“ಎದ್ದೇಳು ಕರ್ನಾಟಕ ತಂಡ ಸಂವಿಧಾನ ಯಾನ”

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಸಾಣೇಹಳ್ಳಿ; ಏಪ್ರಿಲ್ ೭; ಇಂದು ಬೆಂಗಳೂರಿನಿಂದ ದೇಶ ಉಳಿಸುವ ಮಹಾಯಾನ ಆಂದೋಲನ ಭಾಗವಾಗಿ “ಎದ್ದೇಳು ಕರ್ನಾಟಕ ತಂಡ ಸಂವಿಧಾನ ಯಾನ” ಈ ಸಂಘಟನೆಯ ಅನೇಕ ಸದಸ್ಯರು ಸಾಣೇಹಳ್ಳಿಗೆ ಬಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆಯ ಬಗ್ಗೆ ಗಂಭೀರವಾದ ಚಿಂತನೆಯನ್ನು ನಡೆಸಿದರು. ಅಷ್ಟೇ ಅಲ್ಲ; ಇವತ್ತು ಇಡೀ ದೇಶದಲ್ಲಿ ಭ್ರಷ್ಟತೆ ತಾಂಡವವಾಡುತ್ತಿದೆ.

ರಾಜಕೀಯ ಕ್ಷೇತ್ರ ಕುಲಗೆಟ್ಟು ಹೋಗ್ತಾ ಇದೆ. ಇದನ್ನು ಸುಧಾರಣೆ ಮಾಡಲಿಕ್ಕೆ ತಾವು ಇತ್ತೀಚಿಗೆ ಅನೇಕ ಪ್ರಯೋಗಗಳನ್ನು ಮಾಡ್ತಾ ಇರುವಂಥದ್ದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ನಾವು ನೀವು ಸೇರಿ ಇಂತಹ ಕಾರ್ಯಕ್ರಮಗಳನ್ನು ಮಾಡಿದರೆ ಇನ್ನು ಒಳ್ಳೆಯ ಕೆಲಸ ಕಾರ್ಯಗಳನ್ನು ಸಮಾಜದಲ್ಲಿ ಮಾಡಲಿಕ್ಕೆ ಉತ್ತಮ ಆಡಳಿತವನ್ನು ತರಲಿಕ್ಕೆ, ಅನ್ಯಾಯವನ್ನು ಪ್ರತಿಭಟನೆ ಮಾಡಲಿಕ್ಕೆ ಸಹಕಾರಿಯಾಗುತ್ತದೆ ಎನ್ನುವ ಆಶಯವನ್ನಿಟ್ಟುಕೊಂಡು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಜೊತೆಗೆ ಮುಕ್ತವಾಗಿ ಚರ್ಚೆ ಮಾಡಿದರು. ಚರ್ಚೆಯಲ್ಲಿ ನೂರ್‌ಶ್ರೀಧರ್, ತಾರಾರಾವ್, ವೀರಸಂಗಯ್ಯ, ಮಲ್ಲಿಗೆ ಸಿರಿಮನೆ, ಗಿರಿಜಾ, ಮುನ್ನಾರವರು ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ಭಾಗವಹಿಸಿದ್ದರು.


 
 ೨೬ ಏಪ್ರಿಲ್ ೨೦೨೫ರ ಶನಿವಾರದಂದು ದಾವಣಗೆರೆಯಲ್ಲಿ ನಡೆಯಲಿರುವ `ಸಂವಿಧಾನ ಸಂರಕ್ಷಕರ ಸಮಾವೇಶ’ಕ್ಕೆ ತಮ್ಮ ಬೆಂಬಲ ಹಾಗೂ ಮಾರ್ಗದರ್ಶನ ಇರಲಿ ಎಂದು ಕೋರಿದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *