ಚಿತ್ರದುರ್ಗ| ಸೆ.2 ರಂದು ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 30 : ಬಸವೇಶ್ವರ ಪುನರ್‌ಜ್ಯೋತಿ ಐ ಬ್ಯಾಂಕ್, ಚಿತ್ರದುರ್ಗ ರೋಟರಿ ಕ್ಲಬ್, ಚಿತ್ರದುರ್ಗ ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರ, ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ 39 ನೇ ರಾಷ್ಟ್ರೀಯ ನೇತ್ರದಾನದ ಪಾಕ್ಷಿಕದ ಅಂಗವಾಗಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಸಂಚಾಲಕರಾದ ರೋ. ಎಸ್. ವೀರೇಶ್ ತಿಳಿಸಿದ್ದಾರೆ.

ಶಿಬಿರವು ಸೆ.2 ನೇ ಸೋಮವಾರ ಬೆಳಗ್ಗೆ 10.30 ರಿಂದ 4.00 ಗಂಟೆಯವರಿಗೆ ನಗರದ ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರದಲ್ಲಿ ಶಿಬಿರ ನಡೆಯಲಿದ್ದು ಇದರಲ್ಲಿ ನುರಿತ ನೇತ್ರ ತಜ್ಞರುಗಳಿಂದ ತಪಾಸಣೆ ನಡೆಸಿ ಅವಶ್ಯಕತೆ ಇರುವವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಅರ್ಹ ಫಲಾನುಭವಿಗಳಿಗೆ  ಐ ಲೆನ್ಸ್ಗಳನ್ನು ಅಳವಡಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುಲು ಶಿಬಿರದ ಸಂಚಾಲಕರಾದ ರೋ ಎಸ್. ವೀರೇಶ್ ವಿನಂತಿಸುತ್ತಾರೆ.

ರೋಗಿಗಳು ತಲೆಸ್ನಾನ ಮಾಡಿ, ಗಂಡಸರು ಮುಖ ಕ್ಷೌರ ಮಾಡಿಸಿಕೊಂಡು ಶುಭ್ರವಾದ ಬಟ್ಟೆ ಧರಿಸಿ ಬರುವುದು.ರೋಗಿಗಳು ಒಬ್ಬಸಹಾಯಕರನ್ನು ಜೊತೆಗೆ ಕರೆತರುವುದು ವೈದ್ಯರು ನೀಡುವ ಸಲಹೆ ಮತ್ತು ಸೂಚನೆಗಳನ್ನು ತಪ್ಪದೆ ಪಾಲಿಸುವುದು ಅಗತ್ಯವಾಗಿದೆ. ಕ್ಯಾಂಪಿಗೆ ಬರುವ ರೋಗಿಗಳು ಯಾವುದಾದರು ಒಂದು ಗುರುತಿನ ಚೀಟಿಯ ಜೆರಾಕ್ಸ್ ಕಡ್ಡಾಯವಾಗಿ ತರಬೇಕಿದೆ.

ಹೆಚ್ಚಿನ ಮಾಹಿತಿಗಾಗಿ ಬಸವೇಶ್ವರ ಪುನರ್‌ಜ್ಯೋತಿ ಐ ಬ್ಯಾಂಕ್‌ನ ಅಧ್ಯಕ್ಷರಾದ ಪಿ.ಬಿ. ಶಿವರಾಂ, ಶಿಬಿರದ ಸಂಚಾಲಕರಾದ ಎಸ್. ವೀರೇಶ್ ಕಾರ್ಯದರ್ಶಿಗಳಾದ ಟಿ. ವೀರಭದ್ರಸ್ವಾಮಿ, ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ ಜಿ.ಎನ್. ವೀರಣ್ಣ,ಕಾರ್ಯದರ್ಶಿ ರೋ ಶಿವಣ್ಣ ಕುರುಬರಹಳ್ಳಿ ಅಥವಾ 9448144871, 9448083139, 9945061637 , 8497049144, 9845680919  ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *