ತೂಕ ಇಳಿಕೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣದವರೆಗೆ ಸಹಾಯಕ ನೆನೆಸಿಟ್ಟ ಡ್ರೈ ಫ್ರೂಟ್ಸ್.

ನೆನೆಸಿಟ್ಟ ಒಣ ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ಫೈಬರ್, ಖನಿಜಗಳು ಮತ್ತು ಜೀವಸತ್ವಗಳು ಕಂಡು ಬರುತ್ತವೆ. ಇದನ್ನು ತಿನ್ನುವುದರಿಂದ ದೇಹದ ದೌರ್ಬಲ್ಯ ಕಡಿಮೆಯಾಗುವುದರ ಜೊತೆಗೆ ಇದು ನಮ್ಮನ್ನು ಹಲವು ಕಾಯಿಲೆಗಳಿಂದಲೂ ದೂರ ಉಳಿಯುವಂತೆ ಮಾಡಬಲ್ಲದು. ಅಂತಹ ಡ್ರೈ ಫ್ರೂಟ್ಸ್ ಗಳೆಂದರೆ… 

ನೆನೆಸಿಟ್ಟ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. 

ಒಣದ್ರಾಕ್ಷಿಯಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಇತರ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೆನೆಸಿಡುವುದರಿಂದ ಇದರಲ್ಲಿರುವ  ಪೌಷ್ಟಿಕಾಂಶದ ಮೌಲ್ಯ ಹೆಚ್ಚಾಗುತ್ತದೆ. ಮಾತ್ರವಲ್ಲ, ನಿತ್ಯ ನೆನೆಸಿಟ್ಟ ಒಣದ್ರಾಕ್ಷಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಇದು ತೂಕನಷ್ಟಕ್ಕೂ ಪ್ರಯೋಜನಕಾರಿ ಆಗಿದೆ. 

  ವಾಲ್ನಟ್ ಅನ್ನು ಕನಿಷ್ಠ 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಬಳಿಕ ತಿನ್ನುವುದರಿಂದ ಇದರಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳ ಪ್ರಮಾಣವು ದುಪ್ಪಟ್ಟಾಗುತ್ತದೆ. ಪ್ರತಿದಿನ ನೆನೆಸಿಟ್ಟ ವಾಲ್ನಟ್ ತಿನ್ನುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 

ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೆನೆಸಿಟ್ಟ ಪಿಸ್ತಾವನ್ನು ತಿನ್ನುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

ಒಣ ಅಂಜೂರದ ಹಣ್ಣನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಇದು ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ. ಅಷ್ಟೇ ಅಲ್ಲ, ಇದು ಹೃದಯದ ಆರೋಗ್ಯಕ್ಕೂ ಕೊಡುಗೆಯನ್ನು ನೀಡುತ್ತದೆ.   

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.  

Source : https://zeenews.india.com/kannada/photo-gallery/from-weight-loss-to-cholesterol-control-soaked-dry-fruits-benefits-209997/%E0%B2%B8%E0%B3%82%E0%B2%9A%E0%B2%A8%E0%B3%86-209998

Leave a Reply

Your email address will not be published. Required fields are marked *