Cities Bellary: ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಈ ಬೆನ್ನಲ್ಲೇ ಈಗ ಬಳ್ಳಾರಿ ನಗರ ಕ್ಷೇತ್ರಗಳಲ್ಲಿ ಭಾವ ನಾದಿನಿ ನಡುವೆ ನೇರ ಫೈಟ್ ಗೆ ಚುನಾವಣೆ ಸಾಕ್ಷಿಯಾಗಲಿದೆ.
![](https://samagrasuddi.co.in/wp-content/uploads/2023/04/image-13.png)
ಬೆಂಗಳೂರು: ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಈ ಬೆನ್ನಲ್ಲೇ ಈಗ ಬಳ್ಳಾರಿ ನಗರ ಕ್ಷೇತ್ರಗಳಲ್ಲಿ ಭಾವ ನಾದಿನಿ ನಡುವೆ ನೇರ ಫೈಟ್ ಗೆ ಚುನಾವಣೆ ಸಾಕ್ಷಿಯಾಗಲಿದೆ.
ಹೌದು, ಬಿಜೆಪಿ ಬಳ್ಳಾರಿ ನಗರ ಕ್ಷೇತ್ರದಿಂದ ಗಾಲಿ ಸೋಮಶೇಖರ್ ಗೆ ಟೀಕೆಟ್ ನೀಡಿರುವುದು ಖಚಿತಗೊಂಡಿರುವ ಬೆನ್ನಲ್ಲೇ ಇತ್ತ ಈಗಾಗಲೇ ಬಳ್ಳಾರಿ ನಗರ ಕ್ಷೇತ್ರದಿಂದ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಲಕ್ಷ್ಮಿ ಅರುಣಾ ರೆಡ್ಡಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಈಗ ಹೊಸ ಪಕ್ಷದ ಮೂಲ ರಾಜಕೀಯ ಮರು ಎಂಟ್ರಿಗೆ ಕಾಯುತ್ತಿರುವ ಗಾಲಿ ಜನಾರ್ಧನ್ ರೆಡ್ಡಿ ಈಗ ಬಳ್ಳಾರಿ ನಗರ ಕ್ಷೇತ್ರದಿಂದ ತಮ್ಮ ಪತ್ನಿ ಲಕ್ಷ್ಮಿ ಅರುಣಾ ರೆಡ್ಡಿಯವರನ್ನು ಕಣಕ್ಕೆ ಇಳಿಸಿದ್ದಾರೆ.ಆ ಮೂಲಕ ಈಗ ತಮ್ಮ ಅಣ್ಣ ಗಾಲಿ ಸೋಮಶೇಖರ್ ರೆಡ್ಡಿ ಸವಾಲಾಗಲಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಹಲವು ಕ್ಷೇತ್ರಗಳಲ್ಲಿ ಸ್ಫರ್ಧೆ ಮಾಡಿಯೇ ತೀರುತ್ತೇವೆ ಎಂದು ಹೇಳಿರುವುದರಿಂದ ಈಗ ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಭಾವ ಮತ್ತು ನಾದಿನಿ ನಡುವಿನ ಗುದ್ದಾಟಕ್ಕೆ ಚುನಾವಣೆ ಸಾಕ್ಷಿಯಾಗಲಿದೆ.