Excessive Thirst : ದೇಹಕ್ಕೆ ಹೆಚ್ಚು ನೀರು ಬೇಕು. ಆರೋಗ್ಯವಾಗಿರಲು, ಎಲ್ಲಾ ಜನರು ದಿನಕ್ಕೆ ಕನಿಷ್ಠ 3-4 ಲೀಟರ್ ನೀರನ್ನು ಕುಡಿಯಲು ಸೂಚಿಸಲಾಗುತ್ತದೆ. ಬೇಸಿಗೆಯ ದಿನಗಳಲ್ಲಿ ನಿರಂತರವಾಗಿ ನೀರು ಕುಡಿಯಬೇಕು. ಪ್ರತಿ ಎರಡು-ಮೂರು ಗಂಟೆಗೊಮ್ಮೆ ನೀರು ಕುಡಿಯುವುದು ತುಂಬಾ ಪ್ರಯೋಜನಕಾರಿ.

Health Tips : ಒಬ್ಬೊಬ್ಬರಿಗೆ ಅರ್ಧಗಂಟೆಗೊಮ್ಮೆ ನೀರು ಕುಡಿಯಬೇಕೆನುಸುತ್ತದೆ. ನೀರು ಕುಡಿಯುವುದು ಒಳ್ಳೆಯದು ಆದರೆ ಅತೀಯಾಗಿ ಬಾಯಾರಿದರೆ ಇದು ಆರೋಗ್ಯಕ್ಕೆ ಎಲ್ಲಿಲ್ಲದ ಸಮಸ್ಯೆಗಳನ್ನು ತಂದಿಡಬಹುದು. ಹಾಗಾದರೆ ಹೆಚ್ಚು ಬಾಯಾರಿಕೆ ಆಗುವುದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿಯೋಣ ಬನ್ನಿ…
ಒಣ ಬಾಯಿ
ಅತಿಯಾಗಿ ಬಾಯಾರುವುದಕ್ಕೆ ಒಣ ಬಾಯಿ ಒಂದು ಕಾರಣವಾಗಿದೆ. ಹೌದು, ನೀವು ಮತ್ತೆ ಮತ್ತೆ ಬಾಯಾರಿಕೆಯನ್ನು ಅನುಭವಿಸುತ್ತಿದ್ದರೆ, ಅದರ ಹಿಂದಿನ ಕಾರಣ ಒಣ ಬಾಯಿ ಆಗಿರಬಹುದು. ಏಕೆಂದರೆ ನಿಮ್ಮ ಲಾಲಾರಸ ಗ್ರಂಥಿಯು ಸಾಕಷ್ಟು ಲಾಲಾರಸವನ್ನು ಉತ್ಪಾದಿಸಲು ಸಾಧ್ಯವಾಗದಿದ್ದಾಗ, ಅದು ನಿಮ್ಮ ಬಾಯಿಯನ್ನು ಸರಿಯಾಗಿ ತೇವಗೊಳಿಸುವುದಿಲ್ಲ. ಇದರಿಂದ ನಾಲಿಗೆ ಮತ್ತು ಬಾಯಿ ಒಣಗುತ್ತದೆ. ಹಾಗಾಗಿ ನಿಮ್ಮ ಬಾಯಿ ಮತ್ತೆ ಮತ್ತೆ ಒಣಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.
ಮಧುಮೇಹವು
ಆಗಾಗ್ಗೆ ಬಾಯಾರಿಕೆಗೆ ಮಧುಮೇಹವೂ ಒಂದು ಕಾರಣವಾಗಿರಬಹುದು. ಮಧುಮೇಹದಿಂದಾಗಿ, ಅತಿಯಾದ ಬಾಯಾರಿಕೆ ಪ್ರಾರಂಭವಾಗುತ್ತದೆ. ಮಧುಮೇಹದಲ್ಲಿ 2 ರಿಂದ 3 ವಿಧಗಳಿವೆ. ಇದರಲ್ಲಿ ದೇಹವು ದ್ರವವನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಮತ್ತು ದೇಹದಲ್ಲಿ ನೀರಿನ ಕೊರತೆ ಇರುತ್ತದೆ.
ಜೀರ್ಣಾಂಗ ವ್ಯವಸ್ಥೆ
ಜೀರ್ಣಾಂಗ ವ್ಯವಸ್ಥೆಯಲ್ಲಿ ಕೆಲವು ಸಮಸ್ಯೆಗಳಿರುವುದರಿಂದ ಬಾಯಾರಿಕೆ ಆಗಬಹುದು. ಏಕೆಂದರೆ ಕೆಲವೊಮ್ಮೆ ತುಂಬಾ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ.
ನಿರ್ಜಲೀಕರಣ
ನಿಮ್ಮ ದೇಹದಲ್ಲಿ ನೀರು ಅಥವಾ ದ್ರವದ ಕೊರತೆಯಿದ್ದರೆ, ನೀವು ನಿರ್ಜಲೀಕರಣ ಸಮಸ್ಯೆಯನ್ನು ಅನುಭವಿಸಬಹುದು. ನಿರ್ಜಲೀಕರಣದ ಕಾರಣದಿಂದಾಗಿ, ತಲೆತಿರುಗುವಿಕೆ, ವಾಂತಿ, ತಲೆನೋವು ಮತ್ತು ಅತಿಸಾರದಂತಹ ಸಮಸ್ಯೆಗಳು ಉಂಟಾಗಬಹುದು.
Source : https://zeenews.india.com/kannada/health/is-excessive-thirst-a-problem-learn-the-reasons-153232