ಜಾಗತಿಕ ಮಟ್ಟದಲ್ಲಿ ಸರ್ಕಾರಿ ಸಾಲದ ಬರೆ ಹೆಚ್ಚುತ್ತಿರುವ ಪರಿಸ್ಥಿತಿಯನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತನ್ನ ಅಕ್ಟೋಬರ್ 2025 ನವೀಕರಣ ವರದಿಯಲ್ಲಿ ಹೊರಹಾಕಿದೆ. ಪ್ರಸ್ತುತ ವಿಶ್ವದ ಒಟ್ಟು ಸಾರ್ವಜನಿಕ ಸಾಲವು ಜಾಗತಿಕ ಜಿಡಿಪಿಯ 94.7 ಪ್ರತಿಶತಕ್ಕೆ ಏರಿಕೆಯಾಗಿರುವುದು, ಸಾಂಕ್ರಾಮಿಕ ಪೂರ್ವದ ಗರಿಷ್ಠ ಮಟ್ಟದತ್ತ ಮರುಪ್ರವೇಶಿಸುತ್ತಿರುವುದನ್ನು ಸೂಚಿಸುತ್ತದೆ. 2020ರಲ್ಲಿ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಅನಪಾತ 98.9 ಪ್ರತಿಶತಕ್ಕೆ ತಲುಪಿತ್ತು.
ಜಪಾನ್ ದೇಶವು 229.6 ಪ್ರತಿಶತ ಸಾಲ-ಜಿಡಿಪಿ ಅನುಪಾತದೊಂದಿಗೆ ಅತ್ಯಂತ ಸಾಲಗಾರ ರಾಷ್ಟ್ರವಾಗಿ ಪಟ್ಟಿ ಗೇರಿದೆ. ಸುಡಾನ್ 221.5 ಪ್ರತಿಶತ ಮತ್ತು ಸಿಂಗಾಪುರ 175.6 ಪ್ರತಿಶತ ಅನುಪಾತದೊಂದಿಗೆ ಮುಂದಿನ ಸ್ಥಾನಗಳಲ್ಲಿಿವೆ. ಗ್ರೀಸ್, ಬಹ್ರೇನ್, ಇಟಲಿ, ಮಾಲ್ಡೀವ್ಸ್, ಅಮೆರಿಕಾ, ಸೆನೆಗಲ್ ಮತ್ತು ಫ್ರಾನ್ಸ್ ಮೊದಲ ಹತ್ತು ರಾಷ್ಟ್ರಗಳಲ್ಲಿ ಸೇರಿವೆ.
ಚೀನಾದ ಸಾರ್ವಜನಿಕ ಸಾಲ 96.3 ಪ್ರತಿಶತವಾಗಿದ್ದು 21ನೇ ಸ್ಥಾನದಲ್ಲಿದೆ. ಭಾರತದ ಸಾಲ 81.4 ಪ್ರತಿಶತವಾಗಿದ್ದು ಜಾಗತಿಕ ಕ್ರಮದಲ್ಲಿ 35ನೇ ಸ್ಥಾನ ಪಡೆದಿದೆ. ವಿಶ್ವ ಆರ್ಥಿಕತೆಯ ವಿವಿಧ ಹಂತಗಳಲ್ಲಿ ಬೆಳವಣಿಗೆ ನಿಧಾನಗತಿಯಾದರೂ, ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೆರಡೂ ಸಾಲದ ಅವಲಂಬನೆ ಹೆಚ್ಚುತ್ತಿರುವುದು ಈ ವರದಿ ಸೂಚಿಸುವ ಮೂಲ ಬದಲಾವಣೆಯಾಗಿದೆ.