ಚಿತ್ರದುರ್ಗ:ಆ. 29
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಗ್ಯಾರಂಟಿ ಯೋಜನೆಯಿಂದ ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಸಂಕಷ್ಟ, ತೆಲಂಗಾಣ ಸಿಎಂ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ ಎಂದಿದ್ದಾರೆ, ನಮ್ಮ ರಾಜ್ಯದ ಪರಿಸ್ಥಿತಿ ಏನೂ ಭಿನ್ನವಾಗಿ ಉಳಿದಿಲ್ಲ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗ್ತಿಲ್ಲ ರಾಜ್ಯದಲ್ಲಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ರಾಜ್ಯದಲ್ಲಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ ಹೆಣ್ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಿದೆ ಸರ್ಕಾರ, ಗೃಹ ಸಚಿವರು ಕಾಳಜಿ ತೋರಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಕಾಳಗ ಶುರುವಾಗಿದ್ದು ವಿಕೋಪಕ್ಕೆ ಹೋಗುತ್ತಿದೆ ರಾಜ್ಯದಲ್ಲಿ ಏನು ಬೇಕಾದರು ಆಗಬಹುದು ಸಿಎಂ ಹೇಳಿಕೆಯನ್ನು ಆಡಳಿತ ಪಕ್ಷದ ಶಾಸಕರೇ ಒಪ್ಪಿಕೊಳ್ಳುತ್ತಿಲ್ಲ ನವೆಂಬರ್ ನಂತರ ಸಿಎಂ ಆಗಿರುವ ಬಗ್ಗೆ ಸಿಎಂಗೆ ವಿಶ್ವಾಸ ಇಲ್ಲ ಈ ಮೊದಲು ಐದು ವರ್ಷ ನಾನೇ ಸಿಎಂ ಎಂದು ಹೇಳಿದ್ದರು ಈಗ ಹೈಕಮಾಂಡ್ ಸೂಚಿಸಿದರೆ ಐದು ವರ್ಷ ಇರುತ್ತೇನೆ ಅಂದಿದ್ದಾರೆ ಕೆಲ ಶಾಸಕರು ಡಿಕೆಶಿ ಸಿಎಂ ಆಗಬೇಕು ಎಂದು ಹೇಳಿದ್ದಾರೆ ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಿಂದ ಅಭಿವೃದ್ಧಿ ಕಡೆಗಣನೆಯಾಗಿದೆ ಅತಿವೃಷ್ಠಿಗೆ ಪರಿಹಾರ ಕೊಡುವ ಯೋಗ್ಯತೆಯೂ ಸರ್ಕಾರಕ್ಕಿಲ್ಲ ಮುಖ್ಯಮಂತ್ರಿ ಇದ್ದರೇನು ಬಿದ್ದರೇನು ಎಂದ ಅವರು ದಲಿತ ಮುಖ್ಯಮಂತ್ರಿ ಕೂಗು ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರು ಮುಖ್ಯಮಂತ್ರಿ ಆಗಿರಬೇಕು ಅಂತಾ ನಿರ್ಧಾರ ನಾವು ಮಾಡಲ್ಲ.ಆಡಳಿತ ಪಕ್ಷದ ಶಾಸಕರು, ಸಚಿವರೇ ಹೊಡೆದಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಆಂತರಿಕ ಕಚ್ಚಾಟ ಉಲ್ಬಣಗೊಳ್ಳುತ್ತಿದೆ ಸಿಎಂ ಆಗಲು ಹಲವರು ಈಗ ಟವಲ್ ಹಾಕಿ ಕೂತಿದ್ದಾರೆ ಹೈಕಮಾಂಡ್ ಅವಕಾಶ ಕೊಟ್ಟರೆ 5ವರ್ಷ ನಾನೇ ಸಿಎಂ ಎಂದಿದ್ದಾರೆ ತಿಂಗಳ ಹಿಂದೆ ನಾನೇ ಐದು ವರ್ಷ ಸಿಎಂ ಎಂದು ಹೇಳಿದ್ದರು ಕಾಂಗ್ರೆಸ್ ಬಣ ಕದನದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿತ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಸಿಎಂ ಸಿದ್ಧರಾಮಯ್ಯ ಬಡವರು, ರೈತರು, ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಸರ್ಕಾರವಿದು ಜನ ಛೀ ಥೂ ಎಂದು ಉಗಿದು ಶಾಪ ಹಾಕ್ತಿದ್ದಾರೆ ಸಿ.ಎಂ. ಯಾರಾಗಿರ್ಬೆಕು, ಯಾರನ್ನ ಉಳಿಸಬೇಕು ನಮ್ಮ ಕೆಲಸ ಅಲ್ಲ ಕಚ್ಚಾಟದಲ್ಲಿ ನಿರತ ಸರ್ಕಾರ ಇದ್ದರೆಷ್ಟು ಬಿದ್ದರೆಷ್ಟೆಂದು ಜನ ಮಾತಾಡ್ತಿದ್ದಾರೆ ಸಚಿವರು, ಶಾಸಕರೇ ಪ್ರತಿದಿನ ಬಡಿದಾಡ್ತಿದ್ದಾರೆ ನವೆಂಬರ್ ಅಂತ್ಯಕ್ಕೆ ತಾರ್ಕಿಕ ಅಂತ್ಯದ ಮುನ್ಸೂಚನೆ ಸಿಗ್ತಿದೆ ಎಂದು ವಿಜಯೇಂದ್ರ ಭವಿಷ್ಯ ನುಡಿದರು.
ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದೆ..ಯಾರೇ ಮುಖ್ಯಮಂತ್ರಿ ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭಿವೃದ್ಧಿ ಅಸಾಧ್ಯ. ಸಿಎಂ, ಡಿಸಿಎಂ, ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ ಅಂತಿದ್ದಾರೆ.. ಕಾಂಗ್ರೆಸ್ ಆಡಳಿತ ಹಿಮಾಚಲಪ್ರದೇಶ ಇಂದು ಆರ್ಥಿಕ ಸಂಕಷ್ಟದಲ್ಲಿದೆ.ತೆಲಂಗಾಣ ಸಿಎಂ ಗ್ಯಾರಂಟಿಯಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡವುದಕ್ಕೆ ಆಗುತ್ತಿಲ್ಲ ಅಂತಿದ್ದಾರೆ.. ನಮ್ಮ ರಾಜ್ಯದಲ್ಲೂ ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ.ರಾಜ್ಯದಲ್ಲಿ ಕಂಟ್ರ್ಯಾಕ್ಟರ್ ಬಿಲ್ ಕೊಡದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ… ಸಾವಿರಾರು ಕೋಟಿ ಬಂಡವಾಳ ಹಾಕಿದವರು ಇಂದು ಬೀದಿಗೆ ಬಂದಿದ್ದಾರೆ.ಸಣ್ಣ ಗುತ್ತಿಗೆದಾರರು ಇಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.ರಾಜ್ಯ ಸರ್ಕಾರ, ಗೃಹ ಇಲಾಖೆ ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ವಿಜೇಂದ್ರ ದೂರಿದರು.
Views: 17