ದಕ್ಷಿಣ ಭಾರತದ 10 ತಾಣಗಳಿಗೆ ಈ ಬೇಸಿಗೆ ರಜೆಯಲ್ಲಿ ಭೇಟಿ ನೀಡಲು ಸಜ್ಜಾಗಿ!

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರವಾಸಿ ತಾಣಗಳು ಹೇರಳವಾಗಿವೆ. ಈ ರಾಜ್ಯಗಳ ಹತ್ತು ಪ್ರಮುಖ ತಾಣಗಳನ್ನು ಈ ಲೇಖನದಲಿ ಸ್ಥೂಲವಾಗಿ ನೀಡಲಾಗಿದೆ.

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಇವುಗಳು, ಪ್ರವಾಸಿಗರಿಗೆ ಭೇಟಿ ನೀಡಲು ಅತ್ಯಂತ ಯೋಗ್ಯವಾದ ತಾಣಗಳನ್ನು ತಮ್ಮಲ್ಲಿ ಒಳಗೊಂಡಿವೆ. ಭಾರತದ ದಕ್ಷಿಣ ಭಾಗದಲ್ಲಿ ಸಾಂಸ್ಕೃತಿಕ ಮತ್ತು ಪರಂಪರೆಯನ್ನು ಹೇರಳವಾಗಿ ಕಾಣಬಹುದಾಗಿದೆ. ಕರಾವಳಿ ಮತ್ತು ಇನ್ನಿತರ ನೈಸರ್ಗಿಕ ಸಂಪತ್ತುಗಳ ಜೊತೆಗೆ ಈ ರಾಜ್ಯಗಳು ತಮ್ಮಲ್ಲಿ ಹಲವಾರು ಪ್ರವಾಸಿ ತಾಣಗಳನ್ನೂ ಹೊಂದಿದೆ. ಸಂಸ್ಕೃತಿ, ಭಾಷೆ, ಜನ, ಮತ್ತು ವೈವಿಧ್ಯತೆಗಳಲ್ಲಿ ಪ್ರತಿ ರಾಜ್ಯಗಳೂ ತಮ್ಮದೇ ಆದಂತಹ ವಿಭಿನ್ನತೆಯನ್ನು ಹೊಂದಿವೆ. ಇಷ್ಟು ಮಾತ್ರವಲ್ಲದೆ ದೇವಾಲಯಗಳು ದಕ್ಷಿಣ ಭಾರತದ ಒಂದು ಪ್ರಮುಖ ಅಂಗವೆನ್ನಬಹುದಾಗಿದೆ. ನೀವೇನಾದರೂ ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡಬೇಕೆಂದು ಯೋಚಿಸುತ್ತಿರುವಿರಿ ಎಂದಾದಲ್ಲಿ, ನಾವು ನಿಮಗಾಗಿ ಇಲ್ಲಿಯ ಹತ್ತು ಹೆಸರಾಂತ ಪ್ರವಾಸಿ ಸ್ಥಳಗಳ ಪಟ್ಟಿ ಮಾಡಿದ್ದೇವೆ

ಹಂಪಿ

ಹಂಪಿ

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಹಂಪಿಯು ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿದೆ. ಹಂಪೆಯ ಅವಶೇಷಗಳನ್ನು ಸಾರುವ ದೇವಾಲಯಗಳು ವಿಶ್ವದಾದ್ಯಂತದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತವೆ. ಬೇರೆಯೇ ಜಗತ್ತಿನ ಅನುಭವ ಕೊಡುವಂತಹ ಹಲವಾರು ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಒಂದು ಕಾಲದಲ್ಲಿ ಆಳಿದ ರಾಜರುಗಳ ಸಂಸ್ಕೃತಿ, ಇತಿಹಾಸ ಇತ್ಯಾದಿಗಳನ್ನು ಕಲಿಯಲು ಮತ್ತು ಇಲ್ಲಿಯ ಅವಶೇಷಗಳನ್ನು ವೀಕ್ಷಿಸಲು ಜಗತ್ತಿನಾದ್ಯಂತದ ಪ್ರವಾಸಿಗರು ಬರುತ್ತಾರೆ. ಇಲ್ಲಿ ಕೇವಲ ಅವಶೇಷಗಳನ್ನು ಕಾಣಲು ಮಾತ್ರವಲ್ಲದೆ, ಇಲ್ಲಿಯ ಕಲ್ಲುಬಂಡೆಗಳ ಬೆಟ್ಟಗಳು ಸಾಹಸ ಚಟುವಟಿಕೆಗಳನ್ನು ಹುಡುಕಿ ಬರುವವರಿಗೆ ಅತ್ಯಂತ ಸೂಕ್ತವಾದುದಾಗಿದೆ. ಇವೆಲ್ಲಾ ಕಾರಣಗಳಿಂದಾಗಿ ಹಂಪಿಯು ದಕ್ಷಿಣ ಭಾರತದ ಪ್ರವಾಸಿ ಪಟ್ಟಿಯಲ್ಲಿ ಅಗ್ರಮಾನ್ಯವಾಗಿದೆ.

ರಾಮೇಶ್ವರಂ ಮತ್ತು ಧನುಷ್ಕೋಡಿ

ರಾಮೇಶ್ವರಂ ಮತ್ತು ಧನುಷ್ಕೋಡಿ

ರಾಕ್ಷಸ ರಾಜ ರಾವಣನಿಂದ ಸೀತೆಯನ್ನು ರಕ್ಷಿಸುವ ಸಲುವಾಗಿ ಭಗವಾನ್ ಹನುಮಂತನು ರಾಮೇಶ್ವರದಲ್ಲಿ ಸೇತುವೆಯನ್ನು ನಿರ್ಮಿಸಿರುವುದು ನಮ್ಮ ಪುರಾಣದಲ್ಲಿ ಉಲ್ಲೇಖವಾಗಿದೆ. ರಾಮೇಶ್ವರದಲ್ಲಿರುವ ರಾಮನಾಥಸ್ವಾಮಿ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಇಲ್ಲಿಯ ಪವಿತ್ರ ನೀರಿನಲ್ಲಿ ಸ್ನಾನ ಮಾಡುವುದನ್ನು ಕಾಣಬಹುದಾಗಿದೆ. ಇಲ್ಲಿ ಒಂದು ಪಾಳು ಬಿದ್ದ ಪಟ್ಟಣವನ್ನು ಕಾಣಬಹುದು 1964 ರಲ್ಲಿ ಬಂದ ಚಂಡಮಾರುತದಲ್ಲಿ ಈ ಪಟ್ಟಣವು ಸಂಪೂರ್ಣವಾಗಿ ನಾಶವಾಗಿದ್ದರೂ ಸಹ ಪಟ್ಟಣದ ಅಳಿದುಳಿದ ಸುತ್ತಮುತ್ತಲಿನ ಪರಿಸರವು ಭೇಟಿ ನೀಡುವವರನ್ನು ಆಕರ್ಷಿಸುತ್ತದೆ. ನೀವೇನಾದರು ಪುರಾಣ ಮತ್ತು ಪ್ರಕೃತಿಯ ಸಮ್ಮಿಶ್ರಣಗಳನ್ನು ಒಟ್ಟಿಗೆ ಅನುಭವಿಸಬೇಕಿದ್ದಲ್ಲಿ, ತಮಿಳುನಾಡಿನ ಈ ಕರಾವಳಿ ಪಟ್ಟಣಗಳಿಗೆ ಭೇಟಿ ಕೊಡಿ.

ಕೂರ್ಗ್

ಕೂರ್ಗ್

ಕರ್ನಾಟಕದಲ್ಲಿ ಕೊಡಗು ಎಂದು ಜನಪ್ರಿಯವಾಗಿರುವ ಇದು, ದಟ್ಟವಾದ ಕಾಡುಗಳು, ವನ್ಯಜೀವಿಗಳು ಮತ್ತು ರಮಣೀಯ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಮಳೆಗಾಲದಲ್ಲಿ ನೀವು ಇಲ್ಲಿಗೆ ಭೇಟಿ ನೀಡಿದರೆ, ನಿಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸುತ್ತವೆ. ಇಲ್ಲಿನ ಪರ್ವತಗಳಿಂದ ಬೀಳುವ ಹಲವಾರು ಜಲಪಾತಗಳು ನಿಮ್ಮನ್ನು ಬೆರಗುಗೊಳಿಸುತ್ತದೆ. ಮಡಿಕೇರಿಯು ಮಧುಚಂದ್ರಕ್ಕೆ ಹೋಗುವ ದಂಪತಿಗಳಿಗೆ ದಕ್ಷಿಣ ಭಾರತದ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದ್ದು, ಅದರ ನೈಸರ್ಗಿಕ ದೃಶ್ಯಗಳು ಮತ್ತು ಸಾಹಸಮಯ ಅನುಭವವನ್ನು ನೀಡುತ್ತದೆ. ಮೈಸೂರು ಅಥವಾ ಬೆಂಗಳೂರಿನ ಮೂಲಕ ನೀವು ಸುಲಭವಾಗಿ ಈ ಸ್ಥಳವನ್ನು ತಲುಪಬಹುದು ಮತ್ತು ಈ ಪ್ರದೇಶದಲ್ಲಿ ಕಂಡುಬರುವ ಹಲವಾರು ಕಾಫಿ ಎಸ್ಟೇಟ್‌ಗಳಲ್ಲಿ ತಿರುಗಾಡುತ್ತಾ, ಅದರ ಮೂಲಕ ನಿಮ್ಮ ಮನಸ್ಸನ್ನು ರಿಫ್ರೆಶ್ ಮಾಡಿಕೊಳ್ಳಬಹುದು.

ಗೋಕರ್ಣ

ಗೋಕರ್ಣ

ಕರ್ನಾಟಕ ರಾಜ್ಯದಲ್ಲಿರುವ ಗೋಕರ್ಣವು ಒಂದು ಸಣ್ಣ ಪಟ್ಟಣವಾಗಿದೆ ಈ ಪಟ್ಟಣಕ್ಕೆ ಸ್ಥಳೀಯ ರೈಲುಗಳಿಂದ ಮತ್ತು ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಈ ಪಟ್ಟಣವು ಗೋವಾದ ಅನುಭವವನ್ನು ಕೊಡುತ್ತದೆ. ಆದರೆ, ಇಲ್ಲಿ ನೀವು ಆಹಾರ ಮತ್ತು ವಸತಿ ಸೌಲಭ್ಯವನ್ನು ಕಡಿಮೆ ಖರ್ಚಿನಲ್ಲಿಯೇ ಪೂರೈಸಿಕೊಳ್ಳಬಹುದಾಗಿದೆ. ಗೋಕರ್ಣ ಸಮುದ್ರ ಕಿನಾರೆಗಳಲ್ಲಿ ಅಡ್ಡಾಡಲು ಬರುವ ಹಲವಾರು ವಿದೇಶಿಗರನ್ನು ಕಾಣಬಹುದು. ಈ ಜಾಗಕ್ಕೆ ಸಂಬಂಧಪಟ್ಟ ಪುರಾಣ ಕಥೆ ಹೇಳುವ ಹಾಗೆ ದಾನವ ರಾಜ ರಾವಣನಿಂದ ಆತ್ಮಲಿಂಗವನ್ನು ಪಡೆದ ನಂತರ ಗಣೇಶ ದೇವರು ಆ ಲಿಂಗವನ್ನು ಸ್ಥಾಪಿಸಿದ ಸ್ಥಳವಿದು ಎಂದು ನಂಬಲಾಗುತ್ತದೆ. ಆದುದರಿಂದ ಈ ಸ್ಥಳವು ಹಿಂದು ಭಕ್ತರಿಗೆ ಪ್ರಸಿದ್ದ ಯಾತ್ರಾ ಸ್ಥಳಗಳಲ್ಲೊಂದಾಗಿದೆ. ಪ್ಯಾರಡೈಸ್ ಬೀಚ್, ಓಂ ಬೀಚ್, ಕುಡ್ಲೆ ಬೀಚ್ ಮುಂತಾದ ಭಾರತದ ಕೆಲವು ಅತ್ಯುತ್ತಮ ಬೀಚ್‌ಗಳು ಗೋಕರ್ಣದ ಪಕ್ಕದಲ್ಲಿವೆ. ಬೇಸಿಗೆಯಲ್ಲಿ ನೀವು ಗೋಕರ್ಣಕ್ಕೆ ಭೇಟಿ ನೀಡುವುದನ್ನು ತಪ್ಪಿಸಬೇಕು ಏಕೆಂದರೆ ವರ್ಷದ ಈ ಭಾಗದಲ್ಲಿ ಅದು ತುಂಬಾ ಬಿಸಿಯಾಗಿರುತ್ತದೆ ಮತ್ತು ಆರ್ದ್ರವಾಗಿರುತ್ತದೆ.

ಹೈದರಾಬಾದ್

ಹೈದರಾಬಾದ್

ದಕ್ಷಿಣ ಭಾರತದಲ್ಲಿ ಭೇಟಿ ನೀಡಲು ಮತ್ತೊಂದು ಉತ್ತಮವಾದ ಸ್ಥಳವೆಂದರೆ ಅದು ಹೈದರಾಬಾದ್. ತೆಲಂಗಾಣದ ರಾಜಧಾನಿಯಾಗಿರುವ ಇದು ತನ್ನ ಇಸ್ಲಾಮಿಕ್ (ಮುಸಲ್ಮಾನ) ಪರಂಪರೆ ಮತ್ತು ಐತಿಹಾಸಿಕ ತಾಣಗಳಿಗೆ ಇದು ಹೆಸರುವಾಸಿಯಾಗಿದೆ. ಹೈದರಾಬಾದ್ ನಲ್ಲಿ ಪ್ರವಾಸಿಗರಿಗೆ ಭೇಟಿ ಕೊಡಲು ಬೇಕಾದಷ್ಟು ಸ್ಥಳಗಳನ್ನು ನಾವು ಕಾಣಬಹುದಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಚಾರ್ ಮಿನಾರ್ , ಸಲಾರ್ಜಂಗ್ ಮ್ಯೂಸಿಯಂ, ಬಿರ್ಲಾ ತಾರಾಲಯ, ಗೋಲ್ಕೊಂಡ ಕೋಟೆ, ಇತ್ಯಾದಿಗಳು. ಇಲ್ಲಿಯ ಚಾಂದೀ ಚೌಕ್ ಅಥವಾ ಲಾಡ್ ಬಜಾರ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ ಇನ್ನಷ್ಟು ಆನಂದಿಸಬಹುದಾಗಿದೆ. ನಿಮ್ಮ ಪ್ರೀತಿಪಾತ್ರರಿಗೆ ಬೇಕಾದಂತಹ ಅಲಂಕಾರಿಕ ಸಾಧನಗಳನ್ನು ಖರೀದಿಸಬಹುದಾಗಿದೆ. ಇವೆಲ್ಲದರ ಜೊತೆಗೆ ಹೈದರಾಬಾದಿನ ಬಿರಿಯಾನಿ ಮತ್ತು ಇನ್ನಿತರ ರುಚಿಕರ ತಿನಿಸುಗಳನ್ನು ಸವಿಯಲು ಮರೆಯದಿರಿ!.

ಹೈದರಾಬಾದ್ ದೇಶದ ಎಲ್ಲಾ ಭಾಗಗಳಿಗೆ ರೈಲು, ವಿಮಾನ ಮತ್ತು ರಸ್ತೆ ಮಾರ್ಗಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ಮುನ್ನಾರ್

ಮುನ್ನಾರ್

ಭೂಮಿಯ ಮೇಲೆ ಸ್ವರ್ಗ ಇದೆ ಎಂದಾದರೆ ಅದು ನಿಜವಾಗಿಯೂ ಕೇರಳದ ಮುನ್ನಾರ್‌ನಲ್ಲಿ ಎನ್ನಬಹುದು! ಹೌದು ಇದು ಅಕ್ಷರಸಶಃ ನಿಜ. ಈ ವಾಕ್ಯವನ್ನು ಇಲ್ಲಿಗೆ ಭೇಟಿ ನೀಡಿರುವ ಪ್ರವಾಸಿಗರಿಂದಲೇ ಕೇಳಿದುದಾಗಿದೆ. ಕೇರಳದ ಪಶ್ಚಿಮಘಟ್ಟಗಳಲ್ಲಿ ನೆಲೆಸಿರುವ ಮುನ್ನಾರ್ ಗಿರಿಧಾಮವು ದಕ್ಷಿಣ ಭಾರತದ ಒಂದು ಅತ್ಯಂತ ಉತ್ತಮವಾದ ಮತ್ತು ಕಡಿಮೆ ಅನ್ವೇಷಿತ ಸ್ಥಳವಾಗಿದೆ. ಇಲ್ಲಿಗೆ ಭೇಟಿ ನೀಡುವ ಸಂದರ್ಶಕರು ಇನ್ಸ್ಟಾಗ್ರಾಂ ಮತ್ತು ಇನ್ನಿತರ ಸಾಮಾಜಿಕ ಮಾಧ್ಯಮಗಳು ಮತ್ತು ಜಾಲತಾಣಗಳಲ್ಲಿ ಇಲ್ಲಿಯ ಬಗೆಗಿನ ವಿಷಯಗಳನ್ನು ಹಂಚಿಕೊಳ್ಳುವುದರ ಮೂಲಕ ಇದು ಇಂದು ಜನಪ್ರಿಯವಾಗುತ್ತಿದೆ. ಇಲ್ಲಿನ ಚಹಾ ತೋಟಗಳು ಮತ್ತು ಹಚ್ಚ ಹಸಿರಿನ ಕಾಡುಗಳು ಆನಂದದಾಯಕ ಅನುಭವವನ್ನು ನೀಡುತ್ತವೆ. ಅಲ್ಲದೆ, ಇಲ್ಲಿ ಆದರೆ ನೀಲಗಿರಿ ತಾಹ್ರ್ ಮತ್ತು ನೀಲಕುರಿಂಜಿಯಂತಹ ಕೆಲವು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಜೊತೆಗೆ ಇನ್ನಿತರ ವನ್ಯಜೀವಿಗಳನ್ನೂ ವೀಕ್ಷಿಸಬಹುದು. ಇವೆಲ್ಲವುಗಳ ಮಿಶ್ರಣವಾಗಿರುವ ಮುನ್ನಾರ್ ಒಂದು ಅದ್ಬುತವಾದ ಪ್ರವಾಸಿ ತಾಣಗಳಲ್ಲೊಂದೆನಿಸಿದೆ.

ಪೆರಿಯಾರ್

ಪೆರಿಯಾರ್

ಕೇರಳದ ಮಸಾಲೆ ಗ್ರಾಮ ಎಂದೇ ಜನಪ್ರಿಯತೆಗಳಿಸಿರುವ ಪೆರಿಯಾರ್ ಗ್ರಾಮವು ತನ್ನ ಸರಳತೆ ಮತ್ತು ಸೌಂದರ್ಯತೆಯಿಂದ ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. ನೀವು ಇಲ್ಲಿಯ ಯಾವುದಾದರೊಂದು ಕಲಾತ್ಮಕವಾಗಿರುವ ಕಾಟೇಜ್ ನಲ್ಲಿ ತಂಗಿ, ಈ ಸ್ಥಳದ ಮಸಾಲೆ ಮತ್ತು ರುಚಿಕರವಾದ ಪಾಕ ಪದ್ದತಿಗಳನ್ನು ಅನ್ವೇಷಿಸಬಹುದು. ಇಲ್ಲಿರುವ ಕಾಟೇಜುಗಳು ಈಜುಕೊಳ ಮತ್ತು ಬಾರ್‌ನಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ನಗರದ ಒತ್ತಡಭರಿತ ಜೀವನ ಶೈಲಿ ಮತ್ತು ಮಾಲಿನ್ಯಗಳಿಂದ ಬೇಸತ್ತ ಜನರಿಗೆ ಈ ಸ್ಥಳವು ಪರಿಪೂರ್ಣ ರಜಾದಿನಗಳನ್ನು ಕಳೆಯುವಂತಹ ತಾಣವಾಗಿದೆ.ವಿವಿಧ ಜಾತಿಯ ಕಾಡು ಪ್ರಾಣಿಗಳನ್ನು ವೀಕ್ಷಿಸಲು ನೀವು ಪೆರಿಯಾರ್ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಬಹುದು.

ಊಟಿ

ಊಟಿ

ದಟ್ಟವಾದ ಹಸಿರು ಉದ್ಯಾನವನಗಳು, ಇಳಿಜಾರಿನಲ್ಲಿ ಚಾಚಿರುವ ಚಹಾ ತೋಟಗಳು, ಇವೆಲ್ಲವುಗಳನ್ನು ತನ್ನಲ್ಲಿ ಹೊಂದಿರುವ ಊಟಿಯು ಸ್ವರ್ಗಸದೃಶವಾಗಿದೆ ಎನ್ನಬಹುದಾಗಿದೆ. ಇಲ್ಲಿ ಭೇಟಿ ಕೊಡುವವರಿಗೆ ಒಂದು ಉತ್ತಮವಾದ ಅನುಭವವನ್ನು ನೀಡುತ್ತದೆ. ಹನಿಮೂನ್‌ಗಾಗಿ ಬರುವ ಜೋಡಿಗಳಿಗೆ ಊಟಿಯು ತನ್ನ ನೈಸರ್ಗಿಕ ಸೌಂದರ್ಯತೆ ಮತ್ತು ಪ್ರಶಾಂತವಾದ ವಾತಾವರಣದಿಂದ ಮಂತ್ರಮುಗ್ದರನ್ನಾಗಿಸುವಲ್ಲಿ ಎರಡು ಮಾತಿಲ್ಲ. ಇಲ್ಲಿನ ರೆಸಾರ್ಟ್‌ಗಳಲ್ಲಿ ವಿಶ್ರಾಂತಿ ಪಡೆಯುವಾಗ ನಿಮ್ಮಲ್ಲಿ ಲವಲವಿಕೆಯನ್ನು ಉಂಟು ಮಾಡಲು ಇಲ್ಲಿನ ಚಹಾಗಳನ್ನು ಪ್ರಯತ್ನಿಸಬಹುದಾಗಿದೆ. ಊಟಿಯಲ್ಲಿ ಬೊಟಾನಿಕಲ್ ಗಾರ್ಡನ್‌ಗಳು ಮತ್ತು ಚರ್ಚ್‌ಗಳು ಭೇಟಿಗೆ ಯೋಗ್ಯವಾದ ಸ್ಥಳಗಳಾಗಿವೆ. ಇಲ್ಲಿ ನೀವು ಬೋಟಿಂಗ್ ಮತ್ತು ಕುದುರೆ ಸವಾರಿಯನ್ನೂ ಸಹ ಆನಂದಿಸಬಹುದು.

ಮುದುಮಲೈ

ಮುದುಮಲೈ

ಮುದುಮಲೈ ರಾಷ್ಟ್ರೀಯ ಉದ್ಯಾನವನವು ತಮಿಳುನಾಡಿನಲ್ಲಿ ನೆಲೆಸಿದೆ. ಈ ಸ್ಥಳವು ಹಲವಾರು ಕಾರಣಗಳಿಂದಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲೊಂದಾಗಿದೆ.ಈ ರಾಷ್ಟೀಯ ಉದ್ಯಾನವನದಲ್ಲಿ ಹಲವಾರು ಅಪರೂಪದ ತಳಿಯ ಹೂವುಗಳು ಮತ್ತು ಗಿಡಮೂಲಿಕೆಗಳನ್ನು ಕಾಣಬಹುದಾಗಿದೆ. ಅಲ್ಲದೆ, ಹಲವಾರು ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಒಳಗೊಂಡಂತೆ ವನ್ಯಜೀವಿಗಳು ಹೇರಳವಾಗಿ ಕಾಣಸಿಗುತ್ತದೆ ಮತ್ತು 200ಕ್ಕೂ ಹೆಚ್ಚಿನ ವಿವಿಧ ಪ್ರಭೇದದ ಪಕ್ಷಿಗಳನ್ನು ಕಾಣಬಹುದಾಗಿದೆ. ಪಕ್ಷಿಗಳನ್ನು ವಿಧವಿಧ ಜಾತಿಯ ಪಕ್ಷಿಗಳನ್ನು ವೀಕ್ಷಿಸಲು ಇದು ಅತ್ಯಂತ ಉತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ 34 ಕ್ಕೂ ಹೆಚ್ಚು ಬಗೆಯ ಸರೀಸೃಪಗಳಿದ್ದು ಇಲ್ಲಿಯ ಪಕ್ಕದಲ್ಲಿ ಹರಿಯುವ ಸರೋವರಗಳು ಮತ್ತು ನದಿಗಳ ಪಕ್ಕದಲ್ಲಿ ತೆವಳುತ್ತವೆ ಇದು ನಿಮಗೆ ಸ್ಪೂಕಿ ಮತ್ತು ಸಾಹಸಮಯ ಅನುಭವವನ್ನು ಒದಗಿಸುತ್ತದೆ. ಮುದುಮಲೈನಲ್ಲಿ ಹಲವಾರು ಜಲಪಾತಗಳಿದ್ದು, ಅವು ಮಾನ್ಸೂನ್ ಸಮಯದಲ್ಲಿ ಸುಂದರವಾಗಿರುತ್ತವೆ. ಹೀಗೆ, ನೀವು ದಕ್ಷಿಣ ಭಾರತದಲ್ಲಿ ಉತ್ತಮ ಪ್ರವಾಸಿ ತಾಣಗಳಿಗೆ ಪ್ರವಾಸ ಪಟ್ಟಿಯನ್ನು ರಚಿಸುತ್ತಿದ್ದಲ್ಲಿ ಮುದುಮಲೈಯನ್ನು ಸೇರಿಸಲು ಮರೆಯಬೇಡಿ!

ಯಳಗಿರಿ

ಯಳಗಿರಿ

ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿ ನೆಲೆಸಿರುವ ಯಳಗಿರಿಯು ಪ್ರಕೃತಿ ಸ್ವರ್ಗವೆಂದು ಪರಿಗಣಿಸಲಾಗಿದೆ. ಮನಮೋಹಕ ಉದ್ಯಾನವನಗಳು ಮತ್ತು ತೋಟಗಳು ಹಚ್ಚಹಸುರಿನ ಕಣಿವೆಯ ಇಳಿಜಾರುಗಳಲ್ಲಿ ನೆಲೆಸಿವೆ. ಪಾದಯಾತ್ರೆ ಮತ್ತು ಚಾರಣವನ್ನು ಅನುಭವಿಸಲು ಇಚ್ಚಿಸುವ ಸಾಹಸಿಗರಿಗೆ ಇದು ಅದ್ಬುತವಾದ ಸ್ಥಳವಾಗಿದೆ. ಇಲ್ಲಿರುವ ಪುಂಗನೂರು ಸರೋವರವು ಮಾನವ ನಿರ್ಮಿತ ಸರೋವರವಾಗಿದ್ದು, ಪ್ರತಿ ತಿಂಗಳು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ ಹಾಗೂ ಇದು ಒಂದು ಉತ್ತಮ ಪಿಕ್ನಿಕ್ ಸ್ಥಳವಾಗಿದೆ. ಬೇಸಿಗೆಯಲ್ಲಿ, ಶ್ವಾನ ಪ್ರದರ್ಶನ ಮತ್ತು ಪುಷ್ಪ ಪ್ರದರ್ಶನ ಸೇರಿದಂತೆ ತಮಿಳುನಾಡು ಪ್ರವಾಸೋದ್ಯಮ ಇಲಾಖೆಯಿಂದ ಅನೇಕ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *