ತಾಜ್ ಮಹಲ್‌ಗೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಕುಟುಂಬ ಸಮೇತ ಭೇಟಿ.

ಲಖನೌ: ಉತ್ತರಪ್ರದೇಶದ ಆಗ್ರಾದಲ್ಲಿರುವ ಐತಿಹಾಸಿಕ ಸ್ಮಾರಕ ತಾಜ್ ಮಹಲ್‌ಗೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಕುಟುಂಬ ಸಮೇತ ಭೇಟಿ ನೀಡಿದ್ದಾರೆ.


ರಿಷಿ ಸುನಕ್ ಅವರು ತಮ್ಮ ಪುತ್ರಿಯರು, ಪತ್ನಿ ಅಕ್ಷತಾ ಹಾಗೂ ಅತ್ತೆ ಸುಧಾ ಮೂರ್ತಿ ಅವರೊಂದಿಗೆ ಶನಿವಾರ ಭೇಟಿ ನೀಡಿ, ಸುಮಾರು ಒಂದೂವರೆ ಗಂಟೆಗಳ ಕಾಲ ಕಳೆದಿದ್ದಾರೆ.

ತಾಜ್‌ಮಹಲ್‌ಗೆ ಭೇಟಿ ಕುರಿತು ರಿಷಿ ಸಂತಸ ವ್ಯಕ್ತಪಡಿಸಿದರು. ಪ್ರೇಕ್ಷಣೀಯ ಸ್ಥಳದ ಬಗ್ಗೆ ಅಭಿಪ್ರಾಯ ತಿಳಿಸುವ ಪುಸ್ತಕದಲ್ಲಿ (visitors book) ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಾಜ್ ಮಹಲ್‌ನಲ್ಲಿರುವ ಭಾರತೀಯ ಪುರಾತತ್ವ ಸಮೀಕ್ಷೆಯ ಹಿರಿಯ ಸಂರಕ್ಷಣಾ ಸಹಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಪತ್ನಿ ಅಕ್ಷತಾ ಅವರೊಂದಿಗೆ ರಿಷಿ ಸುನಕ್

ಭೇಟಿಯ ಸಂದರ್ಭದಲ್ಲಿ ರಿಷಿ ಸುನಕ್ ಮತ್ತು ಅವರ ಕುಟುಂಬಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿತ್ತು ಎಂದು ತಾಜ್ ಸೆಕ್ಯುರಿಟಿಯ ಎಸಿಪಿ ಅರೀಬ್ ಅಹ್ಮದ್ ಹೇಳಿದ್ದಾರೆ.

Leave a Reply

Your email address will not be published. Required fields are marked *