೆಲೆ ಇಲ್ಲದಿರುವುದದರಿಂದ ಖರೀದಿ ಕೇಂದ್ರವನ್ನು ತೆರೆಯಬೇಕೆಂದು ಮನವಿ ಕೊಟ್ಟಿದ್ದರೂ ಸಹ ಸರ್ಕಾರ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಮತ್ತು ಬೆಳೆ ವಿಮೆಯು ಸಹ ಬಾರದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಅನಾವೃಷ್ಟಿಗೆ ಶೇಂಗಾ ತೊಗರಿ ಸಂಪೂರ್ಣ ಬೆಳೆ ಹಾನಿಯಾಗಿದ್ದರೂ ಸಹ ಪರಿಹಾರವನ್ನು ಕೊಟ್ಟಿರುವುದಿಲ್ಲ ಮತ್ತು ಬೆಳೆ ವಿಮೆಯು ಸಹ ಬಂದಿರುವುದಿಲ್ಲ ಜಿಲ್ಲೆಯಲ್ಲಿ ಸಾಕಷ್ಟು ಮೆಕ್ಕೆಜೋಳವನ್ನು ಬೆಳೆದಿದ್ದರೂ ಸಹ ಸರಿಯಾದ ಸಮಯಕ್ಕೆ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದೆ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಬಹಳ ಅನ್ಯಾಯವಾಗುತ್ತಿದ್ದು, ಸ್ಯಾಂಪಲ್ ತೆಗೆಯುವ ನೆಪದಲ್ಲಿ 50ರಿಂದ ಕ್ವಿಂಟಲ್ ರಾಗಿಯನ್ನು ಸ್ಯಾಂಪಲ್ ರಾಗಿಯನ್ನು ತೆಗೆಯುತ್ತಾರೆ ಇದು ತಪ್ಪಬೇಕು, ಬೆಸ್ಕಾಂ ಇಲಾಖೆಯಲ್ಲಿ ರೈತರಿಗೆ ಸರ್ಕಾರದ ಬಂದಾಗಿನಿಂದ ಅಕ್ರಮ ಸಕ್ರಮದಡಿಯಲ್ಲಿ ಮೂಲ ಭೂತ ಸೌಕರ್ಯ ವನ್ನು ನಿಲ್ಲಿಸಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸ್ವಯಂ ವೆಚ್ಚದಲ್ಲಿ ಮಾಡಬೇಕಾದರೆ ಎರಡರಿಂದ ಮೂರು ಲಕ್ಷ ಖರ್ಚಾಗುತ್ತಿರುವುದರಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆರ್ಥಿಕ ಹೊರೆಯಾಗಿದ್ದು, ಇದನ್ನು ನಿಲ್ಲಿಸಿ ಅಕ್ರಮ ಸಕ್ಷಮದಡಿಯಲ್ಲಿ ರೈತರ ಪಂಪ್‍ಸೆಟ್‍ಗಳಿಗೆ ಮೂಲಭೂತ ಸೌಕರ್ಯ ಮೊದಲಿನಂತೆ ಒದಗಿಸಬೇಕು ಮತ್ತು ಭರಮಸಾಗರ ಸಿರಿಗೆರೆ ಹೊಳಲ್ಕೆರೆಯ ಕೆಲವು ಭಾಗದಲ್ಲಿ ಏಳು ಗಂಟೆ ರೈತರ ಪಂಪಸೆಟ್‍ಗಳಿಗೆ ವಿದ್ಯುತ್ ಕೊಡಬೇಕೆಂದು ನಿಯಮವಿದ್ದರೂ ಸಹ ಬರೀ ನಾಲ್ಕರಿಂದ ಐದು ಗಂಟೆ ವಿದ್ಯುತ್ ಕೊಡುತ್ತಿದ್ದ ಬೇಸಿಗೆ ಶುರುವಾಗಿರುವುದರಿಂದ ತಕ್ಷಣ ಗುಣಮಟ್ಟದ ಏಳು ಗಂಟೆ ವಿದ್ಯುತ್ ಅನ್ನು ರೈತರ ಪಂಪ್‍ಸೆಟ್‍ಗಳಿಗೆ ಕೊಡಬೇಕು ಎಂದು ಆಗ್ರಹಿಸಿದರು.

ಹಳ್ಳಿಗಳಲ್ಲಿ ರಸ್ತೆಗಳು ಗುಂಡಿಗಳಾಗಿದ್ದು, ಇದರಿಂದ ಸಾಕಷ್ಟು ಜನ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಿದ್ದಾರೆ ಆದ್ದರಿಂದ ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ತಕ್ಷಣ ಸರಿಪಡಿಸಬೇಕು. ಜಿಲ್ಲೆಯಲ್ಲಿ ಕಳ್ಳತನದ ಪ್ರಕರಣಗಳು ಜಾಸ್ತಿಯಾಗಿದ್ದು, ರೈತರು ಮತ್ತು ಸಾಮಾನ್ಯ ಜನರು ಭಯಭೀತರಾಗಿದ್ದು, ರೈತರು ತಮ್ಮ ತೋಟದ ಪಂಪ್ ಸೆಟ್‍ನ ಕೇಬಲ್ ಮೋಟಾರ್ ಪೈಪುಗಳನ್ನು ಕಾಯುವುದೇ ಕೆಲಸವಾಗಿದೆ ರೈತರು ಹಗರಲಿರುಳು ದುಡಿದು ರಾತ್ರಿ ಇಡೀ ತೋಟಗಳನ್ನು ಕಾಯುವುದು ತಪ್ಪಿಸಬೇಕು ರೈತರು ತಾವು ಬೆಳೆದಂತ ಬೆಳೆಗಳು ಕಳುವಾಗಿ ಇದ್ದರೂ ಸಹ ಕೆಲಸ ಪ್ರಕರಣಗಳು ಪತ್ತೆಯಾಗಿರುವುದಿಲ್ಲ. ಇಂತಹ ಪ್ರಕರಣಗಳನ್ನು ಪುನ: ತನಿಖೆ ಮಾಡಬೇಕು ಜಿಲ್ಲೆಯಲ್ಲಿ 2024-25ರ ಹವಮಾನ ಆಧಾರಿತ ಬೆಳೆ ವಿಮೆ ಎಲ್ಲಾ ಅಕ್ಕಪಕ್ಕದ ಜಿಲ್ಲೆಗಳಲ್ಲಿ ರೈತರ ಖಾತೆಗೆ ಹವಮಾನ ಆಧಾರಿತ ಬೆಳೆ ವಿಮೆ ಜಮೆ ಆಗಿದ್ದರೂ ಸಹ ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೂ ಸಹ ರೈತರ ಖಾತೆಗೆ ಜಮಾ ಆಗಿರುವುದಿಲ್ಲ. ಇದನ್ನು ತಕ್ಷಣ ಸರಿಪಡಿಸಬೇಕು ಎಂದರು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ರೈತರ ಸಾಲ ಮನ್ನಾ ಮಾಡಬೇಕೆಂದು ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಡಿಎಸ್ ಹಳ್ಳಿ ಮಲ್ಲಿಕಾರ್ಜುನ್, ಕಬ್ಗೆರೆ ನಾಗರಾಜ್ ಕಾಂತರಾಜ್ ಮುದ್ದಾಪುರ ನಾಗಣ್ಣ ಸಿದ್ದಣ್ ಮಲ್ಲಿಕಾರ್ಜುನ್ ರವಿಕುಮಾರ್ ವೀರಣ್ಣ ವೆಂಕಟರೆಡ್ಡಿ ಪ್ರಕಾಶ್ ರೆಡ್ಡಿ ಸತೀಶ್ ರೆಡ್ಡಿ ಕಲ್ಲೇಶಪ್ಪ ಅಂಜಿನಪ್ಪ ಸಂಜೀವಪ್ಪ ಕಾಟಪ್ಪ ಮಾರುತಿ ಲಕ್ಷ್ಮಣ ನಾಗರಾಜ್ ರೆಡ್ಡಿ ಮುಂತಾದವರಿದ್ದರು

Views: 74

Leave a Reply

Your email address will not be published. Required fields are marked *