ಮಕ್ಕಳಲ್ಲಿ ನೆನೆಪಿನ ಶಕ್ತಿ ಹೆಚ್ಚಿಸಲು ಸಹಕಾರಿಯಾಗುವ  ಆಹಾರಗಳು.

Health Tips: ನಿಮ್ಮ ಮಕ್ಕಳು ಓದಿದ ಕೂಡಲೇ ವಿಷಯಗಳನ್ನು ಮರೆತು ಬಿಡುತ್ತಾರಾ? ಚಿಂತೆಬೇಡ, ಮಕ್ಕಳ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ನೀಡುವುದರಿಂದ ಅವರ ಜ್ಞಾಪಕಶಕ್ತಿಯನ್ನು ಹೆಚ್ಚಿಸಬಹುದು.


ಈ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳು ಅಧ್ಯಯನದಲ್ಲಿ ಎಲ್ಲರಿಗಿಂತ ಮುಂದಿರಬೇಕು ಎಂದು ಬಯಸುತ್ತಾರೆ. ಆದರೆ, ಕೆಲವು ಮಕ್ಕಳು ಎಷ್ಟೇ ಚೆನ್ನಾಗಿ ಅಭ್ಯಾಸ ಮಾಡಿದರೂ ಕೂಡ ಕಡಿಮೆ ಸಮಯದಲ್ಲಿ ತಾವು ಓದಿದ ವಿಷಯಗಳನ್ನು ಮರೆಯುತ್ತಾರೆ. 

ಕೆಲವೊಮ್ಮೆ ಮಗು ಅಧ್ಯಯನದತ್ತ ಸರಿಯಾಗಿ ಗಮನ ಹರಿಸದಿರುವುದು ಅವರ ನೆನಪಿನ ಶಕ್ತಿ ಕುಂಠಿತವಾಗಲು ಕಾರಣವಿರಬಹುದು. ಆದಾಗ್ಯೂ, ಕೆಲವು ಆಹಾರಗಳು ಮಕ್ಕಳಲ್ಲಿ ಮೆದುಳಿನ ಕಾರ್ಯವನ್ನು ಉತ್ತೇಜಿಸಲು ಸಹಕಾರಿಯಾಗಿದ್ದು ಅಂತಹ ಆಹಾರಗಳನ್ನು ಅವರ
ಡಯಟ್ನಲ್ಲಿ ಸೇರಿಸುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಬಹುದು.

ಮೊಟ್ಟೆ: ಪ್ರೊಟೀನ್ ನ ಉತ್ತಮ ಮೂಲ ಎಂದು ಪರಿಗಣಿಸಲಾಗಿರುವ ಮೊಟ್ಟೆಯ ಹಳದಿ ಲೋಳೆಯಲ್ಲಿ ಮೆಮೋರಿ ಬೆಳವಣಿಗೆಗೆ ಸಹಾಯಕವಾದ ಕೋಲೀನ್ಸಮೃದ್ಧವಾಗಿದೆ. ಹಾಗಾಗಿ, ಮಕ್ಕಳಿಗೆ ಪ್ರತಿದಿನ ಮೊಟ್ಟೆ ತಿನ್ನಿಸುವುದರಿಂದ ಅವರ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗುವುದು. 

ಕಡಲೆಕಾಯಿ ಬೆಣ್ಣೆ : ಉತ್ಕರ್ಷಣ ನಿರೋಧಕವಾಗಿರುವ ಕಡಲೆಕಾಯಿಯಲ್ಲಿ ವಿಟಮಿನ್ ಇ ಹೇರಳವಾಗಿದೆ. ಹಾಗಾಗಿ ನಿತ್ಯ ಮಕ್ಕಳ ಆಹಾರದಲ್ಲಿ ಕಡಲೆಕಾಯಿ ಬೆಣ್ಣೆ (Peanut Butter) ಬಳಸುವುದರಿಂದ ಮಕ್ಕಳ ಜ್ಞಾಪಕಶಕ್ತಿಯನ್ನು ಹೆಚ್ಚಿಸಬಹುದು ಎನ್ನಲಾಗುವುದು. 

ಸ್ಟ್ರಾಬೆರಿ ಮತ್ತು ಬೆರಿಹಣ್ಣು: ಗಳಲ್ಲಿ  ಒಮೆಗಾ –3 ಕೊಬ್ಬಿನಾಮ್ಲಗಳು ಕಾಡು ಬರುತ್ತದೆ. ಈ ಹಣ್ಣುಗಳು ಮೆದುಳನ್ನು ಚುರುಕುಗೊಳಿಸಲು ತುಮಾ ಪ್ರಯೋಜನಕಾರಿಯಾಗಿದ್ದು ಮಕ್ಕಳಿಗೆ ನಿತ್ಯ ಬೆರ್ರಿ ಹಣ್ಣುಗಳನ್ನು ನೀಡುವುದರಿಂದ ಅವರಲ್ಲಿ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. 

ಬೀನ್ಸ್: ಮಕ್ಕಳ ದೈನಂದಿನ ಆಹಾರದಲ್ಲಿ ಪ್ರೋಟೀನ್, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿರುವ ಬೀನ್ಸ್ ಸೇರಿಸುವುದರಿಂದ ಅವರ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. 

ಹಾಲು : ಪರಿಪೂರ್ಣ ಆಹಾರ ಎಂದು ಕರೆಯಲ್ಪಡು ಹಾಲಿನಲ್ಲಿ ಮೆದುಳಿನ ಅಂಗಾಂಶಗಳ ಬೆಳವಣಿಗೆಗೆ ಸಹಕಾರಿಯಾಗಿರುವ ವಿಟಮಿನ್ ಬಿ ಕಂಡು ಬರುತ್ತದೆ. ಹಾಗಾಗಿ, ಮಕ್ಕಳಿಗೆ ನಿತ್ಯಬೆಳಿಗ್ಗೆ ಮತ್ತು ಸಂಜೆ 1 ಗ್ಲಾಸ್ ಹಾಲು ಕುಡಿಸುವುದರಿಂದ ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕರಿ ಆಗಿದೆ. 

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

 

 

 


 

 

Leave a Reply

Your email address will not be published. Required fields are marked *