ಇಲ್ಲಿ ಅಗ್ಗದ ಬೆಲೆಗೆ ಖರೀದಿಸಬಹುದು ಬಂಗಾರ ! 27ರಿಂದ 30 ಸಾವಿರ ರೂಪಾಯಿಗೆ ಸಿಗುವುದು 10 ಗ್ರಾಂ ಚಿನ್ನ !

Gold Price : ಈ ಷರತ್ತುಗಳನ್ನು ಪೂರೈಸುವ ಮೂಲಕ, 22 ಕ್ಯಾರೆಟ್ 10 ಗ್ರಾಂ ಚಿನ್ನವನ್ನು 27 ರಿಂದ 30 ಸಾವಿರ ರೂಪಾಯಿಗಳ ಬೆಲೆಗೆ ಖರೀದಿಸಬಹುದು.

Gold Price : ಚಿನ್ನವೆಂದರೆ ಭಾರತೀಯರಿಗೆ ಅಚ್ಚುಮೆಚ್ಚು. ಬಂಗಾರದ ಮೇಲೆ ಭಾರತೀಯರು ಹೂಡಿಕೆ ಮಾಡುವುದು ಹೆಚ್ಚು. ದೇಶವು ತನ್ನ ಚಿನ್ನದ ಬೇಡಿಕೆಯ ಶೇಕಡಾ 90 ಕ್ಕಿಂತ ಹೆಚ್ಚು ಆಮದುಗಳ ಮೂಲಕ ಪೂರೈಸುತ್ತದೆ. 2022 ರಲ್ಲಿ ಸುಮಾರು 706 ಟನ್ ಚಿನ್ನವನ್ನು ವಿದೇಶದಿಂದ ತರಲಾಯಿತು. 2022 ರಲ್ಲಿ, ಸುಮಾರು  36.6 ಶತಕೋಟಿ ಡಾಲರ್ ಚಿನ್ನದ  ಖರೀದಿಗೆ ಖರ್ಚು ಮಾಡಲಾಗಿದೆ.  ಇನ್ನು ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 61,000 ರೂ. ಆಗಿದೆ. ಆದರೆ, ಈಗ ಭಾರತೀಯರು ಅಗ್ಗದ ಬೆಲೆಯಲ್ಲಿ ಚಿನ್ನವನ್ನು ಖರೀದಿಸಬಹುದು.

ತೆರಿಗೆ ಮುಕ್ತ ಚಿನ್ನ : 
ಫುಯೆನ್‌ಶೋಲಿಂಗ್ ಅಥವಾ ಥಿಂಪುಗೆ ಭೇಟಿ ನೀಡುವ ಭಾರತೀಯರಿಗೆ ಚಿನ್ನವನ್ನು ತೆರಿಗೆ ಮುಕ್ತವಾಗಿ ಖರೀದಿಸಲು ಭೂತಾನ್ ಅನುಮತಿ ನೀಡಿದೆ. ಭೂತನ್ ಪ್ರವಾಸಿಗರಿಗೆ 20 ಗ್ರಾಂ ಡ್ಯೂಟಿ-ಫ್ರೀ ಚಿನ್ನವನ್ನು ಖರೀದಿಸಲು ಅನುಮತಿ ನೀಡಲು ಪ್ರಾರಂಭಿಸಿದೆ. ಅಧಿಕೃತವಾಗಿ, ಭೂತಾನ್ ಪ್ರವಾಸೋದ್ಯಮ ಇಲಾಖೆಯು ಭೂತಾನ್ ಡ್ಯೂಟಿ-ಫ್ರೀ (BDF) ಸಹಭಾಗಿತ್ವದಲ್ಲಿ ಸುಂಕ-ಮುಕ್ತ ಚಿನ್ನವನ್ನು ನೀಡಲು ಪ್ರಾರಂಭಿಸಿದೆ. 

ಅಗ್ಗದ ಬೆಲೆಯಲ್ಲಿ ಚಿನ್ನ : 
ಅನೇಕ ಭಾರತೀಯರು ಚಿನ್ನವನ್ನು ಖರೀದಿಸಲು ದುಬೈಗೆ ಹೋಗುತ್ತಾರೆ  ಅಲ್ಲಿ ಚಿನ್ನವು ತುಲನಾತ್ಮಕವಾಗಿ ಅಗ್ಗವಾಗಿದೆ. ಆದರೆ, ಈಗ ಭೂತಾನ್‌ನಿಂದಲೂ ಅಗ್ಗದ ಬೆಲೆಯಲ್ಲಿ ಚಿನ್ನವನ್ನು ಖರೀದಿಸಬಹುದು. ಭಾರತೀಯರಿಗೆ ಅಗ್ಗದ ಚಿನ್ನವನ್ನು ನೀಡುವ ಮೂಲಕ ಭೂತಾನ್ ತನ್ನ ಪ್ರವಾಸೋದ್ಯಮ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ವಿದೇಶಿ ವಿನಿಮಯವನ್ನು ಗಳಿಸಲು ಪ್ರಯತ್ನಿಸುತ್ತಿದೆ. ಕೆಲವು ಮೂಲಭೂತ ಮಾನದಂಡಗಳನ್ನು ಪೂರೈಸುವ ಮೂಲಕ ಭಾರತೀಯ ಪ್ರವಾಸಿಗರು ಈಗ ಭೂತಾನ್‌ನಲ್ಲಿ 20 ಗ್ರಾಂ ಚಿನ್ನವನ್ನು ಖರೀದಿಸಬಹುದು. 

ಈ ಷರತ್ತುಗಳನ್ನು ಪೂರೈಸಬೇಕಾಗಿದೆ : 
ಪ್ರವಾಸಿಗರು ಭೂತಾನ್‌ನಲ್ಲಿ ಸುಂಕ ರಹಿತ ಅಂಗಡಿಗಳಿಂದ ಚಿನ್ನವನ್ನು ಖರೀದಿಸುವ ಮೊದಲು ಕೆಲವು ಮೂಲಭೂತ ಷರತ್ತುಗಳನ್ನು  ಪೂರೈಸಬೇಕಾಗುತ್ತದೆ. ಪ್ರವಾಸಿಗರು SDF ಅನ್ನು ಪಾವತಿಸಬೇಕಾಗುತ್ತದೆ.  ಪ್ರವಾಸೋದ್ಯಮ ಇಲಾಖೆಯ ಮೂಲಕ ಪ್ರಮಾಣೀಕರಿಸಿದ ಹೋಟೆಲ್‌ನಲ್ಲಿ ಕನಿಷ್ಠ ಒಂದು ರಾತ್ರಿಯನ್ನು ಕಳೆದಿದ್ದಾರೆ  ಎನ್ನುವುದಕ್ಕೆ ಸಾಕ್ಷಿಯಾಗಿ ರಸೀದಿಯನ್ನು ಒದಗಿಸಬೇಕು. ಇದಲ್ಲದೇ, US ಡಾಲರ್‌ಗಳಲ್ಲಿ ಪಾವತಿಯನ್ನು ಮಾಡಬೇಕಾಗುತ್ತದೆ. ಈ ಷರತ್ತುಗಳನ್ನು ಪೂರೈಸುವ ಮೂಲಕ, 22 ಕ್ಯಾರೆಟ್ 10 ಗ್ರಾಂ ಚಿನ್ನವನ್ನು ಭೂತಾನ್‌ನಿಂದ 
27 ರಿಂದ 30 ಸಾವಿರ ರೂಪಾಯಿಗಳ ಬೆಲೆಗೆ ಖರೀದಿಸಬಹುದು.

Source : https://zeenews.india.com/kannada/business/buy-gold-at-27-to-30-thousand-know-how-149188

Leave a Reply

Your email address will not be published. Required fields are marked *