ಚಿತ್ರದುರ್ಗದಲ್ಲಿ ನಿವೃತ್ತ ನೌಕರರಿಗಾಗಿ ಉಚಿತ ಜೀವನ ಪ್ರಮಾಣ ಪತ್ರ ಅಭಿಯಾನ – ನವೆಂಬರ್ 4ರಂದು ಪ್ರಧಾನ ಅಂಚೆ ಕಚೇರಿಯಲ್ಲಿ.

ಚಿತ್ರದುರ್ಗ ನ. 02

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಕರ್ನಾಟಕ ಅಂಚೆ ಮತ್ತು ದೂರಸಂಪರ್ಕ ನಿವೃತ್ತ ನೌಕರರ ಸಂಘ  ಬೆಂಗಳೂರು ಇವರಿಂದ ಹೊಳಲ್ಕೆರೆ ರಸ್ತೆಯಲ್ಲಿನ ಚಿತ್ರದುರ್ಗ ಪ್ರಧಾನ ಅಂಚೆ ಕಚೇರಿಯಲ್ಲಿ ನವಂಬರ್ 4ರ ಮಂಗಳವಾರ  ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕೇಂದ್ರ ರಾಜ್ಯ ಹಾಗೂ ಸಾರ್ವಜನಿಕ ಕ್ಷೇತ್ರದ ನಿವೃತ್ತ ನೌಕರರಿಗೆ, ಪಿಂಚಣಿಯನ್ನು ಮುಂದುವರೆಸುವ ಸಲುವಾಗಿ ಉಚಿತವಾಗಿ ಜೀವನ ಪ್ರಮಾಣ ಪತ್ರ ಅಭಿಯಾನವನ್ನು (Digital Life Certificate Company) ಏರ್ಪಡಿಸಲಾಗಿದೆ. 


ಈ ಅಭಿಯಾನಕ್ಕೆ ನಿವೃತ್ತ ಉಪ ಅಂಚೆ ಪಾಲಕರು (ಲೆಕ್ಕ) ದಾವಣಗೆರೆ ಭಾರತೀಯ ಅಂಚೆ ಇಲಾಖೆ, ಸ್ವಯಂಸೇವಕರು ಸಂಘದ ಸದಸ್ಯರು ಹಾಗೂ ಕೊ ಆರ್ಡಿನೇಟರಾದ ಬಿ. ಟಿ.ಚಂದ್ರಶೇಖರ್, ನಿವೃತ್ತ ಉಪ ದಾಖಲಾತಿ ಅಧಿಕಾರಿ ದಾವಣಗೆರೆ ರೈಲ್ವೆ ಮೇಲ್ ಸೇವೆ ಭಾರತೀಯ ಅಂಚೆ ಇಲಾಖೆ ಸಂಘದ ಸದಸ್ಯರಾದ ಎನ್ ಪ್ರಕಾಶ್, ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ದಾವಣಗೆರೆಯ ಭಾರತೀಯ ಅಂಚೆ ಇಲಾಖೆ ತೋಟಪ್ಪ, ನಿವೃತ್ತ ಅಂಚೆ ಲೆಕ್ಕಾಧಿಕಾರಿ ಪಿ.ಎಂ.ಕೊಟ್ರಬಸಪ್ಪ ಜೀವನ ಪ್ರಮಾಣ ಪತ್ರ ಅಭಿಯಾನದಲ್ಲಿ ಭಾಗವಹಿಸುವರು. 


ಚಿತ್ರದುರ್ಗ ಎಲ್ಲಾ ಕೇಂದ್ರ ಸರ್ಕಾರದ ನಿವೃತ್ತ ನೌಕರರು ರಾಜ್ಯ ಸರ್ಕಾರದ ನಿವೃತ್ತ ನೌಕರರು ಹಾಗೂ ಕೇಂದ್ರ ಸಾರ್ವಜನಿಕ ಸಂಸ್ಥೆಯ ನಿವೃತ್ತ ನೌಕರರು ಅಭಿಯಾನದ ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂದು ವಿನಂತಿಸಿಕೊಳ್ಳಲಾಗಿದೆ.


ಜೀವನ ಪ್ರಮಾಣ ಪತ್ರದ ಅಭಿಯಾನಕ್ಕೆ ಬರುವ ನಿವೃತ್ತ ನೌಕರರು ತಮ್ಮ ಪಿಂಚಣಿ ಪುಸ್ತಕ, ಪಿಂಚಣಿ ಜಮಾ ಆಗುತ್ತಿರುವ ಬ್ಯಾಂಕ್ ಅಥವಾ ಅಂಚೆ ಇಲಾಖೆಯ ಉಳಿತಾಯ ಖಾತೆ ಪಾಸ್ ಬುಕ್, ನಿಮ್ಮ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡಿಗೆ ಜೋಡಣೆಯಾಗಿರುವ ನಿಮ್ಮ ಮೊಬೈಲ್ ದಾಖಲೆಗಳನ್ನು ಕಡ್ಡಾಯವಾಗಿ ತರತಕ್ಕದ್ದು. 
ಹೊಳಲ್ಕೆರೆ ರಸ್ತೆಯಲ್ಲಿನ ಚಿತ್ರದುರ್ಗದ ಪ್ರಧಾನ ಅಂಚೆ ಕಚೇರಿಯಲ್ಲಿ ನ.4 ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ಜೀವನ ಪ್ರಮಾಣ ಪತ್ರದ ಅಭಿಯಾನ ನಡೆಸುವವರು.

Views: 75

Leave a Reply

Your email address will not be published. Required fields are marked *