ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ನಿಧನ

ಅಕಾಲಿದಳದ ಮುಖ್ಯಸ್ಥ ಹಾಗೂ ಐದು ಬಾರಿ ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದ ಪ್ರಕಾಶ್ ಸಿಂಗ್ ಬಾದಲ್ ಅವರು ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಅವರ ಪುತ್ರ ಹಾಗೂ ಪಕ್ಷದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರ ಆಪ್ತ ಸಹಾಯಕರು ಸಾವನ್ನು ಖಚಿತಪಡಿಸಿದ್ದಾರೆ.ಬಾದಲ್ ಅವರು ಇಂದು ರಾತ್ರಿ 8 ಗಂಟೆ ಸುಮಾರಿಗೆ ನಿಧನರಾದರು” ಎಂದು ಆಸ್ಪತ್ರೆಯ ನಿರ್ದೇಶಕ ಅಭಿಜೀತ್ ಸಿಂಗ್ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.

ಅವರು ತಮ್ಮ 43 ನೇ ವಯಸ್ಸಿಗೆ ಮುಖ್ಯಮಂತ್ರಿಯಾಗಿ ಪಂಜಾಬ್ ರಾಜ್ಯದಲ್ಲಿ ಅಧಿಕಾರ ನಡೆಸಿದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಪ್ರಕಾಶ್ ಸಿಂಗ್ ಬಾದಲ್ ಅವರು ಪಂಜಾಬ್‌ನ ಅಬುಲ್ ಖುರಾನಾದಲ್ಲಿ ಜನಿಸಿದರು. ಲಾಹೋರ್‌ನ ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಓದಿದರು.ಅವರು 30 ವರ್ಷ ವಯಸ್ಸಿನವರಾಗಿದ್ದಾಗ 1957 ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಮೊದಲು ಅವರು ರಾಜಕೀಯ ಪ್ರವೇಶಿದ್ದರು.

ಪ್ರಕಾಶ್ ಸಿಂಗ್ ಬಾದಲ್ ರವರ ನಿಧನದಿಂದ ತುಂಬಾ ದುಃಖವಾಗಿದೆ. ಅವರು ಭಾರತೀಯ ರಾಜಕೀಯದ ಅಗಾಧ ವ್ಯಕ್ತಿಯಾಗಿದ್ದರು ಮತ್ತು ನಮ್ಮ ರಾಷ್ಟ್ರಕ್ಕೆ ಮಹತ್ತರವಾದ ಕೊಡುಗೆ ನೀಡಿದ ಗಮನಾರ್ಹ ರಾಜನೀತಿಜ್ಞರಾಗಿದ್ದರು. ಅವರು ಪಂಜಾಬ್‌ನ ಪ್ರಗತಿಗಾಗಿ ಅಪಾರವಾಗಿ ಶ್ರಮಿಸಿದರು ಎಂದು ಪ್ರದಾನಿ ಮೋದಿ ಅವರು ಹಿರಿಯ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

The post ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ನಿಧನ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/WBtS3d7
via IFTTT

Leave a Reply

Your email address will not be published. Required fields are marked *