ಚಿತ್ರದುರ್ಗ, ಅ. 24
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸಾಧಕರ ಸಾಧನೆಯ ಹಾದಿ ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ. ಸಾಧನೆಯ ಹಾದಿಗೆ ಬೇಕಾಗಿರುವುದು ಕಠಿಣ ಪರಿಶ್ರಮ, ನಿರಂತರ ಪ್ರಯತ್ನ ಸಮಾಜದಲ್ಲಿರುವ ಸಾಧಕರನ್ನು ಗುರುತಿಸಿ, ಅವರಿಗೆ ಬೆನ್ನು ತಟ್ಟುವುದರ ಮೂಲಕ ಗೌರವಿಸಬೇಕಿದೆ ಎಂದು ಡಾ. ಬಸವಕುಮಾರ ಮಹಾಸ್ವಾಮೀಜಿ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಬಾಪೂಜಿ ಸಮೂಹ ಸಂಸ್ಥೆಗಳ ಆವರಣದಲ್ಲಿ ಇತ್ತೀಚೆಗೆ ನಡೆದ ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಸಂಸ್ಥೆ, ವಿಜಯ ಹಾಗೂ-ವಿಶ್ವ ಕನ್ನಡ ಕಲಾ ಸಂಸ್ಥೆಯ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಧನೋತ್ಸವ ಸಾಧಕರ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿ ಸಾಧನೋತ್ಸವ ಕಾರ್ಯಕ್ರಮದಲ್ಲಿರುವ ಸಾಧಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸೈದಿದ್ದಾರೆ. ಇವರ ಸಾಧನೆಗೆ ಗೌರವ ವನ್ನು ಸಲ್ಲಿಸುತ್ತಿರುವ ಪ್ರಥಮ್ ಶಿಕ್ಷಣ ಸಂಸ್ಥೆ ವಿಜಯ ಕಿರಣ ಪರಿಸರ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಶೀಗಳು ಅಭಿಮತ ವ್ಯಕ್ತಪಡಿಸಿದರು.
ಪ್ರತಿಯೊಬ್ಬರಿಗೂ ಗೆಲ್ಲುವ ಇಚ್ಛೆ ಇರುತ್ತದೆ. ಆದರೆ ಬಹಳ ಕಡಿಮೆ ಜನರಿಗೆ ಸಿದ್ಧರಾಗುವ ಇಚ್ಛೆ ಇರುತ್ತದೆ. ಜೀವನದಲ್ಲಿ ಕಠಿಣ ಪರಿಶ್ರಮಕ್ಕೆ ಒಂದೇ ದಾರಿ ಇರುತ್ತದೆ. ಅದು ಹೆಚ್ಚಾಗಿ ಯಶಸ್ಸಿನ ಹಾದಿಗೆ ಕಾರಣವಾಗುತ್ತದೆ. ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಅವರಿಗೆ ಪ್ರೋತ್ಸಾಹಿಸುವುದರ ಮೂಲಕ ಅವರ ಸಾಧನೆಗೆ ಸ್ಫೂರ್ತಿಯಾಗೋಣ. ಸಾಧಕರ ಸಾಧನೆಗಳೇ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂದು ಡಾ. ಬಸವಕುಮಾರ ಮಹಾಸ್ವಾಮೀಜಿ ಹೇಳಿದರು.
ಬಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ವೀರೇಶ್ ಮಾತನಾಡಿ, ಸಾಧನೆಗೈದ ಸಾಧಕರೆ ನಮ್ಮ ಅಸ್ತಿ ಸಮಾಜದಲ್ಲಿನ ಸಾಧಕರನ್ನು ಗುರುತಿಸಿ ಅವರಿಗೆ ಬೆನ್ನು ತಟ್ಟುವುದರ ಮೂಲಕ ಅವರ ಸಾಧನೆಗೆ ಕಿವಿ ಯಾಗೋಣ. ಇಂತಹ ಸಾಧಕರ ಸಾಧನೆ ಇಂದಿನ ಯುವ ಜನರಿಗೆ ಆದರ್ಶವಾಗಲಿ. ಡಾ.ಬಸವಕುಮಾರ ಮಹಾಸ್ವಾಮಿ ಕಾರ್ಯಕ್ರಮಕ್ಕೆ ಆಗಮಿಸಿ, ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಾಧಕರ ಪುಣ್ಯ ಸಾಧಕರ ಸಾಧನೆ ಮನೆ ಮಾತಾಗಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಶೈಲಜಾ ಬಾಬು ಮಾತ್ರನಾಡಿ, ಸಾಧಕರಿಗೆ ಭಗವಂತನು ಇನ್ನಷ್ಟು ಸ್ಫೂರ್ತಿ ನೀಡಿ, ದೇಶಕ್ಕೆ ಕೀರ್ತಿ ತರುವಂತಾಗಲಿ, ಪ್ರತಿಯೊ ಬ್ಬರೂ ಸಮಾಜದ ಋಣವನ್ನು ತೀರಿ ಸುವ ಜವಾಬ್ದಾರಿ ಹೊಂದಿದ್ದು, ಈ ಮೂಲಕ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು. ಇಂತಹ ಸಾಧನೆ ಮಾಡಿದ ಸಾಧಕರು ಇಂದಿನ ಯುವ ಜನತೆಗೆ ಆದರ್ಶವಾಗಲಿ, ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆ ಸಾಧಕರಿಂದ ಆಗಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಡಾ. ಮಹೇಶ್ ಕಡ್ಲೆ ಗುದ್ದು, ಸಾಧನೆ ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ. ಸಾಧನೆ ಮಾಡದೇ ಸತ್ತರೆ ಸಾವಿಗೂ ಅವಮಾನ ಎಂಬ ನುಡಿಯಂತೆ ಪ್ರತಿಯೊಬ್ಬರೂ ಜೀವನದಲ್ಲಿ ಸಾಧನೆ ಮಾಡಬೇಕು. ಇಂತಹ ಸಾಧನೆಗೈದ ಸಾಧಕರಿಗೆ ಸಾಧನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಡಾ. ನವೀನ್ ಬಿ ಸಜ್ಜನ್, ಚುಟುಕು ಸಾಹಿತಿ ವಿನಾಯಕ, ವಿಜಯ ಕಿರಣ ಸಂಸ್ಥೆಯ ಕೊಲ್ಲೂರಪ್ಪ, ಪ್ರಥಮ್ ಸಂಸ್ಥೆಯ ನಂಜುಂಡೇಶ್ವರ, ಡಾ. ನವೀನ್ ಮಸ್ಕಲ್, ಡಾ. ಬಸವರಾಜ್ ಹರ್ತಿ ಅವರಿಗೆ ಅಭಿನಂದನೆಗಳು ಎಂದರು.
ಕಾರ್ಯಕ್ರಮದಲ್ಲಿ 70 ಕ್ಕಿಂತ ಹೆಚ್ಚಿನ ಸಾಧಕರಿಗೆ ಕರುನಾಡ ಶಿಕ್ಷಣ ರತ್ನ, ಸಮಾಜ ರತ್ನ, ಸೇವಾ ರತ್ನ ವೈದ್ಯಕೀಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರವೀಶ್, ಶಫಿವುಲ್ಲಾ, ಜ್ಞಾನದೇವ್, ಹಾಸ್ಯ ಸಾಹಿತಿ ಜಗನ್ನಾಥ, ವೀರೇಶ್ ಪಿಲ್ಲಹಳ್ಳಿ, ಪ್ರವೀಣ್ ಬೆಳಗೆರೆ, ಶಿಕ್ಷಕ ರಾದ ರಾಜೇಶ್, ಶ್ರೀನಿವಾಸ್, ಜಯಣ್ಣ, ಕೀರ್ತಿ ಕುಮಾರ್, ಡಾ. ಲೋಲಾಕ್ರಮ, ಅನಿತಾ ವಿನಯ್, ಪೂರ್ಣಿಮಾ, ಬಿ.ವಿ.ನಾಥ್, ಮೃತ್ಯುಂಜಯಸ್ವಾಮಿ ಇನ್ನಿತರರು ಹಾಜರಿದ್ದರು.
Views: 9