Yellow teeth home remedies: ಮುಖದ ನಗು ಕೇವಲ ಮನುಷ್ಯನನ್ನು ಹೈಲೈಟ್ ಮಾಡುವುದಲ್ಲದೆ, ಆ ವ್ಯಕ್ತಿಯ ಹಲ್ಲುಗಳನ್ನು ಕೂಡ ಪ್ರಮುಖವಾಗುತ್ತದೆ. ಅನೇಕ ಜನರು ಯಾರನ್ನಾದರೂ ಭೇಟಿಯಾದಾಗ ಮಾತನಾಡಲು ಹಿಂಜರಿಯುತ್ತಾರೆ. ಏಕೆಂದರೆ ಅವರ ಹಲ್ಲುಗಳು ಹಳದಿಯಾಗಿರುತ್ತದೆ. ಇದೇ ಕಾರಣದಿಂದ ಮುಜುಗರಕ್ಕೀಡಾಗುತ್ತಾರೆ. ಈ ಹಿನ್ನೆಲೆಯಲ್ಲಿ ನಿಮಗಾಗಿ ಕೆಲವೊಂದು ಸಿಂಪಲ್ ಟಿಪ್ಸ್ ಗಳನ್ನು ತಂದಿದ್ದೇವೆ.

ಹಲ್ಲಿನ ಹಳದಿ ಬಣ್ಣವನ್ನು ಹೋಗಲಾಡಿಸಲು ಉಗುರುಬೆಚ್ಚಗಿನ ನೀರಿನಲ್ಲಿ ಶುಂಠಿ ಮತ್ತು ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸುವುದರಿಂದಲೂ ಸಾಧ್ಯವಾಗುತ್ತದೆ. ಜೊತೆಗೆ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ.

ಹಳದಿ ಹಲ್ಲುಗಳ ಸಮಸ್ಯೆ ಇದ್ದವರು ನಿಂಬೆ ಮತ್ತು ಕಿತ್ತಳೆ ಸಿಪ್ಪೆಯನ್ನು ಹಲ್ಲುಗಳ ಮೇಲೆ ಉಜ್ಜಬೇಕು. ವಾರದಲ್ಲಿ 2 ದಿನ ಈ ಟಿಪ್ಸ್ ಫಾಲೋ ಮಾಡಿದರೆ ಸಾಕು ನಿಮ್ಮ ಹಲ್ಲುಗಳು ತುಂಬಾ ಹೊಳೆಯುತ್ತವೆ.

ಹಲ್ಲಿನ ಹಳದಿ ಬಣ್ಣವನ್ನು ತೆಗೆದುಹಾಕುವಲ್ಲಿ ಬೇವಿನ ಕಡ್ಡಿಗಳು ಭಾರೀ ಪ್ರಯೋಜನಕಾರಿ. ಬ್ರಷ್ ಬದಲು ಈ ಕಡ್ಡಿಗಳನ್ನು ಬಳಸಿದರೆ ಹಲ್ಲುಗಳು ಬೇಗ ಸ್ವಚ್ಛವಾಗಿ ಹೊಳೆಯುತ್ತವೆ.

ಹಳದಿ ಹಲ್ಲುಗಳ ಸಮಸ್ಯೆಯಿರುವವರು, ಸ್ಟ್ರಾಬೆರಿ ಮತ್ತು ಉಪ್ಪನ್ನು ಒಟ್ಟಿಗೆ ಮ್ಯಾಶ್ ಮಾಡಿ ಬ್ರಶ್ ಸಹಾಯದಿಂದ ಹಲ್ಲುಗಳ ಮೇಲೆ ಹಚ್ಚಬೇಕು.

ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ವಿನೆಗರ್ ಅನ್ನು ಸಹ ಬಳಸಬಹುದು. ಒಂದು ಲೋಟ ನೀರಿನಲ್ಲಿ ಸ್ವಲ್ಪ ವಿನೆಗರ್ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ನಿಮ್ಮ ಹಲ್ಲುಗಳು ಬೆಳ್ಳಗಾಗುತ್ತದೆ ಮತ್ತು ಮುತ್ತಿನಂತೆ ಹೊಳೆಯುತ್ತದೆ.
(ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಮತ್ತು ಮನೆಮದ್ದುಗಳನ್ನು ಆಧರಿಸಿದೆ. ಸಮಗ್ರ ಸುದ್ದಿ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯದ ಕುರಿತು ಸಲಹೆ ಪಡೆದುಕೊಳ್ಳಲು ಅಧ್ಯಯನ)