ಸುಡುತ್ತಿದ್ದ ದೇಹದಿಂದ ಮಾಂಸ ಕಿತ್ತು ತಿನ್ನವ ಗ್ಯಾಂಗ್​ಸ್ಟರ್​ಗಳು; ಎಲ್ಲೆಲ್ಲೂ ಗ್ಯಾಂಗ್ ರೇಪ್, ಹಿಂಸಾಚಾರ; ಅಕ್ಷರಶಃ ನರಕವಾದ ಕೆರಿಬಿಯನ್ ದೇಶ ಹೇಟಿ.

Haiti Occupied by Cannibals, Gangsters, Rapist Gangs: ಅಮೆರಿಕದ ಕೆರಿಬಿಯನ್ ಪ್ರದೇಶದ ಪುಟ್ಟ ದೇಶ ಹೇಟಿಯಲ್ಲಿ ಈಗ ನರಕವೇ ನೆಲಸಿದೆ. ಎಲ್ಲೆಲ್ಲಿಯೂ ಅತ್ಯಾಚಾರ, ಕೊಲೆ ಇತ್ಯಾದಿ ಹಿಂಸಾಚಾರಗಳು. ಇಲ್ಲಿಯ ನಾನಾ ಕ್ರಿಮಿನಲ್ ಗ್ಯಾಂಗ್​ಗಳು ತಮ್ಮದೇ ಪಾಳ್ಯಗಾರಿಕೆ ಮೆರೆಯುತ್ತಿದ್ದಾರೆ.

ಸರ್ಕಾರ ಇದ್ದೂ ಇಲ್ಲದಂತಿದೆ. ಗ್ಯಾಂಗ್​ಸ್ಟರ್​ಗಳು ಬೆಂಕಿ ಇಟ್ಟು ಜನರನ್ನು ಸಾಯಿಸುವುದಲ್ಲದೇ ಸುಡುವ ದೇಹದಿಂದ ಮಾಂಸ ಕಿತ್ತು ತಿನ್ನುವ ಭಯಾನಕ ದೃಶ್ಯವೂ ಬೆಚ್ಚಿಬೀಳಿಸುವಂತಿದೆ.

ಕೆರಿಬಿಯನ್ ಪ್ರದೇಶದಲ್ಲಿಯ ಒಂದು ಪುಟ್ಟ ದೇಶ ಹೇಟಿ ಅಥವಾ ಹೈಟಿಯ (Haiti) ಹೆಸರು ನೀವು ಕೇಳಿರಬಹುದು. ಈ ದೇಶಕ್ಕೆ ನೀವೀಗ ಹೋದರೆ ನಗರದ ಪ್ರತ್ಯಕ್ಷ ದರ್ಶನ ಮಾಡಬಹುದು. ಸಲಾರ್, ಕೆಜಿಎಫ್ ಇತ್ಯಾದಿ ಗ್ಯಾಂಗ್​ಸ್ಟರ್ ಸಿನಿಮಾಗಳ ದೃಶ್ಯಗಳೂ ಸಪ್ಪೆ ಎನಿಸಿಬಿಡಬಹುದು. ಹೇಟಿಯಲ್ಲಿ ಸರ್ಕಾರ ಇದ್ದೂ ಇಲ್ಲದಂತಿದೆ. ಇಲ್ಲಿ ಗ್ಯಾಂಗ್​ಸ್ಟರ್​ಗಳದ್ದೇ ದರ್ಬಾರ್. ಇಲ್ಲಿ ನಿತ್ಯವೂ ಹಿಂಸಾಚಾರವೇ. ದೇಶದ ವಿವಿಧೆಡೆ ಸಮಾಜಘಾತುಕ ಶಕ್ತಿಗಳ ಗ್ಯಾಂಗ್​ಗಳು ತಮ್ಮ ಅಧಿಕಾರ ಸ್ಥಾಪಿಸಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತವೆ. ಎದುರಾಳಿ ಗ್ಯಾಂಗ್​ಗಳ ಹಿಡಿತದಲ್ಲಿರುವ ಸ್ಥಳಗಳಿಗೆ ಹೋಗಿ ಅಲ್ಲಿ ಸಾಮೂಹಿಕ ಅತ್ಯಾಚಾರ, ಕೊಲೆ, ದರೋಡೆ, ಹಿಂಸಾಚಾರ ಇತ್ಯಾದಿ ಎಸಗುತ್ತಾರೆ.

ಹೇಟಿ ನರಭಕ್ಷಕರು

ಹೇಟಿಯಲ್ಲಿ ಸಿಕ್ಕಾಪಟ್ಟೆ ಗ್ಯಾಂಗ್ ವಾರ್​ಗಳು ನಡೆಯುತ್ತಿವೆ. ತಮ್ಮ ತಮ್ಮಲ್ಲೇ ಹೊಡೆದಾಟ ಆಡಿಕೊಳ್ಳುವುದರ ಜೊತೆಗೆ ಪೊಲೀಸ್ ಸ್ಟೇಷನ್, ಏರ್​ಪೋರ್ಟ್ ಇತ್ಯಾದಿ ಜಾಗದ ಮೇಲೆ ದಾಳಿ ಮಾಡಿ ಹಿಂಸೆ ಎಸಗುತ್ತಾರೆ.

ಇವರ ದಾಳಿಯಲ್ಲಿ ಬೆಂಕಿಯಿಂದ ಸಾಯುವ ಜನರ ದೇಹದ ಮಾಂಸವನ್ನು ಕಿತ್ತು ತಿನ್ನುವ ದೃಶ್ಯಗಳು ಹೇಟಿಯಲ್ಲಿ ಸಾಮಾನ್ಯವಾಗುತ್ತಿವೆ. ಗ್ಯಾಂಗ್ ಲೀಡರ್​ಗಳು ತಮ್ಮ ದರ್ಪ ತೋರಿಸಲು ಈ ಕೆಲಸ ಮಾಡುತ್ತಾರೆ.

ಗ್ಯಾಂಗ್ ಲೀಡರ್ ಬಾರ್ಬೆಕ್ಯು

ಹೇಟಿಯಲ್ಲಿ ವಿವಿಧ ಗ್ಯಾಂಗ್​ಗಳೇ ಸೇರಿ ಗ್ರೂಪ್ ಮಾಡಿಕೊಂಡಿವೆ. ಈ ಗುಂಪಿನ ನಾಯಕನೇ ಬಾರ್ಬೆಕ್ಯೂ. ಈತನ ಹೆಸರು ಜಿಮ್ಮಿ ಶೆರಿಜಿಯರ್. 9 ಕುಖ್ಯಾತ ಗ್ಯಾಂಗ್​ಗಳನ್ನು ಸೇರಿಸಿ ಜಿ9 ಅಂಡ್ ಫ್ಯಾಮಿಲಿ ಎಂಬ ಬಲಶಾಲಿ ಗುಂಪಿನ ನಾಯಕ ಈತ. ಹೇಟಿ ದೇಶದಲ್ಲಿ ಈತನೇ ಈಗ ಅತಿ ಪ್ರಬಲ ವ್ಯಕ್ತಿ. ಪ್ರಧಾನಿಯೂ ಇವರ ಮುಂಚೆ ಏನಿಲ್ಲ. ಕುತೂಹಲ ಎಂದರೆ ಹೇಟಿ ಪ್ರಧಾನಿಯೇ ಹೆದರಿ ವಿದೇಶಕ್ಕೆ ಹೋಗಿ ಅಡಗಿದ್ದಾರೆ. ತಮ್ಮ ದೇಶಕ್ಕೆ ವಾಪಸ್ ಹೋಗಲು ಬೇರೆ ಬೇರೆ ದೇಶಗಳ ನೆರವು ಯಾಚಿಸುತ್ತಿದ್ದಾರೆ. ಅಷ್ಟರಮಟ್ಟಿಗೆ ಹೇಟಿ ಗ್ಯಾಂಗ್​ಸ್ಟರ್​ಗಳು ತಮ್ಮ ದೇಶದಲ್ಲಿ ಭಯಭೀತಿ ಸೃಷ್ಟಿ ಮಾಡಿದ್ದಾರೆ.

ಹೈಟಿ ಹಿಂಸಾಚಾರದ ಒಂದು ದೃಶ್ಯ

ಹೇಟಿಯಲ್ಲಿ ಮಿಲಿಟರಿ ಮತ್ತು ಪೊಲೀಸ್ ವ್ಯವಸ್ಥೆ ಬಹಳ ದುರ್ಬಲವಾಗಿದೆ. ಕ್ರಿಮಿನಲ್ ಗ್ಯಾಂಗ್​ಗಳನ್ನು ನಿಯಂತ್ರಣ ಮಾಡುವಷ್ಟು ಸಾಮರ್ಥ್ಯ ಈ ಸರ್ಕಾರಿ ಪಡೆಗಳಿಗೆ ಇಲ್ಲ. ವಿಪರ್ಯಾಸ ಎಂದರೆ ಇಲ್ಲಿರುವ ರಾಜಕಾರಣಿಗಳು ಒಂದಿಲ್ಲೊಂದು ಗ್ಯಾಂಗ್​​ಗಳಿಗೆ ಸಂಬಂಧಪಟ್ಟವರೇ ಎನ್ನಲಾಗುತ್ತಿದೆ. ಪೊಲೀಸರೂ ಕೂಡ ಕ್ರಿಮಿನಲ್ ಗ್ಯಾಂಗ್​ಗಳ ಜೊತೆ ಶಾಮೀಲಾಗಿ ತಟಸ್ಥರಾಗಿ ಉಳಿದುಕೊಂಡು ಬಿಟ್ಟಿದ್ದಾರೆ.

ಗ್ಯಾಂಗ್ ಲೀಡರ್ ಬಾರ್ಬೆಕ್ಯೂ ಈಗ ಹೇಟಿ ಗದ್ದುಗೆ ಹಿಡಿಯಲು ಹೊರಟಿದ್ದಾನೆ. ಬಂದೂಕಿನ ನಳಿಕೆಗಳನ್ನು ತೋರಿಸಿ, ತಾನೊಬ್ಬ ಕ್ರಾಂತಿಕಾರಿ ಎಂದು ಈತ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾನೆ. ಹೀಗೇ ಆದರೆ ಮುಂದೊಂದು ದಿನ ಈತ ಹೇಟಿ ಸರ್ವಾಧಿಕಾರಿ ಆದರೂ ಅಚ್ಚರಿ ಇಲ್ಲ.

ತಲೆಬುರುಡೆಯಿಂದ ಸ್ನಾನ ಮಾಡುತ್ತಿದ್ರು, ಈಗ ಬಾಲ ಮುದುರಿಕೊಂಡಿದ್ದಾರೆ ನೋಡಿ ಎಂದ ಎಲ್ ಸಾಲ್ವಡಾರ್

ಗ್ಯಾಂಗ್​ಸ್ಟರ್​ಗಳಿಂದ ನಲುಗಿ ಹೋಗುತ್ತಿರುವ ಹೇಟಿ ದೇಶಕ್ಕೆ ನೆರೆಯ ಎಲ್ ಸಾಲ್ವಡಾರ್ ದೇಶದ ಅಧ್ಯಕ್ಷರು ಭರವಸೆಯ ಮಾತುಗಳನ್ನಾಡಿದ್ದಾರೆ. ಹೇಟಿಯಲ್ಲಿ ಮನುಷ್ಯರ ದೇಹದ ಭಾಗಗಳನ್ನು ತಿನ್ನುತ್ತಿರುವ ಭಯಾನಕ ದೃಶ್ಯಗಳ ಬಗ್ಗೆ ಪ್ರತಿಕ್ರಿಯಿಸಿರುವ ಎಲ್ ಸಾಲ್ವಡಾರ್ ಅಧ್ಯಕ್ಷ ನಯಿಬ್ ಬುಕೆಲೆ, ತಮ್ಮ ದೇಶದ ಉದಾಹರಣೆ ಕೊಟ್ಟಿದ್ದಾರೆ.

ನಮ್ಮ ದೇಶದಲ್ಲಿ ಗ್ಯಾಂಗ್​ಗಳು ತಾವು ಸಾಯಿಸಿದ ವ್ಯಕ್ತಿಗಳ ತಲೆಬುರುಡೆಗಳಿಂದ ಸ್ನಾನ ಮಾಡುತ್ತಿದ್ದರು. ಈ ರಕ್ಕಸರು ನಮ್ಮ ಸಮಾಜದ ಭಾಗವೇ ಆದ್ದರಿಂದ ಅವರನ್ನು ಸೋಲಿಸಲು ಯಾರಿಂದಲೂ ಆಗುವುದಿಲ್ಲ ಎಂದು ಎಲ್ಲಾ ಪರಿಣಿತರು ಹೇಳಿಬಿಟ್ಟಿದ್ದರು. ಆದರೆ, ನಾವು ಅವರನ್ನು ಮಟ್ಟಹಾಕಿದೆವು. ಹೇಟಿಯಲ್ಲೂ ಅದನ್ನೇ ಮಾಡಬಹುದು ಎಂದು ನಯಿಬ್ ಬುಕೆಲೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ, ಹೇಟಿ ಕೆರೆಬಿಯನ್ ಪ್ರದೇಶದಲ್ಲಿರುವ ಮೂರನೆ ಅತಿದೊಡ್ಡ ದೇಶ. ಇಲ್ಲಿರುವ ಜನಸಂಖ್ಯೆ 1.1 ಕೋಟಿ ಇರಬಹುದು. ಹೆಚ್ಚಿನವರು ಮೂಲತಃ ಆಫ್ರಿಕಾದಿಂದ ಗುಲಾಮರಾಗಿ ಇಲ್ಲಿಗೆ ವಲಸೆ ಬಂದ ಜನಾಂಗಕ್ಕೆ ಸೇರಿದವರಾಗಿದ್ದಾರೆ.

Source:https://m.dailyhunt.in/news/india/kannada/tv9kannada-epaper-tvnkan/suduttiddha+dehadindha+maamsa+kittu+tinnava+gyaang+star+galu+ellellu+gyaang+rep+himsaachaara+aksharashh+narakavaagide+keribiyan+desha+heti-newsid-n590606232?listname=topicsList&topic=for%20you&index=1&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *