ದೇವರೊಬ್ಬನೆ ನಾಮ ಹಲವು ; ದೇವರಿಗೆ ಜಾತಿ ಮುಖ್ಯವಲ್ಲ,ಭಕ್ತಿ ಮುಖ್ಯ : ಡಿ.ಸುಧಾಕರ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 08 :  ಭಗವಂತನ ಸೇವೆಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವುದರ ಮೂಲಕ ಭಗವಂತನನ್ನು ಒಲಿಸಿಕೊಳ್ಳಬಹುದಾಗಿದೆ. ನಮ್ಮ ಭಕ್ತಿಗೆ ಮೆಚ್ಚಿ ಭಗವಂತನೇ ಆರ್ಶೀವಾದವನ್ನು ಮಾಡಲಿದ್ದಾನೆ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ರಜತಾ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವದಡಿಯಲ್ಲಿ ಭಾನುವಾರ ರಾತ್ರಿಯ ಹಮ್ಮಿಕೊಂಡಿದ್ದ ದ್ವೀತೀಯ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶ ಸಾಧು ಸಂತರ ಬೀಡಾಗಿದೆ ಇಲ್ಲಿ ಎಲ್ಲಾ ಧರ್ಮ, ಜಾತಿ, ಜನಾಂಗದವರು ಸಹಬಾಳ್ವೆಯಿಂದ ಬದುಕನ್ನು ನಡೆಸುತ್ತಿದ್ದಾರೆ. ನಮ್ಮಗೆಲ್ಲಾ ದೇವರು ಒಬ್ಬನೆ ಆದರೆ ಆತನ ನಾಮಗಳು ಮಾತ್ರ ಹಲವು ಎಂದು ಇತಿಹಾಸದ ಪುಟದಿಂದ ತಿಳಿಯಲಾಗಿದೆ. ಒಂದೊಂದು ಸಮಾಜದವರು ಒಂದು ಹೆಸರಿನಲ್ಲಿ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ ಆತನನ್ನು ಆರಾಧಿಸುತ್ತಾರೆ. ಅಯ್ಯಪ್ಪ ಎಲ್ಲಾ ಜನಾಂಗದವರಿಗೂ ಸಹಾ ದೇವರಾಗಿದ್ದಾನೆ, ಇಲ್ಲಿ ಜಾತಿ ಮುಖ್ಯವಲ್ಲ ಭಕ್ತಿ ಮುಖ್ಯವಾಗಿದೆ ಎಂದರು.

ಭಾರತ ದೇಶ ಧಾರ್ಮಿಕ ತಳ ಹದಿಯ ಮೇಲೆ ನಿಂತಿರುವ ದೇಶವಾಗಿದೆ. ಇಡಿ ದೇಶದಲ್ಲಿ ಭಗವಂತನನ್ನು ಆಪಾರವಾಗಿ ನಂಬುತ್ತೇವೆ. ಅದು ಹಲವಾರು ದೇವರುಗಳಿವೆ. ಎಲ್ಲಾ ಧರ್ಮಗಳು ಒಂದೇ ಅದೇ ರೀತಿ ಹಿರಿಯರು, ಧರ್ಮಗಳು ಹೇಳುವುದು ಶಾಂತಿ ಮತ್ತು ಅಹಿಂಸೆಯನ್ನು ಅಯ್ಯಪ್ಪಸ್ವಾಮಿ ವಿಶೇಷವಾದ ಶಕ್ತಿಯನ್ನು ಹೊಂದಿದ ಭಗವಂತನಾಗಿದ್ದಾನೆ. ಭಗವಂತನ ಸೇವೆಯನ್ನು ಯಾರು ನಿಸ್ವಾರ್ಥವಾಗಿ ಯಾವುದೇ ಫಲವನ್ನು ಆಪೇಕ್ಷೆ ಮಾಡದೇ ಮಾಡುತ್ತಾರೋ ಅವರಿಗೆ ಭಗವಂತ ಆರ್ಶೀವಾದವನ್ನು ಮಾಡುತ್ತಾನೆ. ಚಿತ್ರದುರ್ಗ ಅಯ್ಯಪ್ಪ ಸ್ವಾಮಿ ಮಂಡಳಿಯವರು ಶ್ರದ್ದೇ ,ಭಕ್ತಿಯಿಂದ 25ವರ್ಷದವರೆಗೂ ಸೇವೆಯ ಮೂಲಕ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯವಾದದ್ದು, ಮುಂದಿನ ದಿನದಲ್ಲಿ ಭಕ್ತರ ಹಾಗೂ ಭಗವಂತನ ಕೆಲಸವನ್ನು ಮಾಡಲಿ ಎಂದು ಆಶಿಸಿದ ಸಚಿವರು ಭಗವಂತ ಮುಂದಿನ ದಿನಮಾನದಲ್ಲಿ ಒಳ್ಳೆಯ ಮಳೆ-ಬೆಳೆಯನ್ನು ನೀಡಲಿ  ಸಂಕಷ್ಟಗಳನ್ನು ದೂರ ಮಾಡಲಿ ಎಂದು ಸುಧಾಕರ್ ತಿಳಿಸಿದರು.

ದಿ ಮರ್ಚೆಂಟ್ಸ್ ಬ್ಯಾಂಕ್‍ನ ಅಧ್ಯಕ್ಷರಾದ ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಈ ರೀತಿಯಾದ ಕಾರ್ಯಕ್ರಮಗಳನ್ನು ನಡೆಸಲು ಆಡಳಿತ ಮಂಡಳಿಯವರು ಶ್ರಮ ಹಾಕುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಯಿಂದ ರಾಜ್ಯದಲ್ಲಿ ಚಿತ್ರದುರ್ಗದ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಹೆಸರಾಗಿದೆ. ಪ್ರತಿ ವರ್ಷ ಅಯ್ಯಪ್ಪ ಮಾಲೆಯನ್ನು ಹಾಕಿದ ಭಕ್ತಾಧಿಗಳಿಗೆ ಟ್ರಸ್ಟ್‍ನವರು ಅನ್ನದಾನ ಮಾಡುವುದರ ಮೂಲಕ ಅಯ್ಯಪ್ಪಸ್ವಾಮಿಯ ಸೇವೆಯನ್ನು ಮಾಡುತ್ತಿದ್ದಾರೆ. ಭಕ್ತಾಧಿಗಳ ಸಹಾಯ ಸಹಕಾರದಿಂದ ಈ ಕಾರ್ಯ ಕಳೆದ 25 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೆಶಕರಾದ ದ್ಯಾಮಣ್ಣ ಮಾತನಾಡಿ, ನಾವೆಲ್ಲರೂ ಭಗವಂತನ ಆರಾಧಕರು ಆತನ ಆರಾಧನೆ ಮಾಡುವುದರ ಮೂಲಕ ಆತನ ಪ್ರೀತಿಗೆ ಭಕ್ತಾಧಿಗಳು ಪಾತ್ರವಾಗಬೇಕಿದೆ. ಕಳೆದ 25 ವರ್ಷದ ಹಿಂದೆ ಪ್ರಾರಂಭವಾದ ಈ ದೇವಾಲಯ ಇಂದು ಹೆಮ್ಮರವಾಗಿ ಬೆಳೆದಿದೆ. ಸಂಕ್ರಾಂತಿಯಂದು ಇಲ್ಲಿ ನಡೆಯುವ ಕಾರ್ಯಕ್ರಮ ಜನ ಮನ್ನಣೆಯನ್ನು ಪಡೆದಿದೆ. ರಾ.ಹೆ.4 ರಿಂದ ದೇವಾಲಯಕ್ಕೆ ಬರುವ ದಾರಿ ಇಕ್ಕಾಟಾಗಿದೆ ಅದನ್ನು ಅಗಲ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಎಸ್.ಆರ್ .ಎಸ್.ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್.ಲಿಂಗಾರೆಡ್ಡಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೆಶಕರಾದ ನಿಶಾನಿ ಜಯ್ಯಣ್ಣ, ಟಿ.ಮಹಾಂತೇಶ್, ಗುರುರಾಜ ಫರ್ನಿಚರ್ಸ್‍ನ ಎಸ್.ಎನ್.ಕಾಶಿವಿಶ್ವನಾಥ್ ಶ್ರೇಷ್ಟಿ, ಮೇದೇಹಳ್ಳಿ ಗ್ರಾ.ಪಂ.ಸದಸ್ಯರಾದ ನಿರಂಜನಮೂರ್ತಿ, ದುಗ್ಗಪ್ಪ, ಮೊತ್ಕೂರ್‍ರಮೇಶ್, ಮಾಜಿ ಅಧ್ಯಕ್ಷರಾದ ವಿಜಯ ಕುಮಾರ್, ವಿನಾಯಕ ಪೇಂಟ್ಸ್‍ನ ಹರೀಶ್, ಶ್ರೀರಾಮ ಆಯಿಲ್‍ಮಿಲ್‍ನ ಮೋಹನ್‍ರಾಜ್ ಚಳ್ಳಕೆರೆಯ ರಘು,  ಮಲ್ಲಿಕಾರ್ಜನ ಸ್ವಾಮಿ, ಮೋಹನ್ ಕುಮಾರ್, ಚಂದ್ರಶೇಖರ್, ಸೂರಪ್ಪ, ಮಂಜುನಾಥ್, ಪ್ರಧಾನ ಅರ್ಚಕರಾದ ಸತೀಶ್ ಶರ್ಮ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ದಿವ್ಯ ರಾಮಚಂದ್ರ ಪ್ರಾರ್ಥಿಸಿದರೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಶರಣ್ ಕುಮಾರ್ ಸ್ವಾಗತಿಸಿದರು, ಸಮಿತಿಯ ಕಾರ್ಯದರ್ಶಿ ವೆಂಕಟೇಶ್ ವಂದಿಸಿದರು, ಯಶವಂತ ಕಾರ್ಯಕ್ರಮ ನಿರೂಪಿಸಿದರು.  ಭಾನುವಾರ ಬೆಳಿಗ್ಗೆ ಚೋರಶಾಂತಿ ಹೋಮ, ತತ್ವ ಕಳಶ ಪೂಜೆ, ತತ್ವ ಹೋಮ, ಕಳಶ ಅಭಿಷೇಕ, ಬ್ರಹ್ಮ ಕಳಸ ಪೂಜೆ ಪರಿಕಳಶ ಪೂಜೆ ಹಾಗೂ ಸಂಜೆ ನವಗ್ರಹ ಸಹಿತ ಶ್ರೀ ರುದ್ರಹೋಮ ಪೂರ್ಣಾಹುತಿ ಮಹಾ ಮಂಗಳಾರತಿ ನೆರವೇರಿತು. ಶ್ರೀ ಹರ್ಷ ರಾಜಗೋಪಾಲ್,ಪಾಜೇಶ್ ಭಾಗವತ್‍ರವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ದಿನಾಂಕ 9-7-2024ರ ಬೆಳ್ಳಿಗೆ 6ಕ್ಕೆ ಸಂಹಾರ ತತ್ವ ಕಳಸ ಪೂಜೆ, ಕುಂಭೇಷ ಪೂಜೆ, ಪ್ರತಿಷ್ಠಾ ಹೋಮ, ಸಂಹಾರ ತತ್ವ ಕಳಶಾಭೀಷೇಕ ಜೀವಕಳಸ ಪೂಜೆ, ಜೀವೋದ್ವಾಸನೆ, ಲಕ್ಷ್ಮಿನಾರಾಯಣ ಹೃದಯ ಹೋಮ ಹಾಗೂ ಪೂರ್ಣಾವತಿ ಮಹಾ ಮಂಗಳಾರತಿ ಪೂಜಾ ನೆರವೇರುವುದು. ಸಂಜೆ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ಹಾಗೂ ಪೂರ್ಣಾಹುತಿ ಮಹಾಮಂಗಳಾರತಿ ನಡೆಯಲಿದೆ.

6.30ರ ಸಭಾ ಕಾರ್ಯ ಕ್ರಮವನ್ನು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ರಾಜ್ಯಾಧ್ಯಕ್ಷರಾದ ಎನ್.ಜಯರಾಂ ನೇರವೇರಿಸಲಿದ್ದು, ಜ್ಯೋತಿಯನ್ನು ಶಾಸಕರಾದ ಕೆ.ಸಿ.ವಿರೇಂದ್ರ ರವರು ಬೆಳಗಲಿದ್ದಾರೆ. ಮಹೇಶ್ ಮೋಟಾರ್ಸ್‍ನ ಮಲ್ಲಿಕಾರ್ಜನ ಸ್ವಾಮಿ, ಅನುಪಮ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಸ್,ಬಾಸ್ಕರ್, ನಗರಾಭೀವೃದ್ದಿನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಟಿ.ಬದರಿನಾಥ್, ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಆರ್,ಮಂಜುನಾಥ್, ಗ್ರಾ.ಪಂ.ಮಾಜಿ ಅದ್ಯಕ್ಷರಾದ ಎನ್.ಕುಮಾರ್, ವರ್ತಕರಾದ ಜಿ.ಆರ್ ಪ್ರತಾಪ್ ರೆಡ್ಡಿ,  ಕಾಂಗ್ರೆಸ ಮುಖಂಡರಾಧ ಕೆಸಿ.ನಾಗರಾಜ್, ಶ್ರೀ ರಾಮ ಕಲ್ಯಾಣ ಮಂಟಪದ ಆರ್,ತೇಜಸ್ವಿ, ಇಂಜಿನಿಯರ್ ಎಂ.ಕೆ.ರವೀಂದ್ರ, ಸಾಯಿ ಡೆವೆಲಪರ್ಸ್‍ನ ಜ್ಞಾನೇಶ್ ಬಾಬು, ಮೇದೇಹಳ್ಳಿ ಗ್ರಾ.ಪಂ.ಅಧ್ಯಕ್ಷರಾದ ಜಯರಾಮರೆಡ್ಡಿ, ಎ.ಸಿ.ಕೆ.ಗ್ರೂಪ್ಸ್ ನ ಟಿ.ಅಂಜಿನಿ ಭಾಗವಹಿಸಲಿದ್ದಾರೆ. ಭಕ್ತಿಕುಸುಮಾಂಜಲಿಯಲ್ಲಿ ಮಂಗಳೂರಿನ ಶ್ರೀ ಅಯ್ಯಪ್ಪ ಯಕ್ಷಗಾನ  ಕೊಕ್ಕರಣೆ ಮೇಳ  ಇವರಿಂದ ಯಕ್ಷಗಾನ ನೆರವೇರುವುದು.

Leave a Reply

Your email address will not be published. Required fields are marked *