ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಡ್ರೋನ್ ಬಳಸಿ ಬೀದಿ ನಾಯಿಗಳ ಸಮೀಕ್ಷೆ..!

VayDyn, ಸ್ಟಾರ್ಟ್ ಅಪ್ @ARTPARK IISc ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಬೆಂಗಳೂರು ನಗರದ ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಿರುಗಾಡುವ ಬೀದಿ ನಾಯಿಗಳ ಎಣಿಕೆ ಕಾರ್ಯದ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲು ಪಾಲಿಕೆಯೊಂದಿಗೆ ಕೈಜೋಡಿಸಿದೆ. 

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ 11ನೇ ಜುಲೈ 2023 ರಿಂದ ಬೀದಿ ನಾಯಿಗಳ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದೆ. ಈ ವರ್ಷ ನಾವು ಕ್ಷೇತ್ರ ಸಮೀಕ್ಷಾ ತಂಡಗಳ ಜೊತೆಗೆ, VayDyn, ಸ್ಟಾರ್ಟ್ ಅಪ್ @ARTPARK IISc(ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಬೆಂಗಳೂರು ನಗರದ ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಿರುಗಾಡುವ ಬೀದಿ ನಾಯಿಗಳ ಎಣಿಕೆ ಕಾರ್ಯದ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲು ಪಾಲಿಕೆಯೊಂದಿಗೆ ಕೈಜೋಡಿಸಿದೆ. ಬೀದಿ ನಾಯಿಗಳ ಸಮೀಕ್ಷೆಗೆ ಡ್ರೋನ್ ಗಳನ್ನು ಬಳಸುತ್ತಿರುವುದು ಭಾರತದಲ್ಲಿ ಇದೇ ಮೊದಲನೆಯ ಯೋಜನೆಯಾಗಿದೆ.

ಮೊದಲ ಹಂತದಲ್ಲಿ ಹುಳಿಮಾವು, ಸಾರಕ್ಕಿ, ಸೀಗೇಹಳ್ಳಿ ಮತ್ತು ಎಲೆ ಮಲ್ಲಪ್ಪ ಶೆಟ್ಟಿ ಕೆರೆಗಳನ್ನು ಪರಿಕಲ್ಪನೆಯ ಪುರಾವೆಯಾಗಿ ಆಯ್ಕೆ ಮಾಡಲಾಗಿರುತ್ತದೆ.  ಡ್ರೋನ್ ಗಳು ನಾಯಿಗಳ ಚಿತ್ರಗಳನ್ನು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಬೀದಿ ನಾಯಿಗಳನ್ನು ಗುರುತಿಸಲು ಯಶಸ್ವಿಯಾಗಿದೆ. 

ಡ್ರೋನ್ ಸಮೀಕ್ಷೆಯ ದತ್ತಾಂಶವನ್ನು ಮುಂಬರುವ ದಿನಗಳಲ್ಲಿ ವಿಶ್ಲೇಷಿಸಲಾಗುವುದು ಮತ್ತು ಸಾಂಪ್ರದಾಯಿಕ ಕ್ಷೇತ್ರ ಸಮೀಕ್ಷೆ ತಂಡವು ಸಂಗ್ರಹಿಸಿದ ದತ್ತಾಂಶದೊಂದಿಗೆ(ಡೇಟಾ) ತಾಳೆ ಮಾಡಲಾಗುತ್ತದೆ. ದತ್ತಾಂಶವು ಪರಸ್ಪರ ಸಮಾನತೆ ಹೊಂದಿದ್ದರೆ, ಮುಂಬರುವ ವರ್ಷಗಳಲ್ಲಿ ನಗರದಲ್ಲಿನ ಎಲ್ಲಾ ಸುರಕ್ಷಿತ ಮತ್ತು ಮುಕ್ತ ಹಾರಾಟದ ಸ್ಥಳಗಳನ್ನು ಡ್ರೋನ್ ಗಳೊಂದಿಗೆ ಸಮೀಕ್ಷೆ ಮಾಡಲಾಗುತ್ತದೆ. ಸಾಂಪ್ರದಾಯಿಕ ಕ್ಷೇತ್ರ ಸಮೀಕ್ಷೆ ವಿಧಾನಗಳಿಗೆ ಹೋಲಿಸಿದರೆ ಸಮಯ ಮತ್ತು ವೆಚ್ಚದಲ್ಲಿ ಪರಿಣಾಮಕಾರಿಯಾಗಿ ಉಳಿತಾಯವಾಗಲಿದೆ. ಹಗಲು ಮತ್ತು ರಾತ್ರಿಯ ಸಮಯದಲ್ಲೂ ಕೂಡ ಸಮೀಕ್ಷೆಯನ್ನು ಕೈಗೊಳ್ಳಬಹುದಾಗಿದ್ದು, ಸಮೀಕ್ಷೆಯ ನಿರ್ದಿಷ್ಟತೆಯನ್ನು ಹೆಚ್ಚಿಸುತ್ತದೆ. 
 
ಪೈಲಟ್ ಯೋಜನೆಯ ಸಮಯದಲ್ಲಿ, ತಂಡವು ವಾಯುಪ್ರದೇಶದ ನಿಯಮಗಳು ಮತ್ತು ಸುರಕ್ಷತೆಯ ಕಾಳಜಿಗಳೊಂದಿಗೆ ನಗರ ವಾಯುಪ್ರದೇಶಗಳಲ್ಲಿ ಡ್ರೋನ್ ಗಳನ್ನು ನಿರ್ವಹಿಸುವಲ್ಲಿ ಕೆಲವು ಸವಾಲುಗಳನ್ನು ಗುರುತಿಸಿಲಾಗಿದೆ. ಆದರೆ ಸ್ವಾಯತ್ತ ಡ್ರೋನ್ ಗಳಂತಹ ಹೊಸ ಸ್ವದೇಶಿ ತಂತ್ರಜ್ಞಾನಗಳೊಂದಿಗೆ ಸ್ವತಂತ್ರ ಡ್ರೋನ್ ಗಳನ್ನು ಬಳಸಿಕೊಂಡು ಮತ್ತು ಉತ್ತಮ ಆನ್-ಬೋರ್ಡ್ ಕ್ಯಾಮೆರಾ ಸಿಸ್ಟಮ್ ಗಳನ್ನು ಉಪಯೋಗಿಸಿಕೊಂಡು ಇಂತಹ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ಮಾಡಬಹುದೆಂದು ಆಶಿಸಬಹುದಾಗಿದೆ. ರೋಗದ ಕಣ್ಗಾವಲು, ನಿರ್ಮಾಣ ತಪಾಸಣೆ, ಅತಿಕ್ರಮಣಗಳು, ವಿಪತ್ತು ನಿರ್ವಹಣೆ ಇತ್ಯಾದಿಗಳಂತಹ ವ್ಯಾಪಕ ಶ್ರೇಣಿಯ ಉಪಯೋಗಳಿಗಾಗಿ ನಗರ ವಾಯುಪ್ರದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಡ್ರೋನ್ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಬಳಸಿಕೊಳ್ಳಬಹುದಾಗಿದೆ.

Source : https://zeenews.india.com/kannada/entertainment/stray-dog-survey-in-bangalore-using-drone-146831

Leave a Reply

Your email address will not be published. Required fields are marked *