ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾ ಪಡೆವತಿಯಿಂದ ಉಚಿತ ಆರೋಗ್ಯ ತಪಾಸಣಾ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 19: ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾ ಪಡೆವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ, 10 ಮತ್ತು 12ನೇ ತರಗತಿಗಳಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ಆಗಸ್ಟ್ 06 ರ ಮಂಗಳವಾರ ನಗರದ ಮದಕರಿ ಸರ್ಕಲ್‍ನ ಸಂಘದ ಕಛೇರಿ ಮುಂಭಾಗದಲ್ಲಿ ಬೆಳಗ್ಗೆ 11 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಶಿಬಿರದಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ನುರಿತ ತಜ್ಞ ವೈದ್ಯರುಗಳಿಂದ ತಪಾಸಣೆ ಮಾಡಲಾಗುವುದು, ಇಲ್ಲಿ ನೇತ್ರ ತಪಾಸಣೆ, ಮೂಳೆ ಕೀಲು ತಪಾಸಣೆ, ಕಿವಿ, ಮೂಗು, ಗಂಟಲು ತಪಾಸಣೆ, ರಕ್ತ ಗುಂಪು ಪರೀಕ್ಷೆ, ಮಧುಮೇಹ & ಬಿಪಿ ತಪಾಸಣೆ, ಹೃದಯ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ, ಸಾಮಾನ್ಯ ರೋಗಗಳ ತಪಾಸಣೆ ನಡೆಯಲಿದೆ. ಇದರಲ್ಲಿ ಜಿಲ್ಲಾ ಸರ್ಜನ್ ಡಾ| ಎಸ್.ಪಿ. ರವೀಂದ್ರ, ನೇತ್ರ ತಜ್ಞರಾದ : ಡಾ| ಪ್ರದೀಪ್ & ಡಾ|| ಶಿಲ್ಪ, ಮೂಳೆ ತಜ್ಞರಾದ : ಡಾ| ಹನುಮಂತರಾವ್ ಡಾ|| ನಾಗಭೂಷಣ್,ಇ.ಎನ್.ಟಿ. ತಜ್ಞ : ಡಾ| ಮಲ್ಲಿಕಾರ್ಜುನ್ ರಕ್ತ ಗುಂಪು, ಸಕ್ಕರೆ ಖಾಯಿಲೆ ಹಾಗೂ ರಕ್ತದೊತ್ತಡ ತಜ್ಞರು : ಡಾ. ರೂಪ,ಹೃದಯ ರೋಗ ತಜ್ಞರು: ಡಾ. ರುಶೀಬ್‍ವೀರ್ ಮಕ್ಕಳ ತಜ್ಞರು: ಡಾ ಗುರುರಾಜ್ ಜನರಲ್ ಮೆಡಿಸನ್ : ಡಾ ಪ್ರಜ್ವಲ್ & ಡಾ.ಸಂಕೇತ್ ಭಾಗವಹಿಸಿ ತಪಾಸಣೆಯನ್ನು ನಡೆಸಲಿದ್ದಾರೆ.

ಈ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯುನಲ್ಲಿ ಶೇ.75ಕ್ಕಿಂತ ಹೆಚ್ಚಿಗೆ ಅಂಕಗಳನ್ನು ಪಡೆದ ಕಟ್ಟಡ ಮತ್ತು ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರ ಮಕ್ಕಳು ಅರ್ಜಿಯನ್ನು ಜು.30ರೊಳಗಾಗಿ ನಗರದ ಮದಕರಿ ವೃತ್ತದಲ್ಲಿನ ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾ ಪಡೆಯ ಕಚೇರಿಯನ್ನು ಬೆಳ್ಳಿಗೆ 10 ರಿಂದ ಸಂಜೆ 5ರವರೆಗೆ ತಲುಪಿಸಲು ಕೋರಲಾಗಿದೆ.  ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಕಾರ್ಮಿಕ ಸಚಿವರಾದ ಅನಿಲ್‍ಲಾಡ್, ದಿನೇಶ್ ಗುಂಡುರಾವ್ ಡಿ.ಸುಧಾಕರ್ ಶಾಸಕ ವಿರೇಂದ್ರ ಭಾಗವಹಿಸಲಿದ್ದಾರೆ.

ಗೋಷ್ಟಿಯಲ್ಲಿ  ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜನ್, ಖಂಜಾಚಿ ಚಿಕ್ಕಾಲಘಟ್ಟದ ರಂಗಸ್ವಾಮಿ, ಸಹಾ ಕಾರ್ಯದರ್ಶಿ ನಾಗರಾಜ್, ನಿರ್ದೆಶಕರಾದ ಸೋಮಶೇಖರ್, ರವಿಕುಮಾರ್, ಷಾಹಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ತನುಜ ಭಾಗವಹಿಸಿದ್ದರು.

Leave a Reply

Your email address will not be published. Required fields are marked *