Benefits of Beetroot : ಬೀಟ್ರೂಟ್ ನೆಲದಡಿಯಲ್ಲಿ ಬೆಳೆಯುವ ತರಕಾರಿ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೀಟ್ರೂಟ್ ಅನ್ನು ಹಲವು ವಿಧಗಳಲ್ಲಿ ಸೇವಿಸಬಹುದು. ಪಲ್ಯ, ಚಟ್ನಿ, ಸಾಂಬಾರ್, ಸಲಾಡ್ ಮತ್ತು ಜ್ಯೂಸ್ ರೂಪದಲ್ಲಿ ಇದನ್ನು ಸೇವಿಸಬಹುದು.
ಕೆಲವರಿಗೆ ಇದು ಬಹಳ ಇಷ್ಟವಾದರೆ ಇನ್ನು ಕೆಲವರು ಸ್ವಲ್ಪ ಸಿಹಿ ಬರುತ್ತದೆ ಎನ್ನುವ ಕಾರಣಕ್ಕೆ ಇಷ್ಟ ಪಡುವುದಿಲ್ಲ. ಆದರೆ, ಅದರ ಪೌಷ್ಟಿಕಾಂಶದ ಮೌಲ್ಯವನ್ನು ಅರಿತುಕೊಂಡರೆ ಖಂಡಿತವಾಗಿಯೂ ನೀವು ಈ ತರಕಾರಿಯನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುತ್ತಿರಿ.
ಬೀಟ್‌ರೂಟ್ ನಲ್ಲಿ ಕಂಡುಬರುವ ಪೋಷಕಾಂಶಗಳು :
ಕ್ಯಾಲ್ಸಿಯಂ, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳು ಸೇರಿದಂತೆ ಅನೇಕ ಪೋಷಕಾಂಶಗಳು ಬೀಟ್‌ರೂಟ್ ನಲ್ಲಿ ಕಂಡುಬರುತ್ತವೆ.10 ಗ್ರಾಂ ಬೀಟ್ ರೂಟ್ ತಿಂದರೆ ಕೇವಲ 43 ಮಿಲಿಗ್ರಾಂ ಕ್ಯಾಲೋರಿ ಮತ್ತು 2 ಗ್ರಾಂ ಕೊಬ್ಬು ದೇಹಕ್ಕೆ ಸಿಗುತ್ತದೆ. ಅಂದರೆ ದೇಹದ ತೂಕ ಹೆಚ್ಚಾಗುವ ಛಾನ್ಸೇ ಇಲ್ಲ. ಇದು ಪ್ರೋಟೀನ್‌ನಲ್ಲಿಯೂ ಸಮೃದ್ಧವಾಗಿದೆ. ಇದು ನಮ್ಮ ಬೆಳವಣಿಗೆಗೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ.
ಬೀಟ್ರೂಟ್ ತಿನ್ನುವುದರಿಂದ ಆಗುವ ಪ್ರಯೋಜನಗಳು:
ಬೀಟ್ರೂಟ್ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಬೀಟ್ರೂಟ್ ಸೇವನೆಯಿಂದ ದೇಹಕ್ಕೆ ಸಿಗುವ ಪ್ರಯೋಜನಗಳನ್ನು ಲೆಕ್ಕಹಾಕುವುದು ಸಾಧ್ಯವಿಲ್ಲ.
-ಬೀಟ್ರೂಟ್ ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ. ಇದು ಅನೇಕ ರೀತಿಯ ಕಾಯಿಲೆಗಳು ಮತ್ತು ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ. ವಿಶೇಷವಾಗಿ ಅದರ ಜ್ಯೂಸ್ ಮತ್ತು ಸಲಾಡ್ ದೇಹಕ್ಕೆ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
– ಪದೇ ಪದೇ ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿರುವವರು ಬೀಟ್‌ರೂಟ್ ಅನ್ನು ತಿನ್ನಬೇಕು. ಅದರಲ್ಲಿರುವ ಫೈಬರ್ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
-ಇದು ನೈಸರ್ಗಿಕ ಸಕ್ಕರೆಯ ಸಮೃದ್ಧ ಮೂಲವಾಗಿದೆ, ಇದು ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಕೆಲಸ ಮಾಡುತ್ತದೆ.
-ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ನೀವು ಬೀಟ್‌ರೂಟ್ ಸಲಾಡ್ ಅಥವಾ ಜ್ಯೂಸ್ ಸೇವಿಸಬೇಕು. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಬಿಪಿ ನಿಯಂತ್ರಣವಾಗುತ್ತದೆ.
-ಆಯಾಸ ಅಥವಾ ದೌರ್ಬಲ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೀಟ್ರೂಟ್ ರಾಮಬಾಣಕ್ಕಿಂತ ಕಡಿಮೆಯಿಲ್ಲ.
-ಬೀಟ್‌ರೂಟ್ ತಿನ್ನುವುದರಿಂದ ರಕ್ತವನ್ನು ಶುದ್ಧೀಕರಿಸಿ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ.
-ಬೀಟ್ರೂಟ್ ಕೂಡ ನಮ್ಮ ಸೌಂದರ್ಯಕ್ಕೆ ತುಂಬಾ ಮುಖ್ಯವಾಗಿದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಮುಖದ ಮೇಲೆ ಅದ್ಭುತವಾದ ಹೊಳಪನ್ನು ನೀಡುತ್ತದೆ.
(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.)