Global Liveability Index: ಜಗತ್ತಿನಲ್ಲಿ ವಾಸಿಸಲು 5 ಅತ್ಯುತ್ತಮ ನಗರಗಳು ಯಾವುವು ಗೊತ್ತೆ?

Global Liveability Index 2023: ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ಗ್ಲೋಬಲ್ ಲಿವಬಿಲಿಟಿ ಇಂಡೆಕ್ಸ್ (GLI) ನಲ್ಲಿ ಮೊದಲ ಸ್ಥಾನದಲ್ಲಿದೆ. ಸತತ 2ನೇ ಬಾರಿಗೆ ಇದು ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರ ಎನಿಸಿಕೊಂಡಿದೆ.

ನವದೆಹಲಿ: ಗ್ಲೋಬಲ್ ಲಿವಬಿಲಿಟಿ ಇಂಡೆಕ್ಸ್ (GLI) ಅನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಜಗತ್ತಿನ ಅತ್ಯಂತ ವಾಸಯೋಗ್ಯ ನಗರಗಳು ಯಾವವು ಅಥವಾ ಇಲ್ಲವೆಂದು ಹೇಳಲಾಗಿದೆ. ಇದರಲ್ಲಿ ವೈದ್ಯಕೀಯ ಸೌಲಭ್ಯಗಳು, ಶಿಕ್ಷಣ, ಸಂಸ್ಕೃತಿ, ಮನರಂಜನೆ, ಮೂಲಸೌಕರ್ಯ ಇತ್ಯಾದಿಗಳನ್ನು ಆಧಾರವಾಗಿಸಲಾಯಿತು. ಈ ವರ್ಷ ಜಾಗತಿಕ ಸರಾಸರಿ ಸ್ಕೋರ್ ಕಳೆದ 15 ವರ್ಷಗಳಲ್ಲಿ ಅತ್ಯಧಿಕವಾಗಿದೆ. ಅಗ್ರ 5 ನಗರಗಳ ಪಟ್ಟಿಯು ಮುಖ್ಯವಾಗಿ ಯುರೋಪ್ ಮತ್ತು ಆಸ್ಟ್ರೇಲಿಯಾದ ನಗರಗಳನ್ನು ಒಳಗೊಂಡಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ಗ್ಲೋಬಲ್ ಲಿವಬಿಲಿಟಿ ಇಂಡೆಕ್ಸ್ (GLI) ನಲ್ಲಿ ಮೊದಲ ಸ್ಥಾನದಲ್ಲಿದೆ. ಸತತ 2ನೇ ಬಾರಿಗೆ ಇದು ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರ ಎನಿಸಿಕೊಂಡಿದೆ. ಇದರ GLI ಸ್ಕೋರ್ 98.4 ಅಂಕಗಳು.

ಡೆನ್ಮಾರ್ಕ್‌ನ ರಾಜಧಾನಿ ಕೋಪನ್ ಹ್ಯಾಗನ್ ವಿಶ್ವದ 2ನೇ ಅತ್ಯಂತ ವಾಸಯೋಗ್ಯ ನಗರವಾಗಿದೆ. ಇದರ GLI ಸ್ಕೋರ್ 98 ಅಂಕಗಳು. ಗ್ಲೋಬಲ್ ಲಿವಬಿಲಿಟಿ ಇಂಡೆಕ್ಸ್ (ಜಿಎಲ್‌ಐ), ವೈದ್ಯಕೀಯ ಸೌಲಭ್ಯಗಳು, ಶಿಕ್ಷಣ, ಸಂಸ್ಕೃತಿ, ಮನರಂಜನೆ, ಮೂಲಸೌಕರ್ಯ ಇತ್ಯಾದಿಗಳ ಆಧಾರದ ಮೇಲೆ ಪ್ರತಿ ನಗರಕ್ಕೆ 100 ಅಂಕಗಳನ್ನು ನೀಡಲಾಗಿದೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇದರ GLI ಸ್ಕೋರ್ 97.7 ಆಗಿದೆ. ಕೋವಿಡ್-19 ನಂತರ ಇಲ್ಲಿನ ವೈದ್ಯಕೀಯ ಸೌಲಭ್ಯಗಳಲ್ಲಿ ಅಪಾರ ಸುಧಾರಣೆಯಾಗಿದೆ.

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸಿಡ್ನಿ ನಗರ 4ನೇ ಸ್ಥಾನದಲ್ಲಿದೆ. ಸಿಡ್ನಿಯ GLI ಸ್ಕೋರ್ 97.4 ಆಗಿದೆ. ಆರೋಗ್ಯ ಸೌಲಭ್ಯಗಳು, ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳ ಆಧಾರದ ಮೇಲೆ ಸಿಡ್ನಿ ಈ ಅಂಕಗಳನ್ನು ಪಡೆದಿದೆ.

ಕೆನಡಾದ ವ್ಯಾಂಕೋವರ್ ಗ್ಲೋಬಲ್ ಲಿವಬಿಲಿಟಿ ಇಂಡೆಕ್ಸ್‌ನಲ್ಲಿ 5ನೇ ಸ್ಥಾನದಲ್ಲಿದೆ. ಇದರ GLI ಸ್ಕೋರ್ 97.3 ಆಗಿದೆ. ವೈವಿಧ್ಯತೆಯ ಪ್ರಕಾರ ಇದು ಕೆನಡಾದ ಮುಖ್ಯ ನಗರವಾಗಿದೆ.

Source : https://zeenews.india.com/kannada/photo-gallery/these-are-the-5-best-cities-to-live-in-the-world-see-full-list-145802/global-liveability-index-2023-full-list-145803

Leave a Reply

Your email address will not be published. Required fields are marked *