
ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ಮಹತ್ವದ ಘಟ್ಟದತ್ತ ಸಾಗುತ್ತಿದೆ. ಪ್ರತಿಯೊಂದು ಪಂದ್ಯ ಕೂಡ ಪ್ರತಿ ತಂಡಕ್ಕೆ ಪ್ರಮುಖವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಹೊರಬಿದ್ದರೆ ಪ್ಲೇ ಆಫ್ಗೇರಲು ಒಂಬತ್ತು ತಂಡಗಳು ಸೆಣೆಸಾಟ ನಡೆಸುತ್ತಿದೆ. ಶನಿವಾರ ಲಖನೌ ಸೂಪರ್ ಜೇಂಟ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ (SRH vs LSG) ವಿರುದ್ಧ ಗೆಲ್ಲುವ ಮೂಲಕ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಹೈದರಾಬಾದ್ನ ರಾಜಿವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಎಲ್ಎಸ್ಜಿ 7 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಇದರ ನಡುವೆ ಈ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಎಸ್ಆರ್ಹೆಚ್ ಅಭಿಮಾನಿಗಳು ಗೌತಮ್ ಗಂಭೀರ್ (Gautam Gambhir) ಅವರಿಗೆ ಅವಮಾನ ಆಗುವ ರೀತಿಯಲ್ಲಿ ವರ್ತಿಸಿದರು.
ಮೇ. 1 ರಂದು ಐಪಿಎಲ್ 2023 ರಲ್ಲಿ ಲಖನೌ ಸೂಪರ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯ ಮುಗಿದ ಬಳಿಕ ನಡೆದ ಘಟನೆ ಇಡೀ ಕ್ರಿಕೆಟ್ ಜಗತ್ತಿಗೆ ತಿಳಿದಿದೆ. ಇಲ್ಲಿ ಆರ್ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಲಖನೌ ತಂಡದ ಮೆಂಟರ್ ಗೌತಮ್ ಗಂಭೀರ್ ನಡುವೆ ಜಗಳ ನಡೆದಿತ್ತು. ಇದು ದೊಡ್ಡ ಮೊಟ್ಟದಲ್ಲಿ ಸದ್ದು ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಂತು ಈಗಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಹೈದರಾಬಾದ್ ಅಭಿಮಾನಿಗಳು ಗಂಭೀರ್ ಅವರ ಕಾಲೆಳೆದಿದ್ದಾರೆ.
IPL 2023: ಪ್ಲೇಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಹರ್ಭಜನ್ ಸಿಂಗ್
ಶನಿವಾರ ಎಸ್ಆರ್ಹೆಚ್ ಮತ್ತು ಲಖನೌ ಪಂದ್ಯ ಶುರುವಾಗಿ ಮೊದಲ ಇನ್ನಿಂಗ್ಸ್ ಮುಕ್ತಾಯವಾದ ಬಳಿಕ ಗಂಭೀರ್ ಅವರು ಗ್ರೌಂಡ್ನಿಂದ ತಮ್ಮ ಡಗೌಟ್ನತ್ತ ಬಂದರು. ಈ ಸಂದರ್ಭ ಹೈದರಾಬಾದ್ ಫ್ಯಾನ್ಸ್ ಜೋರಾಗಿ ವಿರಾಟ್ ಕೊಹ್ಲಿ, ವಿರಾಟ್ ಕೊಹ್ಲಿ ಎಂದು ಕೂಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಗಂಭೀರ್ ಈರೀತಿಯ ಅವಮಾನ ಅನುಭವಿಸುತ್ತಿರುವುದು ಇದೇ ಮೊದಲಲ್ಲ. ಕೊಹ್ಲಿ-ಗಂಭೀರ್ ಜಗಳದ ಬಳಿಕ ನಡೆದ ಸಿಎಸ್ಕೆ ಮತ್ತು ಎಲ್ಎಸ್ಜಿ ನಡುವಣ ಪಂದ್ಯದಲ್ಲೂ ಗಂಭೀರ್ ಅವರನ್ನು ಕಂಡು ಸಿಎಸ್ಕೆ ಫ್ಯಾನ್ಸ್ ಕೊಹ್ಲಿ, ಕೊಹ್ಲಿ ಎಂದು ಕೂಗಿದ್ದರು.
First RCB fans
– Then CSK fans
– Now SRH fans chanting Kohli Kohli infront of gambhir#SRHvLSG pic.twitter.com/gCjKPGQbHp
— Priyanshu (@PriyanshuVK18K) May 13, 2023
ಎಸ್ಆರ್ಹೆಚ್ ಹಾಗೂ ಎಲ್ಎಸ್ಜಿ ನಡುವಣ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತು. ತಂಡದ ಪರ ಹೆನ್ರಿಚ್ ಕ್ಲಾಸೆನ್ 29 ಎಸೆತಗಳಲ್ಲಿ 47 ರನ್ ಬಾರಿಸಿದರೆ, ಅಬ್ದುಲ್ ಸಮದ್ 37 ಹಾಗೂ ಅನ್ಮೊಲ್ಪ್ರೀತ್ ಸಿಂಗ್ 36 ರನ್ಗಳ ಕೊಡುಗೆ ನೀಡಿದರು. ಟಾರ್ಗೆಟ್ ಬೆನ್ನಟ್ಟಿದ ಲಖನೌ 19.2 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 185 ರನ್ ಸಿಡಿಸಿ ಗೆಲುವು ಕಂಡಿತು. ಪ್ರೇರಕ್ ಮಂಕಡ್ 45 ಎಸೆತಗಳಲ್ಲಿ ಅಜೇಯ 64 ರನ್ ಸಿಡಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತಿಮ ಹಂತದಲ್ಲಿ ನಿಕೋಲಸ್ ಪೂರನ್ ಕೇವಲ 13 ಎಸೆತಗಳಲ್ಲಿ ಅಜೇಯ 44 ರನ್ ಚಚ್ಚಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ