Ganesh Chaturthi 2023: ಗಣೇಶ ಚತುರ್ಥಿ ಯಾವಾಗ? ಶುಭ ಮುಹೂರ್ತ, ಆಚರಣೆ ಇಲ್ಲಿದೆ.

ಗಣೇಶ ಚತುರ್ಥಿಯು ನಾಲ್ಕು ಮುಖ್ಯ ಆಚರಣೆಗಳನ್ನು ಹೊಂದಿದೆ. ಅದೆನೆಂದರೆ ಪ್ರತಿಷ್ಠಾಪನೆ, ಶೋಡಶೋಪಚಾರ, ಉತ್ತರಪೂಜೆ ಮತ್ತು ವಿಸರ್ಜನೆ ಪೂಜೆ. ಆ ದಿನ ಜನರು ತಮ್ಮ ಮನೆಗಳನ್ನು ಹೂವು ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ, ಜೊತೆಗೆ ಗಣೇಶನ ಮಣ್ಣಿನ ವಿಗ್ರಹಗಳನ್ನು ತಂದು ಪೂಜೆ ಮಾಡುತ್ತಾರೆ. ಚತುರ್ಥಿಯ ದಿನದಂದು ಎಲ್ಲ ಕಡೆಗಳಲ್ಲಿಯೂ ವಿವಿಧ ಭಂಗಿಯ ಗಣಪನನ್ನು ಕೂರಿಸಿ, ನೈವೇದ್ಯ ಅರ್ಪಿಸಿ, ಗಣಪನಿಗೆ ಅದ್ದೂರಿ ಸ್ವಾಗತ ಕೋರುತ್ತಾರೆ.

ಗಣೇಶ ಚತುರ್ಥಿ (Ganesh Chaturthi)ಅಥವಾ ಗಣೇಶೋತ್ಸವ ಎಂದೂ ಕರೆಯಲ್ಪಡುವ ಗಣೇಶ ಚತುರ್ಥಿ, ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟಕ್ಕೆ ಹೆಸರುವಾಸಿಯಾದ ಗಣೇಶ ದೇವರ ಜನನವನ್ನು ಆಚರಿಸುವ ಪವಿತ್ರ ಹಿಂದೂ ಹಬ್ಬವಾಗಿದೆ. ಗಣೇಶ ಚತುರ್ಥಿ ಭಾರತದಲ್ಲಿ, ಅದರಲ್ಲಿಯೂ ವಿಶೇಷವಾಗಿ ಕರ್ನಾಟಕ, ಮಹಾರಾಷ್ಟ್ರ, ಮತ್ತು ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಂತಹ ಇತರ ರಾಜ್ಯಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಗಣೇಶನನ್ನು ಎಲ್ಲಾ ದೇವಾ ದೇವತೆಗಳಿಗಿಂತ ಮೊದಲು ಪೂಜಿಸಲಾಗುತ್ತದೆ.

ಗಣೇಶ ಚತುರ್ಥಿ 2023 ಸಮಯ: ಶುಭ ಮುಹೂರ್ತ ಮತ್ತು ತಿಥಿ

ದೃಕ್ ಪಂಚಾಂಗದ ಪ್ರಕಾರ, ಚತುರ್ಥಿ ತಿಥಿಯಂದು ಗಣೇಶನನ್ನು ಮನೆಗೆ ಸ್ವಾಗತಿಸಲು ಶುಭ ಸಮಯ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 12:39 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 19 ರಂದು ಮಧ್ಯಾಹ್ನ 1:43 ಕ್ಕೆ ಕೊನೆಗೊಳ್ಳುತ್ತದೆ. 10 ದಿನಗಳ ಗಣೇಶ ಉತ್ಸವವು ಸೆಪ್ಟೆಂಬರ್ 28 ರಂದು ಗಣಪತಿ ವಿಸರ್ಜನೆಯೊಂದಿಗೆ ಕೊನೆಗೊಳ್ಳಲಿದೆ.

ಗಣೇಶ ಚತುರ್ಥಿ ಆಚರಣೆಗಳೇನು?

ನಂಬಿಕೆಯ ಪ್ರಕಾರ, ಗಣೇಶನನ್ನು ವಿಘ್ನಹರ್ತ ಅಥವಾ ಎಲ್ಲಾ ಅಡೆತಡೆಗಳನ್ನು ನಿವಾರಿಸುವವನು ಎಂದೂ ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಅವನಿಗೆ ಹೆಚ್ಚಿನ ಮಹತ್ವವಿದೆ, ಅಲ್ಲಿ ಬಹುತೇಕ ಎಲ್ಲಾ ಆಚರಣೆಗಳು ಅವನ ಆರಾಧನೆಯೊಂದಿಗೆ ಪ್ರಾರಂಭವಾಗುತ್ತವೆ. ಈ ಹಬ್ಬದ ಸಲುವಾಗಿ ತಿಂಗಳುಗಳ ಮುಂಚಿತವಾಗಿಯೇ ಗಣೇಶನ ವಿಗ್ರಹಗಳ ತಯಾರಿಯೂ ಪ್ರಾರಂಭವಾಗುತ್ತವೆ.

ಗಣೇಶ ಚತುರ್ಥಿಯು ನಾಲ್ಕು ಮುಖ್ಯ ಆಚರಣೆಗಳನ್ನು ಹೊಂದಿದೆ. ಅದೆನೆಂದರೆ ಪ್ರತಿಷ್ಠಾಪನೆ, ಶೋಡಶೋಪಚಾರ, ಉತ್ತರಪೂಜೆ ಮತ್ತು ವಿಸರ್ಜನೆ ಪೂಜೆ. ಆ ದಿನ ಜನರು ತಮ್ಮ ಮನೆಗಳನ್ನು ಹೂವು ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ, ಜೊತೆಗೆ ಗಣೇಶನ ಮಣ್ಣಿನ ವಿಗ್ರಹಗಳನ್ನು ತಂದು ಪೂಜೆ ಮಾಡುತ್ತಾರೆ. ಚತುರ್ಥಿಯ ದಿನದಂದು ಎಲ್ಲ ಕಡೆಗಳಲ್ಲಿಯೂ ವಿವಿಧ ಭಂಗಿಯ ಗಣಪನನ್ನು ಕೂರಿಸಿ, ನೈವೇದ್ಯ ಅರ್ಪಿಸಿ, ಗಣಪನಿಗೆ ಅದ್ದೂರಿ ಸ್ವಾಗತ ಕೋರುತ್ತಾರೆ.

ಪ್ರಾಣಪ್ರತಿಷ್ಠೆ ಅಥವಾ ಪ್ರತಿಷ್ಠಾಪನಾ ಆಚರಣೆಯನ್ನು ಪುರೋಹಿತರು ಮಂತ್ರವನ್ನು ಪಠಿಸುವ ಮೂಲಕ ಗಣೇಶನನ್ನು ಮನೆಯಲ್ಲಿ ಕೂರಿಸಲಾಗುತ್ತದೆ. ಅದರ ನಂತರ, 16 ವಿಭಿನ್ನ ಆಚರಣೆಗಳನ್ನು ನಡೆಸಲಾಗುತ್ತದೆ. ಇದನ್ನು ಶೋಡಶೋಪಚಾರ ಪೂಜೆ ಎಂದು ಕರೆಯಲಾಗುತ್ತದೆ. ಗಣೇಶನ ನೆಚ್ಚಿನ ಪ್ರಸಾದ ಎಂದು ಹೇಳಲಾಗುವ ಮೋದಕವನ್ನು ಮಾಡಿ ನೈವೇದ್ಯ ಅರ್ಪಿಸಿ ಪೂಜೆ ಮಾಡಲಾಗುತ್ತದೆ. ಜೊತೆಗೆ ಗಣೇಶನಿಗೆ ಇತರ ಸಿಹಿತಿಂಡಿಗಳು ಮತ್ತು ಹಣ್ಣುಗಳನ್ನೂ ಅರ್ಪಿಸಲಾಗುತ್ತದೆ. ಜನರು ಧಾರ್ಮಿಕ ಭಕ್ತಿಗೀತೆಗಳನ್ನು ಹಾಡುವ ಮೂಲಕ, ನೃತ್ಯ ಮಾಡುತ್ತಾರೆ ಮತ್ತು ರುಚಿಕರವಾದ ಊಟವನ್ನು ತಯಾರಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಗಣೇಶ ಚತುರ್ಥಿಯ ಮೂರನೇ ಮುಖ್ಯ ಆಚರಣೆ ಉತ್ತರಪೂಜೆ ಇದು ಗಣೇಶನಿಗೆ ವಿದಾಯ ಹೇಳುವ ಕ್ರಮವಾಗಿದೆ. ಇನ್ನು ಗಣೇಶ ಚತುರ್ಥಿಯ 10 ನೇ ಮತ್ತು ಕೊನೆಯ ದಿನದಂದು, ಗಣೇಶನ ವಿಗ್ರಹವನ್ನು ಹತ್ತಿರದ ನದಿಯಲ್ಲಿ ಪೂರ್ಣ ಭಕ್ತಿಯಿಂದ ಮುಳುಗಿಸಲಾಗುತ್ತದೆ ಮತ್ತು ಈ ಸಮಾರಂಭವನ್ನು ಗಣೇಶ ವಿಸರ್ಜನೆ ಎಂದು ಕರೆಯಲಾಗುತ್ತದೆ. ಜನರು ಗಣಪನನ್ನ ನಾನಾ ಹೆಸರುಗಳಿಂದ ಕೂಗುತ್ತಾ, ಅವನ ನಾಮಾಂಕಿತವನ್ನು ಜಪಿಸುತ್ತಾರೆ, ಜೊತೆಗೆ ಮುಂದಿನ ವರ್ಷ ಬಾ ಎಂದು ಗಣೇಶನನ್ನು ಬೇಡಿಕೊಳ್ಳುತ್ತಾರೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://tv9kannada.com/spiritual/ganesh-chaturthi-2023-when-is-ganesh-chaturthi-know-about-shubh-muhurat-and-celebrations-spiritual-news-pgt-670299.html

Leave a Reply

Your email address will not be published. Required fields are marked *